Home latest ಮತ್ತೊಮ್ಮೆ ಭವಿಷ್ಯ ನುಡಿದ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ|ಕಾರ್ತಿಕ ಮುಗಿಯುವವರೆಗೂ ಮಳೆ ನಿಲ್ಲೋದಿಲ್ಲವೆಂದು ಭವಿಷ್ಯ!!

ಮತ್ತೊಮ್ಮೆ ಭವಿಷ್ಯ ನುಡಿದ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ|ಕಾರ್ತಿಕ ಮುಗಿಯುವವರೆಗೂ ಮಳೆ ನಿಲ್ಲೋದಿಲ್ಲವೆಂದು ಭವಿಷ್ಯ!!

Hindu neighbor gifts plot of land

Hindu neighbour gifts land to Muslim journalist

ಧಾರವಾಡ:ವರುಣನ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಊರು-ಕೇರಿ ಎನ್ನದೆ ಎಲ್ಲವನ್ನೂ ನಾಶ ಮಾಡುತ್ತಿದೆ. ರೈತರು ಕಷ್ಟ ಪಟ್ಟು ದುಡಿದ ಕೃಷಿಗೆ ಕಲ್ಲು ಹೊಡೆದಂತಾಗಿ, ಕೃಷಿಕರು ಗೋಳು ಪಡುವಂತಾಗಿದೆ. ಇದೀಗ ತಮ್ಮ ಭವಿಷ್ಯ ವಾಣಿಯಿಂದ ಹೆಸರುವಾಸಿಯಾಗಿರುವ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ ಮತ್ತೊಮ್ಮೆ ಭವಿಷ್ಯ ನುಡಿದಿದ್ದು,ರಾಜ್ಯದಲ್ಲಿ ಎದುರಾಗಿರುವ ವರುಣನ ಅಬ್ಬರದ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ರಾಜ್ಯಕ್ಕೆ ಮಳೆಯ ಕಾಟ ಇನ್ನೂ ಮುಂದುವರಿಯಲಿದೆ ಎಂಬ ಸೂಚನೆ ನೀಡಿದ್ದಾರೆ.’ಕಾರ್ತಿಕ ಮುಗಿಯುವವರೆಗೂ ಮಳೆ ನಿಲ್ಲೋದಿಲ್ಲ ‘ಎಂದು ಧಾರವಾಡದಲ್ಲಿ ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದು,ಇನ್ನು ಮಳೆ ಹೆಚ್ಚಾಗುವ ಲಕ್ಷಣ ಇದೆ. ಸದ್ಯ ಪ್ರಕೃತಿ ವಿಕೋಪ ಆಗಿದೆ. ಏನೂ ಮಾಡಲು ಆಗುವುದಿಲ್ಲ. ಅನಾಹುತಗಳು ಹೆಚ್ಚಾಗುವ ಸಾಧ್ಯತೆ ಇದೆ. ಸಂಕ್ರಾಂತಿವರೆಗೂ ಮಳೆ ಇರುತ್ತೆ ಎಂದು ಭವಿಷ್ಯ ನುಡಿದಿದ್ದಾರೆ.

ಇನ್ನು ಈ ಹಿಂದೆ ಮುಂದಿನ ಕಾರ್ತಿಕ ಮಾಸದವರೆಗೆ ಜಲಗಂಡಾತರ ಇದೆ. ಕೊರೊನಾ ಇನ್ನೂ ಹೆಚ್ಚಾಗಲಿದೆ. ಆದಾಗ್ಯೂ ದೈವ ಕೃಪೆಯಿಂದ ಒಳ್ಳೆಯ ದಿನಗಳು ಬರಲಿವೆ ಎಂದು ಕೋಡಿ ಮಠದ ಶ್ರೀ ಶಿವಾನಂದ ಶ್ರೀಗಳು ಭವಿಷ್ಯ ನುಡಿದಿದ್ದರು.ಇಂದು ಅವರ ಮಾತಿನಂತೆ ನಡೆದಿದೆ.ಆದ್ರೆ ರಾಜಕೀಯ ಭವಿಷ್ಯ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು,ಅಶುಭ ನುಡಿಗಳು ಈಗ ಬೇಡ. ಕುಂಭದಲ್ಲಿ ಗುರುಗ್ರಹ ಅಂದ್ರೆ ತುಂಬುವವು ಕೆರೆ ಕಟ್ಟೆ. ಜಲಗಂಡಾಂತರ ಇನ್ನೂ ಇದೆ. ನೂತನ‌ ಸಿಎಂ ಬಗ್ಗೆ ಈಗಲೇ ಏನನ್ನು ಹೇಳಬಾರದು. ಏನನ್ನು ಅಶುಭ ನುಡಿಯಬಾರದು. ಕಾರ್ತಿಕ ಮಾಸ ಕಳೆದ ನಂತರ ಹೇಳುತ್ತೇನೆ ಎಂದು ಕೋಲಾರ ತಾಲ್ಲೂಕು ಲಕ್ಷ್ಮೀಸಾಗರ ಗ್ರಾಮದಲ್ಲಿ ಕೋಡಿ ಮಠದ ಶ್ರೀ ಶಿವಾನಂದ ಶ್ರೀಗಳು ಹೇಳಿದ್ದಾರೆ.