Home latest ಎಚ್ಚರ! ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ಅಥವಾ ವಿಡಿಯೋ ನೋಡುವ ಜನರಿಗೊಂದು ಶಾಕ್!

ಎಚ್ಚರ! ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ಅಥವಾ ವಿಡಿಯೋ ನೋಡುವ ಜನರಿಗೊಂದು ಶಾಕ್!

Hindu neighbor gifts plot of land

Hindu neighbour gifts land to Muslim journalist

ಯಾರಾದರೂ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಣೆ ಮಾಡಿದರೆ, ನಿಮ್ಮ ಮೊಬೈಲ್‌ನಲ್ಲಿ ಸೋವಾ (SOVA) ಎಂಬ ಭಯಾನಕ ವೈರಸ್ ಬರಬಹುದು ಎಂಬ ಎಚ್ಚರಿಕೆಯ ಸುದ್ದಿಯೊಂದು ಹೊರಬಂದಿದೆ. ಈ ಭಯಾನಕ ವೈರಸ್ ಮೊಬೈಲ್‌ನಲ್ಲಿನ ಸಂಪೂರ್ಣ ಡೇಟಾ, ಬ್ಯಾಂಕ್ ಡಿಟೈಲ್ಸ್ ಸೇರಿದಂತೆ ಫೋಟೋ, ವೀಡಿಯೊಗಳನ್ನು ಸಹ ಕದಿಯಬಲ್ಲ ಸಾಮರ್ಥ್ಯವನ್ನು ಹೊಂದಿದ್ದು, ಹಾಗೂ ಕ್ಷಣಮಾತ್ರದಲ್ಲಿ ಮೊಬೈಲ್ ಒಳಗೆ ಸೇರಿಕೊಳ್ಳೋ ವೈರಸ್ ಇದಾಗಿದೆ.

ಈಗಾಗಲೇ ಹಲವರ ಸ್ಮಾರ್ಟ್‌ಫೋನ್‌ಗಳಿಗೆ ಈ ಡೆಡ್ಲಿ ವೈರಸ್ ಹೊಕ್ಕಿರಬಹುದು. ಅದರಲ್ಲೂ ಅಶ್ಲೀಲ ಚಿತ್ರಗಳನ್ನು ನೋಡುವವರ ಮೊಬೈಲ್‌ನಲ್ಲಿ ಖಂಡಿತವಾಗಿಯೂ ಈ ವೈರಸ್ ಸೇರಿರುವ ಸಾಧ್ಯತೆ ಹೆಚ್ಚು ಎಂದು ಸೈಬರ್ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಹೊಸ ಹೊಸ ಯಾವುದಾದರೂ ವಿಷಯಗಳನ್ನು ಡೌನ್ ಲೋಡ್ ಮಾಡುವಾಗ ಈ ಸೋವಾ (SOVA) ಎಂಬ ಭಯಾನಕ ವೈರಸ್ ಮೊಬೈಲ್‌ಗೆ ಸೇರಿಕೊಳ್ಳುವ ಸಂದರ್ಭ ಹೆಚ್ಚು.

ಹೆಚ್ಚು ಜನರು ಭೇಟಿ ನೀಡುತ್ತಿರುವ ಅಂದರೆ ವೆಬ್ ಮೂಲಕ ಟೋರೆಂಟ್ ವೆಬ್‌ಸೈಟ್‌ಗಳು, ಅಶ್ಲೀಲ ಚಿತ್ರ ವೀಕ್ಷಣಾ ವೆಬ್‌ತಾಣಗಳು, ವೆಬ್‌ಸೈಟ್ ಲಿಂಕ್‌ಗಳು ಹಾಗೂ ಸೈಬರ್ ಪ್ರಮೋಟರ್ಸ್ ಜೊತೆಗೂಡಿ ಈ ವೈರಸ್ ಅನ್ನು ಹರಿಬಿಡಲಾಗುತ್ತಿದೆ. ಅಶ್ಲೀಲ ವೆಬ್‌ಸೈಟ್‌ನ ಯಾವುದೇ ಲಿಂಕ್ ನೀವು ಒತ್ತಿದರೂ ಈ ಸೋವಾ (SOVA) ವೈರಸ್ ಅನ್ನು ಮೊಬೈಲ್‌ಗೆ ಸೇರುವಂತೆ ಮಾಡಲಾಗುತ್ತದೆ ಎಂಬ ಮಾಹಿತಿ ಇದೆ. ಈ ರೀತಿಯಾಗಿ ಮೊಬೈಲ್‌ಗೆ ಸೇರಿಕೊಳ್ಳುವ ವೈರಸ್ ಯಾವುದೇ ಮೊಬೈಲ್ ಬಳಕೆದಾರರಿಗೆ ತಿಳಿಯುವುದಿಲ್ಲ. ಅಷ್ಟೇ ಅಲ್ಲದೆ ಈ ಬಗ್ಗೆ ಸ್ವಲ್ಪ ಕೂಡ ಅನುಮಾನ ಬರುವುದಿಲ್ಲ.

ಈ ವೈರಸ್ ನಿಮ್ಮ ಮೊಬೈಲಿಗೆ ಬಂದ ನಂತರ ಅದನ್ನು ಡಿಲೀಟ್ ಮಾಡಲು ಸಾಧ್ಯವಾಗದ ರೀತಿಯಲ್ಲಿ ಅಭಿವೃದ್ಧಿ ಮಾಡಲಾಗಿದೆ. ಇದು ಮೊಬೈಲ್‌ನಲ್ಲಿ ಇರುವುದನ್ನೇ ತಿಳಿಯದ ಹಾಗೇ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕಿ ನಿಮ್ಮ ಖಾತೆಯಿಂದ ಹಣವನ್ನು ದೋಚುತ್ತದೆ. ಇಷ್ಟೇ ಅಲ್ಲದೇ, ಈ ವೈರಸ್ ಮೊಬೈಲ್ ಕಾರ್ಯಗಳನ್ನು ಸ್ವೈಪ್ ಮಾಡಿ ನೋಡಬಹುದು. ವೆಬ್‌ಕ್ಯಾಮ್ ಮೂಲಕ ವೀಡಿಯೋ ಮಾಡಿಕೊಳ್ಳಬಹುದು. ನಿಮ್ಮ ಸಾಧನಗಳನ್ನು ಲಾಕ್ ಮಾಡಬಹುದು ಅಥವಾ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಪಡೆದುಕೊಳ್ಳಬಹುದು ಹಾಗೂ ಹಣಕ್ಕೆ ಬೇಡಿಕೆ ಇಡಬಹುದು.

ಸೈಬರ್ ಖದೀಮರು ಈ ವೈರಸ್ ಅನ್ನು 2021 ರಲ್ಲಿ ಅಭಿವೃದ್ಧಿ ಪಡಿಸಿ, ಈಗ ಅದರ ಹೊಸ ವರ್ಷನ್ 5.0 ಅನ್ನು (SOVA-5.0)ಬಳಸುತ್ತಿದ್ದಾರೆ.ರಷ್ಯಾದಲ್ಲಿ ಸೋವಾ (SOVA) ಎಂದು ಕರೆಯುವ ಈ ವೈರಸ್ ನ್ನು ಸೃಷ್ಟಿ ಮಾಡಲಾಗಿದೆ. ರಷ್ಯಾ (Russia) ಭಾಷೆಯಲ್ಲಿ ಸೋವಾ ಅಂದ್ರೆ ‘ಗೂಬೆ’ ಅನ್ನೋ ಅರ್ಥವಿದೆ.

ಪತ್ತೆ ಮಾಡುವ ಬಗೆ ಹೇಗೆ ?
• ನಿಮ್ಮ ಡೇಟಾ ತುಂಬಾ ವೇಗವಾಗಿ ಖಾಲಿಯಾಗುತ್ತಿದ್ದರೆ, ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಕೂಡ ಬೇಗನೆ ಖಾಲಿಯಾಗುವುದು.
• ಅನಗತ್ಯ ಜಾಹಿರಾತುಗಳು ನಿಮ್ಮ ಫೋನ್‌ನಲ್ಲಿ ಗೋಚರಿಸುತ್ತವೆ.
• ನಿಮ್ಮ ಫೋನ್ ಪಟ್ಟಿಯಲ್ಲಿರುವ ಸಂಪರ್ಕಗಳು ನಿಮ್ಮ ಫೋನ್‌ನಿಂದ ಸ್ಪ್ಯಾಮ್ ಸಂದೇಶಗಳನ್ನು ಪಡೆಯುವುದು ಎಂದಾದರೆ ವೈರಸ್ ಅಟ್ಯಾಕ್ ಆಗಿರಬಹುದು.
• ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಡೌನ್‌ಲೋಡ್ ಮಾಡಿರದ ಅಪ್ಲಿಕೇಶನ್‌ಗಳು ಒಂದು ವೇಳೆ ಇನ್‌ಸ್ಟಾಲ್ ಆಗಿದ್ದರೆ ವೈರಸ್ ಅಟ್ಯಾಕ್ ಆಗಿರಬಹುದು.
• ನೀವು ಹೆಚ್ಚು ಸಮಯ ನಿಮ್ಮ ಸ್ಮಾರ್ಟ್‌ಫೋನ್ ಬಳಸದೇ ಇದ್ದರೂ, ಫೋನ್ ಬಿಸಿಯಾಗಿದ್ದರೆ ವೈರಸ್ ತಗುಲಿದೆ ಎಂದು ಅರ್ಥ.

ವೈರಸ್ ತಗುಲಿದರೆ ಏನು ಮಾಡಬೇಕು ?
• ಬ್ಯಾಂಕಿಂಗ್ ಮಾಹಿತಿಗಳು ಲೀಕ್ ಆಗಿರುವ ಅನುಮಾನ ಬಂದರೆ, ಶೀಘ್ರವೇ ಬ್ಯಾಂಕ್ ಖಾತೆಗಳನ್ನು ನಿಷ್ಕ್ರಿಯಗೊಳಿಸಬೇಕು.
• ನಿಮ್ಮ ಸ್ಮಾರ್ಟ್ ಫೋನ್‌ನಲ್ಲಿ ಇರಬಹುದಾದ ಎಲ್ಲಾ ವೈಯಕ್ತಿಕ ಮಾಹಿತಿಗಳನ್ನು ಡಿಲೀಟ್ ಮಾಡಬೇಕು.
• ನಿಮ್ಮ ಸ್ಮಾರ್ಟ್ ಫೋನ್ ಅನ್ನು ತಕ್ಷಣವೇ ರೀಸೆಟ್ ಮಾಡಬೇಕು
• ನಿಮ್ಮ ಸ್ಮಾರ್ಟ್ ಫೋನಿನ ಸಾಫ್ಟ್ ವೇರ್ ಶೀಘ್ರದಲ್ಲೇ ಅಪ್‌ಡೇಟ್ ಮಾಡಬೇಕು.

ಬರದಂತೆ ತಡೆಯುವುದು ಹೇಗೆ ?
• ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಆಪ್
ಸ್ಟೋರ್‌ನ ಅಧಿಕೃತ ಆಪ್ ಸ್ಟೋರ್‌ಗಳ ಮೂಲಕವೇ
ಆಪ್‌ಗಳನ್ನು ಡೌನ್‌ಲೋಡ್ ಮಾಡಿ.
• ಅಶ್ಲೀಲ ವೆಬ್ ಸೈಟ್‌ಗಳು ವೈರಸ್ ಹರಡುವಲ್ಲಿ ಸಿಂಹಪಾಲನ್ನು ಹೊಂದಿದೆ. ಇದರ ಬಗ್ಗೆ ಅರಿವಿರಲಿ.
• ಅಜ್ಞಾತ ಮೂಲಗಳಿಂದ ದೃಢೀಕರಿಸಿದ
ಅಪ್ಲಿಕೇಶನ್‌ಗಳನ್ನು ಎಂದಿಗೂ ಡೌನ್‌ಲೋಡ್
ಮಾಡಲೇ ಬೇಡಿ
• ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಅನುಮತಿಗಳ
ಬಗ್ಗೆ ಎಚ್ಚರಿಕೆ ವಹಿಸಿದರೆ ಉತ್ತಮ.
• ನೀವು ವಿಶ್ವಾಸಾರ್ಹ ಆ್ಯಂಟಿ-ವೈರಸ್ ಅನ್ನು ಇನ್ಸ್ಟಾಲ್ ಮಾಡಿದರೆ ಒಳಿತು.