Home latest Stock Market: ಪತ್ನಿಯ ಕರೆಯನ್ನು ಕೇಳಿಸಿಕೊಂಡು ಕೋಟಿ ಕೋಟಿ ಸಂಪಾದಿಸಿದ ಗಂಡ

Stock Market: ಪತ್ನಿಯ ಕರೆಯನ್ನು ಕೇಳಿಸಿಕೊಂಡು ಕೋಟಿ ಕೋಟಿ ಸಂಪಾದಿಸಿದ ಗಂಡ

Hindu neighbor gifts plot of land

Hindu neighbour gifts land to Muslim journalist

Stock Market: ಅಮೆರಿಕದಲ್ಲಿ ಒಂದು ವಿಚಿತ್ರಕಾರಿ ಘಟನೆ ನಡೆದಿದೆ. ಪತ್ನಿಯು ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅವಳು ನಡೆಸುತ್ತಿದ್ದ ಸಂಭಾಷಣೆಯನ್ನು ಅಕ್ರಮವಾಗಿ ಕೇಳಿಸಿಕೊಂಡು 15 ಕೋಟಿ ರೂಪಾಯಿ ಗಳಿಕೆ ಮಾಡಿದ್ದಾನೆ. ಇದು ಗೊತ್ತಾದ ತಕ್ಷಣ ಪತ್ನಿಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಇದರಿಂದ ಪತ್ನಿ ಗಂಡನಿಗೆ ಡೈವೋರ್ಸ್ ಕೊಟ್ಟಿದ್ದಾಳೆ.

ಆ ಒಂದು ಸಂಭಾಷಣೆಯಿಂದ 15 ಕೋಟಿಯನ್ನು ಅಮೆರಿಕನ್ ನಿವಾಸಿ ಸಂಪಾದಿಸಿದ ಎಂದು ಬ್ಲೂಮ್‌ಬರ್ಗ ಸಂಸ್ಥೆಯು ವರದಿ ಮಾಡಿದೆ.

ಟೆಕ್ಸಾಸ್ ವಾಸಿಯಾಗಿರುವ ಟೈಲರ್ ಲೌಡನ್ ರವರ ಹೆಂಡತಿ ಬಿಪಿ ಪಿಎಲ್‌ಸಿಯಲ್ಲಿ ಕಂಪನಿಯಲ್ಲಿ ಸ್ವಾಧೀನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಟ್ರಾವೆಲ್ ಸೆಂಟರ್ಸ್ ಆಫ್ ಅಮೇರಿಕಾ ಇಂಕ್ ನ ಸ್ವಾಧೀನಪಡಿಸಿಕೊಳ್ಳುವ ಸಂದರ್ಭದಲ್ಲಿ ಇದರ ಕುರಿತ ಡೀಲ್‌ ಮಾಡುತ್ತಿದ್ದರು. ಅವರ ಮನೆ ಕಂಪನಿಯಿಂದ ಸ್ವಲ್ಪ ದೂರವಿದ್ದ ಕಾರಣ ಮನೆಯಲ್ಲೇ ಕೆಲಸ ಮಾಡುತ್ತಿದ್ದರು

ಟೈಲರ್‌ ಲೌಡನ್‌ ಟ್ರಾವೆಲ್ ಸೆಂಟರ್ಸ್ ಆಫ್ ಅಮೇರಿಕಾ ಕಂಪನಿಯಲ್ಲಿ ಖರೀದಿಸಿದ್ದ ಷೇರುಗಳನ್ನು ವಾಪಸ್ಸು ಪಡೆದಿದ್ದ. ಫೆ 23 ರಂದು ಹೀಗೆ ಮಾಡಿದ ಸುಮಾರು 58.14 ಲಾಭ ಬಂದಿದೆ.

ಯುನೈಟೆಡ್ ಸ್ಟೇಟ್ಸ್ ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್‌ ಕಮಿಷನ್ ಸಂಸ್ಥೆ ಈ ಕುರಿತಂತೆ ತನಿಖೆ ಮಾಡಿದೆ. ತನ್ನ ಗಂಡನಿಗೆ ಟ್ರೇಡಿಂಗ್‌ ವಿಚಾರ ಗೊತ್ತಿರಲಿಲ್ಲ ಎಂದು ಹೇಳಿದ್ದಾಳೆ.

ಕೊನೆಗೂ ಗಂಡ ಹೆಂಡತಿಯ ಬಳಿಕ ಕ್ಷಮೆ ಕೇಳಿದ್ದಾರೆ. ಇದಾದ ಬಳಿಕ ಹೆಂಡತಿ ಬೇಸರಗೊಂಡು ಮನೆ ಬಿಟ್ಟು ಹೋಗಿದ್ದಾಳೆ.

ಕಂಪನಿಯು ಆಕೆಯ ಪತಿಯ ವಹಿವಾಟನ್ನು ವರದಿ ಮಾಡಿದೆ. ಇದು ಉದ್ದೇಶಪೂರ್ವಕವಾಗಿ ಮಾಹಿತಿಯನ್ನು ಸೋರಿಕೆ ಮಾಡದಿದ್ದರೂ ಕಂಪನಿಯು ಈ ಬಗ್ಗೆ ಹಾಗೂ ಪತ್ನಿಯ ಬಗ್ಗೆ ಕಠಿಣ ಕ್ರಮ ಕೈಗೊಂಡಿದೆ. ಪತಿ ಹಣವನ್ನು ವಾಪಸ್ಸು ಕೊಡುವುದಾಗಿ ಹೇಳಿದ್ದಾರೆ.