Home Breaking Entertainment News Kannada ಕನ್ನಡದ ಅಭಿನ ಚಕ್ರವರ್ತಿಗೆ ದೇವಸ್ಥಾನ ಕಟ್ಟಿಸಿ ಅಭಿಮಾನ ಮೆರೆದ ಅಭಿಮಾನಿಗಳು !! | ಕಿಚ್ಚ ಸುದೀಪ್...

ಕನ್ನಡದ ಅಭಿನ ಚಕ್ರವರ್ತಿಗೆ ದೇವಸ್ಥಾನ ಕಟ್ಟಿಸಿ ಅಭಿಮಾನ ಮೆರೆದ ಅಭಿಮಾನಿಗಳು !! | ಕಿಚ್ಚ ಸುದೀಪ್ ಗಾಗಿ ಕಟ್ಟಿದ ಗುಡಿ ಹೇಗಿದೆ ಗೊತ್ತಾ??

Hindu neighbor gifts plot of land

Hindu neighbour gifts land to Muslim journalist

ಸಿನಿಮಾ, ರಾಜಕಾರಣ, ಕ್ರೀಡೆ ಹೀಗೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುತ್ತಾರೆ.ಅಲ್ಲದೆ ಅವರಿಗೆ ಅದೆಷ್ಟೋ ಅಭಿಮಾನಿ ಬಳಗವನ್ನು ಹೊಂದಿರುತ್ತಾರೆ.ಅದರಲ್ಲೂ ಸಿನಿಮಾ ಕ್ಷೇತ್ರ ಎಂದು ಬಂದರೆ ತುಸು ಹೆಚ್ಚೇ ಎನ್ನಬಹುದು. ಸೂಪರ್ ಸ್ಟಾರ್ ಗಳನ್ನು ಅದೆಷ್ಟೋ ಜನ ದೇವರ ಸ್ಥಾನದಲ್ಲಿ ಪೂಜಿಸುತ್ತಾರೆ.ದಿನನಿತ್ಯ ನಟರದ್ದೇ ಧ್ಯಾನ ಮಾಡುವ ಅಭಿಮಾನಿಗಳಿಗೇನು ಕಮ್ಮಿಯಿಲ್ಲ. ಅದರಲ್ಲೂ ಕಿಚ್ಚ ಸುದೀಪ್ ಅಭಿಮಾನಿಗಳು ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.ಹೌದು ಸುದೀಪ್ ಮೇಲಿನ ಅಭಿಮಾನವನ್ನು ಯಾವ ರೀತಿಯಾಗಿ ತೋರ್ಪಡಿಸಿದ್ದಾರೆ ನೀವೇ ನೋಡಿ.

ಕಿಚ್ಚ ಸುದೀಪ್ ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ವರೆಗೆ ಬೆಳೆದು ನಿಂತ ಕನ್ನಡದ ನಟ. ಸ್ಯಾಂಡಲ್‌ವುಡ್ ಕಂಡ ಈ ಅದ್ಭುತ ನಟನಿಗೆ ಎಲ್ಲಾ ಸಮುದಾಯದಿಂದಲೂ ಅಭಿಮಾನಿಗಳಿದ್ದಾರೆ. ಅವರ ಅಭಿಮಾನಕ್ಕೆ ಕಿಚ್ಚ ಸುದೀಪ್ ಕೂಡ ಶರಣಾಗಿದ್ದಾರೆ. ಈಗ ಕಿಚ್ಚ ನ ರಾಯಚೂರಿನ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮೂರ್ತಿ ನಿರ್ಮಿಸಿ ಗುಡಿಯೊಂದನ್ನು ಕಟ್ಟುತ್ತಿದ್ದಾರೆ. ಹೌದು.. ಕನ್ನಡದ ನಟನಿಗಾಗಿ ಕಟ್ಟಿದ ಈ ಮೊದಲ ಗುಡಿಯಾಗಿದ್ದು, ಇದರ ವಿಶೇಷತೆ ಏನು ಎಂಬುದು ಮುಂದಿದೆ ನೋಡಿ.

ಪರಭಾಷೆಯಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟ-ನಟಿಯರಿಗಾಗಿ ದೇವಸ್ಥಾನವನ್ನು ಕಟ್ಟಿ ಪೂಜಿಸುತ್ತಿದ್ದಾರೆ. ಆದರೆ, ಕರ್ನಾಟಕದಲ್ಲಿ ಇಂತಹದ್ದೊಂದು ಆಚರಣೆ ಇರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ಕನ್ನಡದ ನಟನೊಬ್ಬನಿಗೆ ಕರ್ನಾಟಕದಲ್ಲಿ ದೇವಸ್ಥಾನ ನಿರ್ಮಿಸಲಾಗುತ್ತಿದೆ. ರಾಯಚೂರು ಜಿಲ್ಲೆಯ, ದೇವದುರ್ಗ ತಾಲೂಕಿನ ಕುರುಕುಂದ ಗ್ರಾಮದಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ದೇವಸ್ಥಾನ ನಿರ್ಮಿಸಲಾಗುತ್ತಿದೆ. ಈಗಾಗಲೇ ಬಹುತೇಕ ದೇವಸ್ಥಾನದ ಕಾರ್ಯಗಳು ಮುಗಿದಿದ್ದು, ಇನ್ನು ಕೆಲವು ದಿನಗಳ ಕೆಲಸ ಬಾಕಿ ಉಳಿದಿದೆಯಷ್ಟೇ.

ಕಿಚ್ಚ ಸುದೀಪ್ ಗುಡಿಯನ್ನು ಸುದೀಪ್ ಅಭಿಮಾನಿಗಳು ಕಳೆದ ಮೂರು ತಿಂಗಳಿಂದ ನಿರ್ಮಾಣ ಮಾಡುತ್ತಿದ್ದಾರೆ. ಮೊದಲು ರಾಯಚೂರು ಜಿಲ್ಲೆಯ ಜನರು ವಾಲ್ಮೀಕಿ ಗುಡಿ ಕಟ್ಟಲು ಮುಂದಾಗಿದ್ದರು.ಆ ವೇಳೆ ಕಿಚ್ಚನ ಅಭಿಮಾನಿಗಳು ಕಿಚ್ಚ ಸುದೀಪ್‌ಗೆ ಗುಡಿ ಕಟ್ಟಬೇಕು ಎಂದು ನಿರ್ಧರಿಸಿದ್ದರು. ಈ ವೇಳೆ ಇದೇ ಗ್ರಾಮದ ಶರಣು ಬಸವ ನಾಯಕ ಎನ್ನುವವರು ಉಚಿತವಾಗಿ 35 -45 ಚದರ ಅಡಿ ವಿಸ್ತೀರ್ಣ ಜಾಗ ನೀಡಿದ್ದರು. ಇಲ್ಲಿಂದ ಅಭಿಮಾನಿಗಳೇ ಸೇರಿ ಹಣ ಹೊಂದಿಸಿ, ಗುಡಿ ಕಟ್ಟುತ್ತಿದ್ದಾರೆ.”ನಾವು ಹುಚ್ಚ ಸಿನಿಮಾದಿಂದ ಸುದೀಪ್ ಅಭಿಮಾನಿ,ಅವರಿಗಾಗಿ ಗುಡಿ ಕಟ್ಟಬೇಕು ಅಂತ ತೀರ್ಮಾನ ಮಾಡಿದ್ವಿ. ಗುಡಿಯೊಳಗೆ ಗಾರ್ಡನ್, ಸುತ್ತಲೂ ಕಾಂಪೌಂಡ್, ಲೈಟಿಂಗ್ ಮಾಡಲಾಗಿದೆ. ಸಿಸಿ ಕ್ಯಾಮರಾವನ್ನೂ ಅಳವಡಿಸಲಾಗಿದೆ. ಇನ್ನೊಂದು 20 ದಿನಗಳಲ್ಲಿ ಕೆಲಸ ಮುಗಿಯುತ್ತೆ. ಈ ಗುಡಿಯೊಳಗೆ ವಾಲ್ಕೀಕಿ ಮೂರ್ತಿ ಹಾಗೂ ಸುದೀಪ್ ಮೂರ್ತಿ ಇರುತ್ತೆ.” ಅಂತಾರೆ ಸುದೀಪ್ ಅಭಿಮಾನಿ ಹಾಗೂ ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ದೇವರಾಜ ನಾಯಕ.ಕಿಚ್ಚನ ಈ ಗುಡಿಗೆ ಇದೂವರೆಗೂ 12 ಲಕ್ಷ ಖರ್ಚಾಗಿದೆ. ಕೆಲವು ಗಣ್ಯರು 2-3 ಲಕ್ಷ ಸಹಾಯ ಮಾಡಿದ್ದು ಬಿಟ್ಟರೆ, ಉಳಿದ ಹಣವನ್ನು ಅಭಿಮಾನಿಗಳೇ ಹಾಕಿ ಗುಡಿ ಕಟ್ಟುತ್ತಿದ್ದಾರೆ.

ಕಿಚ್ಚ ಗುಡಿಯೊಳಗೆ ಪುನೀತ್ ರಾಜ್‌ಕುಮಾರ್ ಫೋಟೊಗೆ ಗ್ಲಾಸ್ ಫಿಟ್ಟಿಂಗ್ ಮಾಡಿಸಿ, ಎಲ್‌ಇಡಿ ಅಳಪಡಿಸಲಾಗುತ್ತೆ. 4 ಬೈ 8 ಗ್ಲಾಸ್ ಫಿಟ್ಟಿಂಗ್ ಇರುವ ಅಪ್ಪು ಪೋಟೊ ಈ ಗುಡಿಯೊಳಗೆ ಸ್ಥಾಪನೆ ಮಾಡಲಾಗುತ್ತೆ. ” ನಾವು ಪ್ರೀತಿಯಿಂದ ಕಿಚ್ಚ ಸುದೀಪ್‌ಗಾಗಿ ಮೂರ್ತಿ ನಿರ್ಮಿಸಿ ಗುಡಿ ಕಟ್ಟಿದ್ದೇವೆ. ಅವರು ಗುಡಿ ನೋಡಲು ಬರುತ್ತೇವೆ ಎಂದಿದ್ದಾರೆ. ಉದ್ಘಾಟನೆ ಬರುತ್ತಾರೋ ಇಲ್ಲವಾ ಅನ್ನುವುದು ಇನ್ನೂ ಗೊತ್ತಿಲ್ಲ” ಅಂತಾರೆ ದೇವರಾಜ ನಾಯಕ.ಇಷ್ಟೇ ಅಲ್ಲದೆ ಕಿಚ್ಚನ ಗುಡಿ ಕಾಯಲು ವಾಚ್‌ಮ್ಯಾನ್ ಅನ್ನು ನೇಮಿಸಿದ್ದಾರೆ. ಅವರಿಗೆ ತಿಂಗಳಿಗೆ 7 ರಿಂದ 8 ಸಾವಿರ ಸಂಬಳವನ್ನು ಅಭಿಮಾನಿಗಳು ತಮ್ಮದೇ ಕೈಯಿಂದ ನೀಡಲಿದ್ದಾರೆ. ಇನ್ನು 20 ದಿನಗಳಲ್ಲಿ ಕಿಚ್ಚನ ಗುಡಿ ನಿರ್ಮಾಣವೂ ಆಗಲಿದೆ.