Gruhalakshmi Scheme: ತಿಂಗಳಾಗುತ್ತಾ ಬಂದ್ರೂ ಗೃಹಲಕ್ಷ್ಮೀ ಹಣ ಬಂದಿಲ್ವಾ? ಹಾಗಿದ್ದರೆ ಈ ಕೂಡಲೇ ಈ ದಾಖಲೆ ಸರಿ ಪಡಿಸಿ

Gruhalakshmi scheme update who hasn't received the gruhalakshmi money correct these documents

Gruhalakshmi Scheme: ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಅಡಿಯಲ್ಲಿ ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ತಿಂಗಳಿಗೆ 2,000 ರೂಪಾಯಿಯನ್ನು ಈಗಾಗಲೇ ಯಜಮಾನಿಯರ ಖಾತೆಗೆ ಸರ್ಕಾರವು ಹಣ ಜಮಾ ಮಾಡುತ್ತಿದೆ. ಆದರೆ ಕೆಲವರ ಖಾತೆಗೆ ಹಣ ಜಮಾ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಕೆಲವು ಮಹಿಳೆಯರ ಖಾತೆಗೆ ಇನ್ನೂ ಹಣ ಜಮಾ ಆಗಿಲ್ಲ.

ಕೆಲವು ಮಹಿಳೆಯರ ಪ್ರಕಾರ ನಮಗೆ SMS ಬಂದಿಲ್ಲ ಹೀಗಾಗಿ ನಮ್ಮ ಅರ್ಜಿ ಸಲ್ಲಿಕೆ ಯಶಸ್ವಿಯಾಗಿದೆಯೋ ಅಥವಾ ತಡೆಹಿಡಿಯಲಾಗಿದೆಯೋ ಅಥವಾ ರದ್ದಾಗಿದೆಯೋ ಎಂಬ ಗೊಂದಲದಲ್ಲಿದ್ದಾರೆ. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಗೃಹಲಕ್ಷ್ಮಿ ಹಣ ಬರದೇ ಇರಬಹುದು.

ನೀವು ಅರ್ಜಿ ಸಲ್ಲಿಸಲು ಹೋಗಿದ್ದರೂ ಕೂಡ ಒಂದು ವೇಳೆ ತಾಂತ್ರಿಕವಾಗಿ ನಿಮ್ಮ ಅರ್ಜಿ ಸಲ್ಲಿಕೆ ಆಗದೆ ಇರಬಹುದು. ಅಂತಹ ಮಹಿಳೆಯರು ಈ ಎಲ್ಲಾ ದಾಖಲೆಗಳನ್ನು ಸರಿಪಡಿಸಿಕೊಂಡರೆ ಖಂಡಿತ ಹಣ ಬರುತ್ತದೆ.

>ಮುಖ್ಯವಾಗಿ ನಿಮ್ಮ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ವಿವರಗಳಲ್ಲಿ ಮಾಹಿತಿಗಳು ಹೊಂದಾಣಿಕೆ ಆಗಿರಬೇಕು, ಅಥವಾ ಹೆಸರುಗಳಲ್ಲಿ ಏನಾದರೂ ತಪ್ಪಿದ್ದರೆ ಸರಿಪಡಿಸಿಕೊಳ್ಳಿ.

> ಮುಖ್ಯವಾಗಿ ಗೃಹಲಕ್ಷ್ಮಿ ಹಣ ಬರದೇ ಇರುವ ಮಹಿಳೆಯರು 8147500500 ಈ ನಂಬರ್ ಗೆ ನಿಮ್ಮ ರಜಿಸ್ಟರ್ಡ್ ಮೊಬೈಲ್ ನಂಬರ್ ನಿಂದ ಒಂದು ಮೆಸೆಜ್ ಕಳುಹಿಸಿ. 8147500500 ನಂಬರ್ ಗೆ ನಿಮ್ಮ ರೇಷನ್ ಕಾರ್ಡ್ ನಂಬರ್ ನ್ನು ಮೆಸೆಜ್ ಮಾಡಿ. ಹೀಗೆ ಮೆಸೆಜ್ ಮಾಡಿದ ತಕ್ಷಣ ನಿಮ್ಮ ಪಡಿತರ ಚೀಟಿ ಸಂಖ್ಯೆ ಆಧರಿಸಿ ನಿಮ್ಮ ಗೃಹಲಕ್ಷ್ಮೀ ಯೋಜನೆಯ ಭವಿಷ್ಯ ಏನಾಗಿದೆ ಎಂಬ ಮಾಹಿತಿಯ ಸಂದೇಶ ಬರಲಿದೆ.

> ಇನ್ನು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆ ಎನ್ನುವುದನ್ನು ದೃಢಪಡಿಸಿಕೊಳ್ಳಿ. ಆಧಾರ್ ಲಿಂಕ್ ಸೀಡಿಂಗ್ ಆಗಿ NPCI ಮ್ಯಾಪಿಂಗ್ ಕೂಡ ಆಗಿರಬೇಕು.

>ಕೆಲವೊಮ್ಮೆ ಮಹಿಳೆಯರ ಖಾತೆಗಳನ್ನು ಬಳಕೆ ಮಾಡದ ಕಾರಣಕ್ಕಾಗಿ ಅಕೌಂಟ್ ಕ್ಲೋಸ್ ಆಗಿರುತ್ತದೆ . ಆದ್ದರಿಂದ ಎರರ್ ಬರಬಹುದು. ಆದ್ದರಿಂದ ಹಣ ಬಾರದ ಮಹಿಳೆಯರು ಕೂಡಲೇ ತಮ್ಮ ಪಾಸ್ ಪುಸ್ತಕದೊಂದಿಗೆ ಬ್ಯಾಂಕ್ ತೆರಳಿ ಈ ಬಗ್ಗೆ ಪರಿಶೀಲನೆ ಮಾಡಿ.

> ನೀವು ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ ಚೆಕ್ ಮಾಡಿ,ನಿಮ್ಮ ರೇಷನ್ ಕಾರ್ಡ್ ಗೆ KYC ಅಪ್ಲೇಟ್ ಆಗಿದೆ ಎಂಬುದನ್ನು ತಿಳಿದುಕೊಳ್ಳಿ. ಆಗದೇ ಇದ್ದಲ್ಲಿ ಕೂಡಲೇ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಹೋಗುವ ಮೂಲಕ KYC ಅಪ್‌ಡೇಟ್ ಮಾಡಿಸಿಕೊಳ್ಳಿ.

ಇನ್ನು ಕೆಲವರಿಗೆ ತಮ್ಮ ಬ್ಯಾಂಕ್ ಖಾತೆಗಳಿಗೆ ಹಣ ಬಂದರೂ SMS ಬಂದಿರುವುದಿಲ್ಲ. ಆದ್ದರಿಂದ ಬ್ಯಾಂಕ್ ಸ್ಟೇಟ್ ಮೆಂಟ್ ಮೊದಲು ಚೆಕ್ ಮಾಡುವುದು ಉತ್ತಮ.

ಇದನ್ನು ಓದಿ: ಹೆಂಡತಿಯ ಹೆರಿಗೆಯನ್ನು ಕಂಡ ಪತಿ – ಅಸ್ವಸ್ಥನಾಗಿ ಪರಿಹಾರಕ್ಕೆ ಇಟ್ಟ ಬರೋಬ್ಬರಿ 72 ಲಕ್ಷ ಬೇಡಿಕೆ !! ಕಾರಣ ಕೇಳಿದ್ರೆ ನೀವೇ ಶಾಕ್

Leave A Reply

Your email address will not be published.