Home latest ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ನಕಲಿ ಟಿಕೆಟ್ !!|ಟಿಟಿಡಿ ಸಿಬ್ಬಂದಿಗಳಿಂದಲೇ ಭಕ್ತರಿಗೆ ಮೋಸ?

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ನಕಲಿ ಟಿಕೆಟ್ !!|ಟಿಟಿಡಿ ಸಿಬ್ಬಂದಿಗಳಿಂದಲೇ ಭಕ್ತರಿಗೆ ಮೋಸ?

Hindu neighbor gifts plot of land

Hindu neighbour gifts land to Muslim journalist

ತಿರುಪತಿ:ತಿಮ್ಮಪ್ಪನ ದರ್ಶನಕ್ಕೆ ಸಾಲು-ಸಾಲು ಭಕ್ತರ ರಾಶಿಯೇ ಹರಿದು ಬರುತ್ತದೆ. ಒಮ್ಮೆ ದರ್ಶನ ಪಡೆದರೆ ಜೀವನವೇ ಪಾವನ ಎಂಬ ಭಕ್ತರ ಮನಸ್ಸನ್ನು ಹೀನಾಯವಾಗಿ ಬಳಸಿಕೊಳ್ಳುತ್ತಿರುವವರ ಬಗ್ಗೆ ಸುಳಿವು ಸಿಕ್ಕಿದ್ದು,ಇದು ಭಕ್ತರಿಗೆ ಅವಮಾನ ಮಾಡಿದಂತಾಗಿದೆ.

ಹೌದು.ತಿಮ್ಮಪ್ಪನ ದರ್ಶನಕ್ಕಾಗಿ ವಿಶೇಷ ದರ್ಶನದ ಟಿಕೆಟ್ ಗಳನ್ನು ಕೂಡ ಟಿಟಿಡಿ ನೀಡುತ್ತಿದೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿದ್ದ ಕೆಲವರು ಈ ಟಿಕೆಟ್ ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು. ಹೀಗೆ ದೇವಸ್ಥಾನದ ಒಳಗೆ ಹೋಗುತ್ತಿದ್ದ ಭಕ್ತರ ಟಿಕೆಟ್ ಗಮನಿಸಿ, ವಿಚಾರಿಸಿದಾಗ ಈ ಸಂಗತಿ ಬಯಲಿಗೆ ಬಂದಿದೆ.

ತೆಲಂಗಾಣದ ಭಕ್ತರೊಬ್ಬರಿಗೆ 300 ರೂಪಾಯಿ ಮುಖ ಬೆಲೆಯ ಟಿಕೆಟ್ ನ್ನು 3,300 ರೂ.ಗೆ ಮಾರಾಟ ಮಾಡಲಾಗಿತ್ತು. ಈ ಟಿಕೆಟ್ ಗಳನ್ನು ಪಡೆದು ಭಕ್ತರು ದರ್ಶನಕ್ಕೆ ಬಂದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುಮಲ ಪೊಲೀಸ್ ಠಾಣೆಯಲ್ಲಿ 7 ಜನರ ಮೇಲೆ ಪ್ರಕರಣ ದಾಖಲಾಗಿದೆ.ಅಲ್ಲದೇ, ಇನ್ನೊಂದು ಪ್ರಕರಣದಲ್ಲಿ ಇದೇ 300 ರೂ. ಮುಖ ಬೆಲೆಯ ವಿಶೇಷ ದರ್ಶನದ ಟಿಕೆಟ್ ನ್ನು 7 ಸಾವಿರ ರೂ. ಗೆ ಮಾರಾಟ ಮಾಡಲಾಗಿತ್ತು. ಇವು ಕೂಡ ನಕಲಿ ಎಂಬುವುದು ತಿಳಿದು ಬಂದಿತ್ತು.

ಈ ಪ್ರಕರಣದಲ್ಲಿ ಮಧ್ಯವರ್ತಿ ಹಾಗೂ ಟಿಟಿಡಿ ಸಿಬ್ಬಂದಿಗಳೇ ಭಾಗಿಯಾಗಿದ್ದಾರೆ ಎನ್ನುವ ಸಂಶಯವಿದೆ. ನಾಗೇಂದ್ರ, ಎ. ಕೃಷ್ಣರಾವ್, ಅರುಣ್, ಬಾಲಾಜಿ ಸೇರಿದಂತೆ 7 ಜನರ ಮೇಲೆ ಪ್ರಕರಣ ದಾಖಲಿಸಲಾಗಿದ್ದು,ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.