Home latest ಬಿಯರ್ ಏರಿಸಿಕೊಂಡು ಶಾಲೆಗೆ ಬಂದ ಶಿಕ್ಷಕ | ಕುಡುಕ ಶಿಕ್ಷಕ ತರಗತಿ ತೆಗೆದುಕೊಳ್ಳುತ್ತಿರುವ ವೀಡಿಯೊ ವೈರಲ್

ಬಿಯರ್ ಏರಿಸಿಕೊಂಡು ಶಾಲೆಗೆ ಬಂದ ಶಿಕ್ಷಕ | ಕುಡುಕ ಶಿಕ್ಷಕ ತರಗತಿ ತೆಗೆದುಕೊಳ್ಳುತ್ತಿರುವ ವೀಡಿಯೊ ವೈರಲ್

Hindu neighbor gifts plot of land

Hindu neighbour gifts land to Muslim journalist

ಎಣ್ಣೆಯ ಮಹಾತ್ಮೆ ಕುಡಿದವರಿಗಷ್ಟೆ ಗೊತ್ತು!!! ಕುಡಿದು ತೂರಾಡುತ್ತಾ ಓಡಾಡುವ, ಬಾಯಿಗೆ ಬಂದಂತೆ ಅರಚುವ , ಮನಸೋಯಿಚ್ಛೆ ಮನೆಯವರಿಗೆ ಹೊಡೆಯುವ ಪ್ರವೃತ್ತಿ ಹಲವರಿಗಿದೆ. ಕುಡಿದವರ ಪಕ್ಕ ನಿಲ್ಲುವ ಅವಸ್ಥೆ ಬಂದರೆ , ಅದೊಂದು ಅಸಹನೀಯ ಪರಿಸ್ಥಿತಿ. ಏನೇ ಆಗಲಿ ಕುಡಿಯುವರಿಂದಲೇ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಜಮೆ ಆಗುತ್ತಿರುವುದಂತು ಕಟು ಸತ್ಯ.

ವಿದ್ಯಾ ದಾನ ಮಾಡುವ ಶಿಕ್ಷಣ ಪಸರಿಸುವ ಶಾಲೆಯನ್ನು ಶಿಕ್ಷಕರೇ ಕುಡಿಯುವವರ ತಂಗುದಾಣವಾಗಿ ಪರಿವರ್ತಿಸಿರುವ ಘಟನೆ ಉತ್ತರ ಪ್ರದೇಶದ ಹತ್ರಾಸ್ನದಲ್ಲಿ ನಡೆದಿದೆ.

ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತ್ತಿದ್ದು, ಕುರ್ಚಿಯ ಮೇಲೆ ಶಿಕ್ಷಕರು ಕುಡಿದ ಮತ್ತಿನಲ್ಲಿ ಕುಳಿತಿರುವ ವಿಡಿಯೋ ತುಣುಕುಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿ ನೋಡುಗರು ಹೌಹಾರುವ ರೀತಿಯ ಪ್ರಕರಣ ದಾಖಲಾಗಿದೆ.
ಯಾರೋ ವೀಡಿಯೊವನ್ನು ಚಿತ್ರೀಕರಿಸುತ್ತಿರುವುದು ಅರಿವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಶಿಕ್ಷಕರು ಮತ್ತೊಂದು ತೆರೆಯದ ಬಿಯರ್ ಕ್ಯಾನ್ ಅನ್ನು ಅಡಗಿಸಲು ಪ್ರಯತ್ನಿಸಿ ವಿಫಲರಾಗಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿ, ಕ್ಯಾನ್ ಅನ್ನು ಮರೆಮಾಚುವ ಜೊತೆಗೆ ತನ್ನನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಟ್ಟು ವಿಫಲರಾಗಿದ್ದಾರೆ.

ಈ ವಿಡಿಯೋವನ್ನು ಶಾಲೆಯೊಂದರಲ್ಲಿ ಚಿತ್ರೀಕರಿಸಲಾಗಿದ್ದು, ಉತ್ತಮ ಸಮಾಜವನ್ನು ನಿರ್ಮಾಣ ಮಾಡುವ ಒಳ್ಳೆಯ ವಿಚಾರಗಳನ್ನು ಅನುಸರಿಸಿ ಮಕ್ಕಳಿಗೆ ಧಾರೆ ಎರೆಯಬೇಕಾದ ಶಿಕ್ಷಕರೆ ತಪ್ಪು ಮಾಡಿ ಮಕ್ಕಳನ್ನು ತಪ್ಪಿನ ಹಾದಿಯಲ್ಲಿ ಸಾಗಲು ಅನುವು ಮಾಡಿಕೊಡುವ ಪರಿಸ್ಥಿತಿ ಎದುರಾಗಿದ್ದು ವಿಪರ್ಯಾಸ. ತಪ್ಪಿತಸ್ಥ ಶಿಕ್ಷಕನನ್ನು ಅಮಾನತುಗೊಳಿಸಲಾಗಿದ್ದು , ಹತ್ರಾಸ್ನ ಜಿಲ್ಲಾ ಮಾಹಿತಿ ಕಚೇರಿ ಈ ಬಗ್ಗೆ ಮಾಹಿತಿ ನೀಡಿದೆ.