Home latest ಇನ್ಮುಂದೆ ಮದುವೆಯಾದರೆ ಮಾತ್ರ ವೀರ್ಯ ದಾನ | ಸಲಿಂಗಿಗಳಿಂದ ಈ ಕ್ರಮಕ್ಕೆ ವಿರೋಧ| ಈ ಕಾನೂನು...

ಇನ್ಮುಂದೆ ಮದುವೆಯಾದರೆ ಮಾತ್ರ ವೀರ್ಯ ದಾನ | ಸಲಿಂಗಿಗಳಿಂದ ಈ ಕ್ರಮಕ್ಕೆ ವಿರೋಧ| ಈ ಕಾನೂನು ಜಾರಿಯಾದರೆ ಸಲಿಂಗಕಾಮಿಗಳು ಏನು ಮಾಡ್ತಾರೆ?

Hindu neighbor gifts plot of land

Hindu neighbour gifts land to Muslim journalist

ತಂತ್ರಜ್ಞಾನ ಮುಂದುವರೆಯುತ್ತಿದೆ ಇದರ ನಡುವಿನಲ್ಲೇ ಮಾನವನ ಅಂಗಾಂಗಗಳಿಗೂ ಮಷೀನ್ ಗಳನ್ನು ಬಿಟ್ಟು ಆಪರೇಷನ್ ಮಾಡುವಷ್ಟು ತಂತ್ರಜ್ಞಾನ ಬೆಳದಿದೆ. ಹಾಗೆಯೇ ಟೆಸ್ಟ್ ಟ್ಯೂಬ್ ಬೇಬಿ ಕೂಡ ಈ ಹಿಂದೆಯೇ ಚಾಲ್ತಿಯಲ್ಲಿದೆ. ಅದರಲ್ಲಿಯೂ ಸಲಿಂಗಗಾಮಿಗಳಿಗೆ ಮಗು ಬೇಕು ಎಂದಾದರೆ ವೀರ್ಯ ದಾನ ಮಾಡುವಂತಹ ಅವಕಾಶವು ಕಲ್ಪಿಸಲಾಗಿದೆ.

ಲೆಸ್ಬಿನ್ ಜೋಡಿಗಳಿಗೆ ಕೆಲವು ಹಕ್ಕುಗಳನ್ನು ಮೀಸಲಿಡಲಾಗಿದೆ. ಉದಾಹರಣೆಗೆ ಒಬ್ಬ ಹೆಣ್ಣು ಬಯಸ್ಸಿದ್ದಲ್ಲಿ ವೀರ್ಯ ದಾನ ಪಡೆದು ಮಗು ಹೊಂದಬಹುದು. ಅದರಂತೆ ಲೆಸ್ಬಿಯನ್ ಜೊತೆ ಕೂಡ. ಆದರೆ, ಸದ್ಯ ಜಪಾನಿನಲ್ಲಿ ಈ ವರ್ಷ ಬರಬೇಕೆಂದಿರುವ ಹೊಸ ಕಾನೂನೊಂದು ಕೆಲ ವರ್ಗದ ಮಹಿಳೆಯರಿಗೆ ಹೊಸ ಕಾನೂನು ಬರುವಂತಾಗಿದೆ. ಸದ್ಯ, ಜಪಾನಿನ ಸತೋಕೊ ನಗುಮಾರಾ ಎಂಬ ಮಹಿಳೆ ತನ್ನ ಇನ್ನೊಬ್ಬ ಸಂಗಾತಿ ಮಹಿಳೆಯೊಂದಿಗೆ ಜೀವಿಸುತ್ತಿದ್ದು ಮಗು ಒಂದನ್ನು ಹೊಂದಲು ಬಯಸಿದ್ದರು. ಅದರಂತೆ ಅವರು ದಾನ ಮಾಡಲಾದ ವೀರ್ಯದಿಂದ ಗರ್ಭಧರಿಸಿ ಮಗುವೊಂದನ್ನು ಹೊಂದಿದ್ದಾರೆ.

ಆದರೆ, ಜಪಾನ್ ಆಡಳಿತದಲ್ಲಿ ಇದಕ್ಕೆ ಸಂಬಂಧಿಸಿದಂತೆ ಹೊಸ ಕಾನೂನು ತರಲು ಸಿದ್ಧತೆ ನಡೆಸಲಾಗುತ್ತಿದೆ. ಈ ಮೂಲಕ ವೀರ್ಯ ದಾನದಂತಹ ಪ್ರಕ್ರಿಯೆಯನ್ನು ನಿಯಂತ್ರಣ ಮತ್ತು ಕಾನೂನುಬದ್ಧಗೊಳಿಸುವುದು ಜಪಾನಿನ ಉದ್ದೇಶವಾಗಿದೆ.
ಅಧಿಕೃತವಾಗಿ ಮದುವೆ ಆಗಿದ್ದರೆ ಮಾತ್ರ ಈ ರೀತಿಯಾದಂತಹ ವ್ಯವಸ್ಥೆಗಳನ್ನು ಮಾಡಿಕೊಳ್ಳಬಹುದು.