Home latest Republic Day : ಈ ಬಾರಿ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ಇಲ್ಲ ಅವಕಾಶ

Republic Day : ಈ ಬಾರಿ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ಇಲ್ಲ ಅವಕಾಶ

Hindu neighbor gifts plot of land

Hindu neighbour gifts land to Muslim journalist

Republic Day : ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ಗಳಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಈ ಬಾರಿ ಅವಕಾಶ ಲಭ್ಯವಾಗಿಲ್ಲ. 

ಆತ್ಮ ನಿರ್ಭರ ಭಾರತಕ್ಕೆ ಸಿರಿಧಾನ್ಯದಿಂದ ತಂತ್ರಜ್ಞಾನದವರೆಗೆ ರಾಜ್ಯದ ಸಮಗ್ರ ಕೊಡುಗೆಯ ಸಂಕೇತವಾಗಿ ಗಣರಾಜ್ಯೋತ್ಸವ ಪರೇಡ್ ನಲ್ಲಿ ಮಿಲ್ಲೆಟ್ಸ್ ಟು ಮೈಕ್ರೋಚಿಪ್ ಸ್ಥಬ್ಧ ಚಿತ್ರ ಪ್ರದರ್ಶನಕ್ಕೆ ಯೋಜಿಸಲಾಗಿತ್ತು. ಆದರೆ ಪ್ರಸ್ತಾಪ ಅಂಗೀಕಾರವಾಗದ ಕಾರಣ ಕರ್ತವ್ಯ ಪಥದಲ್ಲಿ ನಡೆಯುವ ಪರೇಡ್ ನಲ್ಲಿ ಕರ್ನಾಟಕದ ಸ್ತಬ್ಧ ಚಿತ್ರ ಈ ಬಾರಿ ಪಾಲ್ಗೊಳ್ಳುತ್ತಿಲ್ಲ. ಬದಲಿಗೆ ಪ್ರಗತಿ ಮೈದಾನದಲ್ಲಿ ಸ್ತಬ್ಧ ಚಿತ್ರ ವೀಕ್ಷಣೆಗೆ ಅನುವು ಮಾಡಿಕೊಡಲಾಗಿದೆ ಎಂದು ಹೇಳಲಾಗಿದೆ.

ಆತ್ಮನಿರ್ಭರ ಭಾರತದ ಹಾದಿ ಸ್ವಾವಲಂಬಿ ರಾಜ್ಯಗಳೊಂದಿಗೆ ಪ್ರಾರಂಭವಾಗುತ್ತದೆ. ಕರ್ನಾಟಕವು ಕೃಷಿ ಕೈಗಾರಿಕೆ, ನಾವೀನ್ಯತೆ ಮತ್ತು ಸಂಸ್ಕೃತಿಯಲ್ಲಿ ಸಮತೋಲಿತ ಪ್ರಗತಿ ಮೂಲಕ ರಾಷ್ಟ್ರವನ್ನು ಸಮೃದ್ಧ ಮತ್ತು ಸುಸ್ಥಿರ ಭವಿಷ್ಯದತ್ತ ಕೊಂಡೊಯ್ಯುತ್ತಿದೆ. ಆತ್ಮನಿರ್ಭರ ಭಾರತದ ದೃಷ್ಟಿಗೆ ಕರ್ನಾಟಕ ಸಮಗ್ರ ಕೊಡುಗೆ ನೀಡುತ್ತಿದೆ ಎಂಬುದು ಈ ಸ್ತಬ್ಧಚಿತ್ರದ ಸಂಕೇತವಾಗಿತ್ತು.