Home Interesting 1 ಪ್ಯಾಕೆಟ್ ಮೊಸರು ಕೊಳ್ಳಲು ಸಾವಿರಾರು ಜನರು ಪ್ರಯಾಣಿಸುತ್ತಿದ್ದ ರೈಲನ್ನೇ ನಿಲ್ಲಿಸಿದ ಚಾಲಕ ಹಾಗೂ ಆತನ...

1 ಪ್ಯಾಕೆಟ್ ಮೊಸರು ಕೊಳ್ಳಲು ಸಾವಿರಾರು ಜನರು ಪ್ರಯಾಣಿಸುತ್ತಿದ್ದ ರೈಲನ್ನೇ ನಿಲ್ಲಿಸಿದ ಚಾಲಕ ಹಾಗೂ ಆತನ ಸಹಾಯಕ !!? | ಪಾಕಿಸ್ತಾನದಲ್ಲಿ ನಡೆದಿದೆ ಹೀಗೊಂದು ವಿಚಿತ್ರ ಘಟನೆ

Hindu neighbor gifts plot of land

Hindu neighbour gifts land to Muslim journalist

ಸಾಮಾಜಿಕ ಜಾಲತಾಣದಲ್ಲಿ ಚಿತ್ರ-ವಿಚಿತ್ರ ಘಟನೆಗಳ ವೀಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಅದೇ ರೀತಿಯ ವೀಡಿಯೋವೊಂದು ವೈರಲ್‌ ಆಗಿದ್ದು, ಅದರಲ್ಲಿ ಪಾಕಿಸ್ತಾನದ ರೈಲು ಚಾಲಕ ಹಾಗೂ ಆತನ ಸಹಾಯಕ ಮೊಸರು ಕೊಳ್ಳುವುದಕ್ಕೋಸ್ಕರ ಸಾವಿರಾರು ಜನರು ಪ್ರಯಾಣಿಸುತ್ತಿದ್ದ ರೈಲನ್ನೇ ನಿಲ್ಲಿಸಿದ ವಿಚಿತ್ರ ಘಟನೆ ನಡೆದಿದೆ.

ಲಾಹೋರ್ ನ ರೈಲ್ವೆ ನಿಲ್ದಾಣದ ಸಮೀಪ ಈ ಘಟನೆ ನಡೆದಿದೆ. ರೈಲಿನ ಚಾಲಕನ ಸಹಾಯಕ ಅಲ್ಲೇ ಸಮೀಪದ ಅಂಗಡಿಯೊಂದರಿಂದ ಮೊಸರು ಖರೀದಿಸಿ ತರುತ್ತಿರುವ ಚಿತ್ರಣ ಈ ವೀಡಿಯೋದಲ್ಲಿದೆ. ಈ ಘಟನೆ ಪಾಕಿಸ್ತಾನದಲ್ಲಿ ರೈಲಿನ ಸುರಕ್ಷತೆ ಹಾಗೂ ನಿಯಮಗಳ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ.

ಇಲ್ಲಿ ಸರಿಯಾದ ನಿರ್ವಹಣೆ ಇಲ್ಲದೇ ಹಾಗೂ ನಿರ್ಲಕ್ಷ್ಯದಿಂದ ರೈಲ್ವೆ ಅಪಘಾತಗಳು ಸಾಮಾನ್ಯವಾಗಿವೆ. ಇನ್ನು ಮೊಸರಿಗಾಗಿ ರೈಲು ನಿಲ್ಲಿಸಿದ ಸಿಬ್ಬಂದಿಯನ್ನು ರಾಣಾ ಮೊಹಮ್ಮದ್‌ ಸೆಹ್ಜಾದ್ ಹಾಗೂ ಆತನ ಸಹಾಯಕ ಇಫ್ತಿಕರ್‌ ಹುಸೇನ್‌ ಎಂದು ಗುರುತಿಸಲಾಗಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆ ಪಾಕಿಸ್ತಾನದ ರೈಲ್ವೆ ಸಚಿವ ಅಜಮ್‌ ಖಾನ್‌ ಸ್ವತಿ ರೈಲಿನ ಚಾಲಕ ಹಾಗೂ ಆತನ ಸಹಾಯಕನನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.

ಭವಿಷ್ಯದಲ್ಲಿ ನಾನು ಇಂತಹ ಘಟನೆಗಳನ್ನು ಸಹಿಸುವುದಿಲ್ಲ ಹಾಗೂ ರಾಷ್ಟ್ರೀಯ ಆಸ್ತಿಯನ್ನು ವೈಯುಕ್ತಿಕ ಬಳಕೆಗೆ ಬಳಸಲು ಯಾರಿಗೂ ಅವಕಾಶ ನೀಡುವುದಿಲ್ಲ. ರೈಲಿನ ಸಿಬ್ಬಂದಿ ಯಾರಾದರೂ ಆದೇಶ ಉಲ್ಲಂಘನೆ ಮಾಡಿದ್ದಲ್ಲಿ ತ್ವರಿತ ಕ್ರಮ ಕೈಗೊಳ್ಳಲು ಆಯಾ ವಿಭಾಗೀಯ ಮುಖ್ಯಸ್ಥರಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.