Home Breaking Entertainment News Kannada Upasana Konidela : ಮೆಗಾ ಸೊಸೆಗೆ ಆಘಾತಕಾರಿ ಸುದ್ದಿ!

Upasana Konidela : ಮೆಗಾ ಸೊಸೆಗೆ ಆಘಾತಕಾರಿ ಸುದ್ದಿ!

Hindu neighbor gifts plot of land

Hindu neighbour gifts land to Muslim journalist

ರಾಮ್ ಚರಣ್ ಪತ್ನಿ ಉಪಾಸನಾ ಕಾಮಿನೇನಿ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಸದ್ಯ ಉಪಾಸನಾರವರು ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ರಾಮ್ ಚರಣ್-ಉಪಾಸನಾ ಮದುವೆಯೆಂಬ ಸುಮಧುರ ಜೀವನಕ್ಕೆ ಕಾಲಿಟ್ಟು 10 ವರ್ಷಗಳಾಗಿದ್ದು, ಇದೀಗ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಿಹಿ ಸುದ್ದಿಯನ್ನು ಸ್ವತಃ ಮೆಗಾ ಸ್ಟಾರ್ ಚಿರಂಜೀವಿ ಹಂಚಿಕೊಂಡಿದ್ದರು. ಉಪಾಸನಾ ಗರ್ಭಿಣಿಯಾದಾಗಿನಿಂದ ರಾಮಚರಣ್ ಮನೆಯಲ್ಲಿ ಹರ್ಷದ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ಇದೀಗ, ಗರ್ಭಿಣಿ ಉಪಾಸನಾ ಅವರಿಗೆ ಅಘಾತವಾಗುವ ಘಟನೆಯೊಂದು ನಡೆದಿದೆ.

ಗರ್ಭಿಣಿ ಉಪಾಸನಾ ಅವರ ಅಜ್ಜಿ ಇಹಲೋಕದ ಪಯಣ ಮುಗಿಸಿದ್ದು, ಹೀಗಾಗಿ, ತನ್ನ ನೆಚ್ಚಿನ ಅಜ್ಜಿ ಇನ್ನಿಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳಲಾಗದೆ ರಾಮ್ ಚರಣ್ ಪತ್ನಿ ಉಪಾಸನಾ ಭಾವುಕರಾಗಿ ಕಂಬನಿ ಮಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ತನ್ನ ಅಜ್ಜಿಯ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಪ್ರತಿ ಮಕ್ಕಳಿಗೂ ಅಜ್ಜಿ – ಅಜ್ಜ ಎಂದರೆ ಸಾಕು ಅಚ್ಚು- ಮೆಚ್ಚು. ಯಾರಿಗೂ ಕಾಣದಂತೆ ಕೈಗೆ ಕೊಂಚ ದುಡ್ಡು ತುರುಕಿ ಅಪ್ಪ ಅಮ್ಮನಿಗೆ ಗೊತ್ತಾಗದಂತೆ ನೋಡಿಕೊಳ್ಳುವ ಪ್ರೀತಿ ಮಮತೆಯ ಧಾರೆ ಎರೆಯುವ ಅಜ್ಜಿ ಅಜ್ಜನ ಬಗ್ಗೆ ವರ್ಣಿಸಲಸಾಧ್ಯ. ಇದೇ ರೀತಿ, ಉಪಾಸನಾ ಅವರಿಗು ಅಜ್ಜಿ ಎಂದರೆ ಬಲು ಪ್ರೀತಿ. ಹೀಗಾಗಿ, ಮೆಗಾ ಸೊಸೆ, ರಾಮ್ ಚರಣ್ ಪತ್ನಿ ಉಪಾಸನಾ ಕಾಮಿನೇನಿ ಅಜ್ಜಿಯ ಸಾವಿನಿಂದ ದುಃಖಿತರಾಗಿದ್ದಾರೆ. ಬಿ ಪಾಸಿಟಿವ್ ಎಂಬ ಪತ್ರಿಕೆಯ ಸಂಪಾದಕಿಯಾಗಿ ಕಾರ್ಯ ನಿರ್ವಹಿಸುವ ಜೊತೆಗೆ ಉಪಾಸನಾ ಅಪೋಲೋ ಆಸ್ಪತ್ರೆಯ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ಸಾಮಾಜಿಕ ಕಳಕಳಿಯ ಮೂಲಕ ಗುರುತಿಸಿಕೊಂಡಿದ್ದಾರೆ.

ನನ್ನ ಅಜ್ಜಿಯೊಂದಿಗೆ ನಾನು ಪಡೆದ ಪ್ರೀತಿಯ ಅನುಭವವನ್ನು ನನ್ನ ಮಕ್ಕಳಿಗೂ ಸಿಗುವ ರೀತಿ ನೋಡಿಕೊಳ್ಳುವುದಾಗಿ ಭಾವನಾತ್ಮಕವಾಗಿ ಉಪಾಸನಾ ಪೋಸ್ಟ್ ಮಾಡಿದ್ದಾರೆ. ತನ್ನ ಅಜ್ಜಿಯ ನೆನಪಿನಲ್ಲಿ ದಿನದೂಡುತ್ತಿರುವ ಉಪಾಸನಾ ತನ್ನ ಅಜ್ಜಿ ತನ್ನನ್ನು ಬೆಳೆಸಿದ್ದು ಅಜ್ಜಿಯಿಂದಲೆ ಜೀವನವನ್ನು ನಿಭಾಯಿಸುವ ವೈಖರಿಯನ್ನು ಕಲಿತಿರುವುದಾಗಿ ಹೇಳಿಕೊಂಡಿದ್ದಾರೆ. ಹೀಗಾಗಿ ತಾನು ಅಜ್ಜಿಗೆ ಕೊನೆಯವರೆಗೂ ಕೃತಜ್ಞರಾಗಿರಬೇಕು ಎಂದಿದ್ದಾರೆ. ಜೀವನ ಎಂದರೆ ಕೇವಲ ಓದು ಪಾಠ ಮಾತ್ರವಲ್ಲದೆ ಖುಷಿಯಾಗಿ ಬದುಕುವುದನ್ನು ಹೇಳಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ, ಅಜ್ಜಿ ಕೂಡ ಎಲ್ಲರೂ ಗೌರವ ಮತ್ತು ಪ್ರೀತಿಯಿಂದ ನೋಡುವಂತೆ ಹೆಮ್ಮೆಯಿಂದ ಜೀವನವನ್ನು ನಡೆಸಿದ್ದಾರೆ ಎಂದು ಅಜ್ಜಿಯ ಅನುಪಸ್ಥಿತಿಯನ್ನು ನೆನೆದು ಬೇಸರ ವ್ಯಕ್ತಪಡಿಸಿದ್ದಾರೆ.