Home latest Shivamogga: ಆಕ್ಸಿಡೆಂಟ್‌ ಆಗಿ ಸ್ನೇಹಿತ ಸಾವು! ಸುದ್ದಿ ಕೇಳಿ ಇನ್ನೋರ್ವ ಸ್ನೇಹಿತನಿಗೆ ಹೃದಯಾಘಾತ!!

Shivamogga: ಆಕ್ಸಿಡೆಂಟ್‌ ಆಗಿ ಸ್ನೇಹಿತ ಸಾವು! ಸುದ್ದಿ ಕೇಳಿ ಇನ್ನೋರ್ವ ಸ್ನೇಹಿತನಿಗೆ ಹೃದಯಾಘಾತ!!

Image Credit source: News 18 Kannada

Hindu neighbor gifts plot of land

Hindu neighbour gifts land to Muslim journalist

ತನ್ನ ಗೆಳೆಯನ ಸಾವಿನ ಸುದ್ದಿ ಕೇಳಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆಯೊಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಪುಣೆದಹಳ್ಳಿ ಗ್ರಾಮದಲ್ಲಿ ನಡೆದಿದೆ.

ಈ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಆನಂದ್‌ (30) ಎಂಬಾತ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ. ತನ್ನ ಪ್ರಾಣಸ್ನೇಹಿತನ ಸಾವನ್ನಪ್ಪಿದ್ದ ವಿಷಯ ತಿಳಿಯುತ್ತಿದ್ದಂತೆಯೇ ಇನ್ನೋರ್ವ ಪ್ರಾಣ ಸ್ನೇಹಿತ ಸಾಗರ್‌ (22) ಎಂಬಾತ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

ಆನಂದ್‌ ಶಿಕಾರಿಪುರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಬೈಕ್‌-ಬೈಕ್‌ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ಭೀಕರತೆ ಹೇಗಿತ್ತೆಂದರೆ ಆನಂದ್‌ ಸ್ಥಳದಲ್ಲೇ ಸಾವನ್ನಪ್ಪಿದ್ದ. ಆತನ ಜೀವಕ್ಕೆ ಜೀವವಾಗಿದ್ದ ಆತನ ಗೆಳೆಯ ಸಾಗರ್‌ಗೆ ಈ ವಿಷಯ ತಿಳಿಸಲಾಗಿತ್ತು. ಈ ವಿಷಯ ಕೇಳಿ ಆಘಾತಕ್ಕೊಳಗಾದ ಸಾಗರ್‌ ಕೂಡಾ ಸಾವನ್ನಪ್ಪಿದ್ದಾನೆ.