Home latest ಉಪ್ಪಿನಂಗಡಿ: ಪ್ರಶ್ನೆ ಪತ್ರಿಕೆ ಕದಿಯಲೆಂದು ಕಾಲೇಜಿಗೆ ಕನ್ನ ಹಾಕಿದ ಕಳ್ಳರಿಗೆ ಸಿಕ್ಕಿದ್ದೇನು!??

ಉಪ್ಪಿನಂಗಡಿ: ಪ್ರಶ್ನೆ ಪತ್ರಿಕೆ ಕದಿಯಲೆಂದು ಕಾಲೇಜಿಗೆ ಕನ್ನ ಹಾಕಿದ ಕಳ್ಳರಿಗೆ ಸಿಕ್ಕಿದ್ದೇನು!??

Hindu neighbor gifts plot of land

Hindu neighbour gifts land to Muslim journalist

ಉಪ್ಪಿನಂಗಡಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ಷಿಕ ಪರೀಕ್ಷೆ ನಡೆಯುತ್ತಿರುವ ಬೆನ್ನಲ್ಲೇ ಕಳ್ಳರು ತಮ್ಮ ಕೈಚಳಕ ಮೆರೆದ ಘಟನೆಯೊಂದು ಬೆಳಕಿಗೆ ಬಂದಿದೆ.

ಕಾಲೇಜಿನ ಕೆಮಿಸ್ಟ್ರಿ ಲ್ಯಾಬ್ ಕೊಠಡಿಯ ಬೀಗ ಮುರಿದು ಒಳನುಗ್ಗಿದ ಕಳ್ಳರ ತಂಡ ಕೊಠಡಿಯ ಬಾಗಿಲು ಮುರಿಯುವ ಪ್ರಯತ್ನ ನಡೆಸಿ ವಿಫಲರಾಗಿದ್ದಾರೆ ಎನ್ನಲಾಗಿದೆ.

ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಶ್ನೆ ಪತ್ರಿಕೆ ಜೋಡಿಸಿ ಇಡಲಾಗಿದ್ದ ಕೊಠಡಿಯ ಕವಾಟಿನ ಕೀಲಿ ಕೈ ಪ್ರಾಚಾರ್ಯರ ಬಳಿಯೇ ಇದ್ದ ಹಿನ್ನೆಲೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಲು ಇದ್ದ ಅವಕಾಶ ತಪ್ಪಿ ಹೋಗಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಶ್ನೆ ಪತ್ರಿಕೆ ಕದಿಯಲೆಂದೇ ಕಳ್ಳರ ತಂಡ ಬಂದಿರಬಹುದು ಎಂದು ಅಂದಾಜಿಸಲಾಗಿದ್ದು, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಾಲೇಜಿನ ಪ್ರಾಚಾರ್ಯರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.