Home latest ಮದುವೆಗೆ ಆಮಂತ್ರಿಸಲಿಲ್ಲವೆಂದು ಮದುವೆ ಮನೆಗೆ ಕಲ್ಲೆಸೆದ ಯುವಕನ ಕೊಲೆ

ಮದುವೆಗೆ ಆಮಂತ್ರಿಸಲಿಲ್ಲವೆಂದು ಮದುವೆ ಮನೆಗೆ ಕಲ್ಲೆಸೆದ ಯುವಕನ ಕೊಲೆ

Hindu neighbor gifts plot of land

Hindu neighbour gifts land to Muslim journalist

Kerala : ಕೇರಳ : ಮದುವೆಗೆ ಆಮಂತ್ರಿಸಲಿಲ್ಲವೆಂದು ಮದುವೆ ಮನೆಗೆ ಕಲ್ಲೆಸೆದ ಯುವಕನನ್ನು ಮದುವೆ ಮನೆಯವರು ಕೊಲೆ ಮಾಡಿರುವ ಬಗ್ಗೆ ವರದಿಯಾಗಿದೆ.

ಈ ಘಟನೆ ಕೇರಳದ (Kerala) ಕೊಟ್ಟಾಯಂ ಜಿಲ್ಲೆಯ ಕರುಕಚಾಲ್ ಗ್ರಾಮದಲ್ಲಿ ನಡೆದಿದೆ.ಮೃತ ಯುವಕನನ್ನು ಬಿನು ಎಂದು ಗುರುತಿಸಲಾಗಿದೆ.

ತನ್ನ ನೆರೆಮನೆಯವರು ವಿವಾಹ ಸಮಾರಂಭಕ್ಕೆ ತನ್ನನ್ನು ಆಮಂತ್ರಿಸಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಬಿನು, ಮದುವೆ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ. ಅದಕ್ಕೆ ಪ್ರತೀಕಾರವಾಗಿ ಮದುವೆ ವರ ಸೆಬಾಸ್ಟಿಯನ್ ಎಂಬಾತ ಬಿನು ಜೊತೆಗೆ ವೈಷಮ್ಯವಿದ್ದ ಯುವಕನ ನೆರವು ಪಡೆದು ಆತನನ್ನು ಹತ್ಯೆಗೈದಿದ್ದಾರೆ.

ಕೊಟ್ಟಾಯಂನ ಕರುಕಚಾಲ್ ಗ್ರಾಮದ ನಿವಾಸಿ ಸೆಬಾಸ್ಟಿಯನ್ ವಿವಾಹವಾಗಿದ್ದರು. ಆದರೆ, ಉಂಬಿಡಿಯ ಬಿನು ಎಂಬಾತನನ್ನು ವಿವಾಹಕ್ಕೆ ಆಮಂತ್ರಿಸಿರಲಿಲ್ಲ. ಇದರಿಂದ ಅವಮಾನಿತನಾದ ಬಿನು ವರನ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ.

ಇದರ ವಿರುದ್ಧ ಪ್ರತೀಕಾರಕ್ಕೆ ಮುಂದಾದ ವರ ಸೆಬಾಸ್ಟಿಯನ್, ಬಿನುವಿನೊಂದಿಗೆ ವೈಷಮ್ಯವಿದ್ದ ವಿಷ್ಣು ಎಂಬಾತನೊಂದಿಗೆ ಸಂಪರ್ಕ ಬೆಳೆಸಿದ್ದಾನೆ.

ವಿಷ್ಣು ಹಾಗೂ ಸೆಬಾಸ್ಟಿಯನ್ ಬಿನುವಿನೊಂದಿಗೆ ಜಗಳಕ್ಕಿಳಿದು, ಆತನ ಮೇಲೆ ಹರಿತವಾದ ಆಯುಧಗಳಿಂದ ದಾಳಿ ನಡೆಸಿದ್ದಾರೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಗಂಭೀರ ಗಾಯಗೊಂಡಿದ್ದರಿಂದ ಆಸ್ಪತ್ರೆಯಲ್ಲಿ ಮೃತಪಟ್ಟರು.

ಆರೋಪಿಗಳಾದ ವಿಷ್ಣು ಹಾಗೂ ಸೆಬಾಸ್ಟಿಯನ್ ಕೊಲೆ‌ಮಾಡಲು ಬಳಸಿದ ಆಯುಧಗಳೊಂದಿಗೆ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ.