Home latest Shocking News: 48 ವರ್ಷದಿಂದ ಹಗೆ ತೀರಿಸಿಕೊಳ್ಳುತ್ತಿದ್ದ ಆಸಾಮಿ!!! ಮಡದಿಯ ಸಮಾಧಿ ಮೇಲೆ ಮೂತ್ರ...

Shocking News: 48 ವರ್ಷದಿಂದ ಹಗೆ ತೀರಿಸಿಕೊಳ್ಳುತ್ತಿದ್ದ ಆಸಾಮಿ!!! ಮಡದಿಯ ಸಮಾಧಿ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದ ಪತಿ!! ಆಮೇಲೇನಾಯ್ತು ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್|

Hindu neighbor gifts plot of land

Hindu neighbour gifts land to Muslim journalist

ಈ ಜಗವೇ ಒಂದು ವಿಸ್ಮಯ ನಗರಿ. ಇಲ್ಲಿ ನಡೆಯುವ ವಿದ್ಯಮಾನಗಳನ್ನು ಗಮನಿಸಿದಾಗ ಹೀಗೂ ಉಂಟೇ ಎಂಬ ಪ್ರಶ್ನೆ ನಮ್ಮನ್ನು ಸಹಜವಾಗಿ ಕಾಡುತ್ತದೆ. ದಿನಂಪ್ರತಿ ಒಂದಲ್ಲ ಒಂದು ವಿಚಿತ್ರ ರೀತಿಯ ಪ್ರಕರಣಗಳು ನಮ್ಮ ನಡುವೆ ನಡೆದುಕೊಳ್ಳುವ ಮನುಷ್ಯರ ವರ್ತನೆ ಬಗ್ಗೆ ಅಚ್ಚರಿಗೆ ತಳ್ಳುತ್ತದೆ.

ಹೌದು!!! ಇಲ್ಲಿ ನಾವು ಹೇಳ ಹೊರಟಿರೋ ವಿಚಾರ ತಿಳಿದರೆ, ನೀವು ಕೂಡ ಶಾಕ್ ಆಗೋದು ಫಿಕ್ಸ್. ಅಂತಹದ್ದೇನು ವಿಶೇಷ ಅಂತಾ ತಿಳಿಬೇಕಾ?? ಈ ಕಂಪ್ಲೀಟ್ ಡೀಟೇಲ್ಸ್ ನೋಡಿ ನಿಮಗೆ ಗೊತ್ತಾಗುತ್ತೆ!!ಬರೋಬ್ಬರಿ 48 ವರ್ಷಗಳಿಂದ ಪತ್ನಿಯ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ವ್ಯಕ್ತಿಯೋರ್ವ ಮಾಡುತ್ತಿದ್ದ ವಿಚಿತ್ರ ಕಾರ್ಯವನ್ನು ಕೇಳಿದ್ರೆ, ಅರೇ ಈ ರೀತಿಯ ಮನುಷ್ಯರು ಇದ್ದಾರಾ ಎಂಬ ಪ್ರಶ್ನೆಗೆ ಸಹಜವಾಗಿ ಕಾಡುತ್ತದೆ. ಮನುಷ್ಯ ಬದುಕಿದ್ದಾಗ ಅವನ ಮೇಲೆ ಹಗೆ ತೋರಿಸೋದು ಎಲ್ಲ ಕಡೆ ನಡೆಯುವ ಪ್ರಚಲಿತ ವಿದ್ಯಮಾನ ಆದ್ರೆ ಇಲ್ಲೊಬ್ಬ ಮಹಾಶಯ ಸತ್ತ ಹೆಂಡತಿಯ ಮೇಲೆ ಈಗಲೂ ಹಗೆ ಇಟ್ಟುಕೊಂಡು ದ್ವೇಷ ಕಾರುತ್ತಿದ್ದಾನೆ ಎಂದು ಕೇಳಿದಾಗ ಬೆರಗಾಗುತ್ತದೆ.

ಮೈಕೆಲ್ ಆಂಡ್ರ್ಯೂ ಮರ್ಫಿ ಅವರ ತಾಯಿ ಟೊರೆಲ್ಲೊ (66) 2017 ರಲ್ಲಿ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ. ಇವರ ಮೃತದೇಹವನ್ನು ನ್ಯೂಯಾರ್ಕ್ ನ ಆರೆಂಜ್‌ಟೌನ್‌ನಲ್ಲಿರುವ ಟಪ್ಪನ್ ರಿಫಾರ್ಮ್ಡ್ ಚರ್ಚ್‌ನಲ್ಲಿರುವ ಸ್ಮಶಾನದಲ್ಲಿ ಸಮಾಧಿ ಮಾಡಲಾಗಿದೆ. ಪ್ರತಿದಿನ 43 ವರ್ಷದ ಮೈಕೆಲ್ ಆಂಡ್ರ್ಯೂ ಮರ್ಫಿ ಎಂಬವರ ತಾಯಿಯ ಸಮಾಧಿ ಬಳಿ ಮೂತ್ರ ಕಂಡುಬರುತ್ತಿತ್ತು ಎನ್ನಲಾಗಿದೆ. ಇದನ್ನು ಗಮನಿಸಿದ ಮಗ ಸಹಜವಾಗಿ ಪ್ರಾಣಿಗಳಿಂದ ಆಗಿರುವ ಗಲೀಜುಯೆಂದು ಭಾವಿಸಿದ್ದಾನೆ. ಆದರೆ ನಿರಂತರವಾಗಿ ಹೀಗೆ ಮುಂದುವರಿಯುತ್ತಿದ್ದ ಸಂದರ್ಭದಲ್ಲಿ ಅನುಮಾನಗೊಂಡು ಸ್ಮಶಾನದಲ್ಲಿ ಕ್ಯಾಮರಾ ಅಳವಡಿಸಲು ತೀರ್ಮಾನ ಕೈಗೊಂಡು ಸ್ಮಶಾನ ಕಾಯುವವರ ಬಳಿ ಅನುಮತಿ ಪಡೆದು ಆ ಬಳಿಕ ಅಲ್ಲೇ ಸುತ್ತಮುತ್ತ ಇರುವ ಮರಗಳಲ್ಲಿ ಕ್ಯಾಮರವನ್ನು ಅಳವಡಿಸಲಾಗಿದೆ. ಮರುದಿನ ಸೆರೆಯಾದ ದೃಶ್ಯಗಳನ್ನು ವೀಕ್ಷಿಸಿದಾಗ ಯಾರೋ ಒಬ್ಬ ವ್ಯಕ್ತಿ ಸಮಾಧಿಯ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ಈ ಕುರಿತು ತನಿಖೆ ನಡೆಸಿದಾಗ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಆ ಅಪರಿಚಿತ ವ್ಯಕ್ತಿ ಬೇರೆ ಯಾರೋ ಹೊರಗಿನವರು ಆಗಿರದೇ, ಸತ್ತ ಮಹಿಳೆಯ ಮಾಜಿ ಪತಿ ಎಂಬ ವಿಚಾರ ಬಹಿರಂಗವಾಗಿದೆ. ಇನ್ನು ಆ ವ್ಯಕ್ತಿಗೆ ತನ್ನ ಹೆಂಡತಿ ಮೇಲೆ ಅನೇಕ ವರ್ಷಗಳಿಂದ ಸೇಡು ಇದ್ದ ಹಿನ್ನೆಲೆಯಲ್ಲಿಯೇ ಆತನೇ ಪ್ರತಿ ದಿನ ಮುಂಜಾನೆ 6 ಗಂಟೆ ಸುಮಾರಿಗೆ ಸ್ಮಶಾನಕ್ಕೆ ಬಂದು ಸಮಾಧಿ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದ ಎನ್ನಲಾಗಿದೆ. ಈ ವಿಚಾರದ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು, ಆದರೆ ಖಾಕಿ ಪಡೆ ಅವರು ದೂರನ್ನು ಪಡೆಯಲು ನಿರಾಕರಿಸಿದ್ದು, ಈ ಪ್ರಕರಣದ ಕುರಿತಂತೆ ಸೂಕ್ತ ಸಾಕ್ಷ್ಯಾಧಾರ ಇಲ್ಲ ಎಂದಿದ್ದಾರೆ ಎನ್ನಲಾಗಿದೆ.

ಇದರ ನಡುವೆ ಮರ್ಫಿ ಈ ಕುರಿತು ಮಾಹಿತಿ ನೀಡಿದ್ದು, ಮೂತ್ರ ವಿಸರ್ಜನೆ ಮಾಡುತ್ತಿದ್ದ ವ್ಯಕ್ತಿ ಟೊರೆಲ್ಲೊ ಗರ್ಭಿಣಿಯಾಗಿದ್ದ ವೇಳೆ ಆಕೆಯನ್ನು ಬಿಟ್ಟುಹೋಗಿದ್ದಾನೆ. ಅಷ್ಟೇ ಅಲ್ಲದೆ ತನ್ನ ಸಹೋದರಿಯ ಜೊತೆ ಜೈವಿಕ ಸಂಬಂಧವನ್ನು ಕೂಡ ಹೊಂದಿಲ್ಲ ಎಂಬುದಾಗಿ ಸ್ಪಷ್ಟನೆ ನೀಡಿದ್ದಾನೆ. ಹೀಗಾಗಿ, ಮರ್ಫಿ ಮತ್ತು ಅವರ ಸಹೋದರಿ ಸ್ಮಶಾನದಲ್ಲಿ ಕಾದುಕುಳಿತು ಆ ವ್ಯಕ್ತಿ ಮೂತ್ರ ವಿಸರ್ಜನೆ ಮಾಡುವುದನ್ನು ಫೋಟೋ ಸೆರೆ ಹಿಡಿದು ಮಾಧ್ಯಮದ ಮುಂದೆ ನ್ಯಾಯಕ್ಕೆ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ಸದ್ಯ ಈ ಫೋಟೋ ಎಲ್ಲೆಡೆ ವೈರಲ್ ಆಗಿ ಸಂಚಲನ ಮೂಡಿಸಿದೆ.