Home latest Madrasa: ಈ ರಾಜ್ಯದಲ್ಲೂ ಮದ್ರಸಾಗಳ ವಿರುದ್ಧ ಭುಗಿಲೆದ್ದ ಆಕ್ರೋಶ – ಸಿಎಂ ಶಾಕಿಂಗ್ ಹೇಳಿಕೆ

Madrasa: ಈ ರಾಜ್ಯದಲ್ಲೂ ಮದ್ರಸಾಗಳ ವಿರುದ್ಧ ಭುಗಿಲೆದ್ದ ಆಕ್ರೋಶ – ಸಿಎಂ ಶಾಕಿಂಗ್ ಹೇಳಿಕೆ

Madrasa

Hindu neighbor gifts plot of land

Hindu neighbour gifts land to Muslim journalist

Madrasa : ಮದ್ರಸಾ ಶಿಕ್ಷಕರಿಗೆ ಯಾವುದೇ ಪಾಠ ಬೋಧನೆಗೆ ಅರ್ಹತೆ ಇರುವುದಿಲ್ಲ. ಮಕ್ಕಳಿಗೆ ಗಣಿತ ಇತಿಹಾಸ ಭಾಷೆಗಳ ಪರಿಚಯವೇ ಮದ್ರಸಾಗಳಲ್ಲಿ ಮಾಡುವುದಿಲ್ಲ. ಹೀಗಾಗಿ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿರುವ ಮದ್ರಸಾಗಳನ್ನು ರಾಜ್ಯದಲ್ಲಿ ನಿಷೇಧಿಸುವಂತೆ ಈಗಾಗಲೇ ಅಸ್ಸಾಂ-ಯುಪಿ ಯಲ್ಲಿ ಚರ್ಚೆ ಆಗಿದೆ.

ಪ್ರಸ್ತುತ ಸರ್ಕಾರಗಳು ದೇಶದಲ್ಲಿ ಅಕ್ರಮ ಮದರಸಾಗಳ (Madrasa) ವಿರುದ್ಧ ನಿರಂತರವಾಗಿ ಕ್ರಮ ಕೈಗೊಳ್ಳುತ್ತಿದ್ದು ಅಸ್ಸಾಂ(Assam)-ಯುಪಿ ನಂತರ, ಈಗ ಮತ್ತೊಂದು ರಾಜ್ಯವು ಅಕ್ರಮ ಮದ್ರಸಾಗಳ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದೆ.

ಹೌದು, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ (shivaraj singh chouhan) ಅವರು ಬುಧವಾರ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ರಾಜ್ಯದಲ್ಲಿ ಅನುಪಯೋಗ ಶಕ್ತಿಗಳ ಏರಿಕೆ ಮತ್ತು ಅಕ್ರಮ ಮದ್ರಸಾಗಳ ಹೆಚ್ಚಳದ ಬಗ್ಗೆ ಮಾತುಕತೆಯನ್ನು ನಡೆಸಲಾಯಿತು. “ರಾಜ್ಯದಲ್ಲಿ ಮತಾಂಧತೆ ಮತ್ತು ಉಗ್ರವಾದವನ್ನು ಸಹಿಸಲಾಗುವುದಿಲ್ಲ. ಅಂತಹ ಅಕ್ರಮ ಮದರಸಾಗಳ ವಿರುದ್ಧ ಸರ್ಕಾರವು ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲಿದೆ” ಎಂದು ಸ್ಪಷ್ಟನೆ ನೀಡಿದ್ದಾರೆ.

ಅದಲ್ಲದೆ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಅವರು “ಇಂತಹ ಅಕ್ರಮ ಮದರಸಾಗಳು ಮತ್ತು ಧರ್ಮಾಂಧತೆಯ ಪಠ್ಯವನ್ನು ಹೇಳಿಕೊಡುತ್ತಿರುವ ಸಂಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಮತಾಂಧತೆ ಹರಡುವಲ್ಲಿ ವಿಚಾರ ಕಂಡುಬಂದಲ್ಲಿ, ಅವರ ಮೇಲೆ ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳಲಾಗುತ್ತದೆ. ಎಂದಿದ್ದಾರೆ.

ಮುಖ್ಯವಾಗಿ ಬೂದಿ ಮುಚ್ಚಿದ ಕೆಂಡದಂತೆ ಇರುವ ಸಾಮಾಜಿಕ ಮಾಧ್ಯಮಗಳ ಮೇಲೆ ಪ್ರಮುಖ ನಿಗಾ ಇಡುವಂತೆ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ರಾಜ್ಯದಲ್ಲಿ ಸೈಬರ್ ಅಪರಾಧಗಳನ್ನು ಹೆಚ್ಚಿಸುವ ಬಗ್ಗೆ ನಿರಂತರ ಕ್ರಮ ಕೈಗೊಳ್ಳುವಂತೆ ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮುಖ್ಯವಾಗಿ ಸೋಶಿಯಲ್ ಮೀಡಿಯಾದಲ್ಲಿ ದಾರಿತಪ್ಪಿಸುವ ಸುದ್ದಿಗಳು ರವಾನೆ ಅದಲ್ಲಿ ಅವುಗಳನ್ನು ಬರೆದಿರುವವರನ್ನು ಗುರುತಿಸಿ, ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

ಇದನ್ನೂ ಓದಿ: K Annamalai: ಅಣ್ಣಾಮಲೈ ಹೆಲಿಕಾಪ್ಟರ್ ನಲ್ಲಿ ರಾಶಿ ರಾಶಿ ಹಣ ತಂದ ಆರೋಪ: ಚುನಾವಣಾ ಆಯೋಗ ಅಧಿಕೃತ ಹೇಳಿಕೆ !