

ಸುಳ್ಯ: ಮಂಗಳೂರು ಕಚೇರಿಯಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದ ಮಂಗಳೂರು ಜಿಲ್ಲೆಯ ಸುಳ್ಯ ಮೂಲದ ಪತ್ರಕರ್ತ ವಾಗೀಶ್ (46) ನಿಧರಾಗಿದ್ದಾರೆ.
ಇವರು ಹೊಸದಿಗಂತ ಮತ್ತು ಜನವಾಹಿನಿಯಲ್ಲಿ ಕಾರ್ಯ ನಿರ್ವಹಿಸಿದ್ದು ಅಲ್ಲದೆ,ಈಟಿವಿ, ಟಿವಿ 9, ಕಸ್ತೂರಿ ನ್ಯೂಸ್, ಸಮಯ ಟಿವಿ, ಪ್ರಜಾ ಟಿವಿಯಲ್ಲೂ ಪ್ರಮುಖರಾಗಿ ಸೇವೆ ಸಲ್ಲಿಸಿದ್ದರು.ಅದಾದನಂತರ ವಿಜಯ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದರು.
ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಅಸ್ವಸ್ಥರಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ. ಹಲವು ಉದ್ಯೋನ್ಮುಖ
ಪತ್ರಕರ್ತರಿಗೆ ಬೆಳೆಸಿದ ಕೀರ್ತಿ ಇವರದಾಗಿದೆ.












