Home latest ತಾಲಿಬಾನಿಗಳ ಹಾದಿಯಲ್ಲಿ ಇದೀಗ ಪಾಕಿಸ್ತಾನ | ಅಲ್ಲಿನ ಹೆಣ್ಣುಮಕ್ಕಳಿಗೂ ಶುರುವಾಯಿತು ನಿಷೇಧಗಳ ಹೇರಿಕೆ !!

ತಾಲಿಬಾನಿಗಳ ಹಾದಿಯಲ್ಲಿ ಇದೀಗ ಪಾಕಿಸ್ತಾನ | ಅಲ್ಲಿನ ಹೆಣ್ಣುಮಕ್ಕಳಿಗೂ ಶುರುವಾಯಿತು ನಿಷೇಧಗಳ ಹೇರಿಕೆ !!

Hindu neighbor gifts plot of land

Hindu neighbour gifts land to Muslim journalist

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಆಕ್ರಮಣ ಆಗುತ್ತಿದ್ದಂತೆಯೇ ಮಹಿಳೆಯರ ಮೇಲೆ ಇನ್ನಿಲ್ಲದ ಹೇರಿಕೆ, ಅತ್ಯಂತ ಕ್ರೂರ ಎನಿಸುವಂಥ ಷರತ್ತುಗಳನ್ನು ವಿಧಿಸಿರುವುದು ಈಗ ಜಗಜ್ಜಾಹೀರವಾಗಿದೆ. ಇದರ ಬೆನ್ನಲ್ಲೇ ತಾಲಿಬಾನಿಗಳ ಹಾದಿಯನ್ನು ಪಾಕಿಸ್ತಾನ ತುಳಿಯಲು ಶುರು ಮಾಡಿದ್ದು, ಹೇರಿಕೆಗಳಿಗೆ ಮುನ್ನುಡಿ ಬರೆಯುತ್ತಿದೆ.

ಪಾಕಿಸ್ತಾನದ ಫೆಡರಲ್ ಆಪ್ ಎಜುಕೇಶನ್(ಎಫ್‍ಡಿಇ) ಮಹಿಳಾ ಅಧ್ಯಾಪಕರು ಜೀನ್ಸ್ ಮತ್ತು ಬಿಗಿಯಾದ ಉಡುಪುಗಳನ್ನು ಧರಿಸದಂತೆ ಆದೇಶ ಹೊರಡಿಸಿದೆ. ಅಲ್ಲದೇ ಜೀನ್ಸ್ ಮತ್ತು ಟೀ ಶರ್ಟ್ ಧರಿಸುವ ಅಧ್ಯಾಪಕರನ್ನು ನಿಷೇಧಿಸಲಾಗಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಶಾಲಾ ಮತ್ತು ಕಾಲೇಜುಗಳ ಪ್ರಾಂಶುಪಾಲರಿಗೆ ಶೈಕ್ಷಣಿಕ ನಿರ್ದೇಶಕರು ಸೋಮವಾರ ಪತ್ರವನ್ನು ಕಳುಹಿಸಿದ್ದು, ಪ್ರತಿ ಸಿಬ್ಬಂದಿಯ ದೈಹಿಕ ನೋಟ, ವೈಯಕ್ತಿಕ ಸ್ವಚ್ಛತೆಯನ್ನು ಸರಿಯಾದ ರೀತಿಯಲ್ಲಿ ಪಾಲಿಸುವಂತೆ ತಿಳಿಸಲಾಗಿದೆ. ಅಲ್ಲದೇ ಕ್ಷೌರ, ಗಡ್ಡವನ್ನು ಕತ್ತರಿಸುವುದು, ಉಗುರು ಕತ್ತರಿಸಿರುವುದು, ಸ್ನಾನ ಮತ್ತು ಸುಗಂಧ ದ್ರವ್ಯದ ಬಳಕೆ ಮುಂತಾದವುಗಳ ಬಗ್ಗೆ ಪತ್ರದಲ್ಲಿ ವಿವರಿಸಲಾಗಿದೆ.

ಈ ಎಲ್ಲಾ ನಿಯಮಗಳನ್ನು ಪಾಕಿಸ್ತಾನದ ಶಿಕ್ಷಕರು ಕಚೇರಿ ಸಮಯದಲ್ಲಿ, ಕ್ಯಾಂಪಸ್, ಗ್ರೌಂಡ್ ಮತ್ತು ಮೀಟಿಂಗ್‍ಗಳಲ್ಲಿ ಅನುಸರಿಸಬೇಕು. ಮಹಿಳೆಯರು ದುಪ್ಪಟ್ಟಾ, ಶಾಲುಗಳನ್ನು ಧರಿಸಲೇಬೇಕು. ಹಿಜಾಬ್ ಹಾಗೂ ಬುರ್ಖಾ ಕಡ್ಡಾಯ. ಚಳಿಗಾಲದಲ್ಲಿ ಸೈಟರ್, ಬೇಜರ್, ಕೋಟ್ ಇತ್ಯಾದಿಗಳನ್ನು ಧರಿಸಬಹುದು ಎಂದು ಹೇಳಿದೆ.

ಇದರ ಜೊತೆಗೆ ಎಲ್ಲಾ ಅಧ್ಯಾಪಕರು ತರಗತಿಯಲ್ಲಿ ಪಾಠ ಮಾಡುವ ವೇಳೆ ಗೌವ್ನ್ ಮತ್ತು ಪ್ರಯೋಗಾಲದಲ್ಲಿ ಲ್ಯಾಬ್ ಕೋಟ್‍ಗಳನ್ನು ಧರಿಸುವಂತೆ ಸೂಚಿಸಲಾಗಿದೆ. ಇದಲ್ಲದೇ ಗೇಟ್ ಕಿಪರ್ ಹಾಗೂ ಸಹಾಯಕ ಸಿಬ್ಬಂದಿಗಳಿಗೂ ಸಮವಸ್ತ್ರಗಳನ್ನು ಧರಿಸುವಂತೆ ತಿಳಿಸಲಾಗಿದೆ.