

SBI : ವ್ಯವಹಾರ ಕ್ಷೇತ್ರದಲ್ಲಿ ಬದಲಾವಣೆಗಳು ಹೆಚ್ಚುತ್ತಾ ಹೋದಂತೆ ಬ್ಯಾಂಕಿಂಗ್ ವಹಿವಾಟುಗಳು ಅಧಿಕವಾಗುತ್ತಾ ಹೋಗುತ್ತಿದೆ. ಅದಕ್ಕೆ ತಕ್ಕಂತೆ ದುಷ್ಕರ್ಮಿಗಳ ಸಂಖ್ಯೆಯೂ ಏರಿಕೆಗೊಳ್ಳುತ್ತಿದೆ. ಹೌದು. ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ( SBI) ಖಾತೆದಾರರನ್ನು ಟಾರ್ಗೆಟ್ ಮಾಡಿಕೊಂಡಿರುವ ಕಿರಾತಕರು ನಕಲಿ ಸಂದೇಶದ ಮೂಲಕ ದಿಕ್ಕು ತಪ್ಪಿಸುತ್ತಿದ್ದಾರೆ.
“ನಿಮ್ಮ ಖಾತೆಯನ್ನ ನಿರ್ಬಂಧಿಸಲಾಗುತ್ತದೆ, ಇನ್ಮುಂದೆ ನಿಮ್ಮ Yono ಖಾತೆಯು ಕಾರ್ಯನಿರ್ವಹಿಸುವುದಿಲ್ಲ. ನಿಮ್ಮ ಖಾತೆಯನ್ನ ಸಕ್ರಿಯವಾಗಿರಿಸಲು ನೀವು ವಿವರಗಳನ್ನ ನವೀಕರಿಸಬೇಕಾಗುತ್ತದೆ'” ಎಂಬ ನಕಲಿ ಸಂದೇಶದ ಮೂಲಕ ಮೋಸದ ಜಾಲಕ್ಕೆ ಬೀಳಿಸುತ್ತಿದ್ದಾರೆ.
ಪ್ಯಾನ್ ಕಾರ್ಡ್ ವಿವರಗಳನ್ನ ನವೀಕರಿಸದಿದ್ದರೆ ಯೋನೋ ಖಾತೆಯನ್ನ ನಿರ್ಬಂಧಿಸುವುದಾಗಿ ಸೈಬರ್ ಕ್ರಿಮಿನಲ್ಗಳು ಬೆದರಿಕೆ ಹಾಕುತ್ತಿದ್ದಾರೆ ಎಂದು ಪಿಐಬಿ ಫ್ಯಾಕ್ಟ್ ಚೆಕ್ ಹೇಳಿದೆ. PIB ಫ್ಯಾಕ್ಟ್ ಚೆಕ್ ಇಂತಹ SMS ಮತ್ತು ಇಮೇಲ್ಗಳಿಗೆ ಪ್ರತಿಕ್ರಿಯಿಸದಂತೆ ವಿನಂತಿಸಿದೆ. ಬ್ಯಾಂಕ್ ಖಾತೆ ವಿವರಗಳು, PAN ಕಾರ್ಡ್ ವಿವರಗಳನ್ನ ಬಹಿರಂಗಪಡಿಸಬೇಡಿ ಮತ್ತು ಅಂತಹ ಸಂದೇಶಗಳನ್ನ report.phishing@sbi.co.in ಮೇಲ್ ಐಡಿಗೆ ವರದಿ ಮಾಡಿ ಎಂದಿದೆ.
ಸಂದೇಶದಲ್ಲಿ ಬರುವ ಲಿಂಕ್ ಕ್ಲಿಕ್ ಮಾಡಿದಾಗ, ಪ್ಯಾನ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ವಿವರಗಳನ್ನ ನವೀಕರಿಸಲು ಕೇಳುತ್ತಾರೆ. ಬ್ಯಾಂಕ್ ಖಾತೆ ಸಂಖ್ಯೆ,ಪ್ಯಾನ್ ಸಂಖ್ಯೆ,ಡೆಬಿಟ್ ಕಾರ್ಡ್ ಸಂಖ್ಯೆ, ಸಿವಿವಿ ಮುಂತಾದ ವಿವರಗಳು ತಿಳಿಯುತ್ತವೆ. ಆ ಬಳಿಕ ಸೈಬರ್ ಅಪರಾಧಿಗಳು ಖಾತೆಯಲ್ಲಿರುವ ಹಣ ಲೂಟಿ ಮಾಡುತ್ತಾರೆ. ಹಾಗಾಗಿ ಈ ಲಿಂಕ್ಗಳನ್ನ ಕ್ಲಿಕ್ ಮಾಡಬೇಡಿ.
ಬಳಿಕ ವಿವರಗಳನ್ನ ನವೀಕರಿಸಲು ನೀವು ನೇರವಾಗಿ ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕು. ಅಥವಾ ಆನ್ಲೈನ್ ಎಸ್.ಬಿ.ಐ ಅಧಿಕೃತ ವೆಬ್ಸೈಟ್ ತೆರೆದು ವಿವರಗಳನ್ನ ನವೀಕರಿಸಬೇಕು. PIB, ಭಾರತ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋದ ಸತ್ಯ-ಪರಿಶೀಲನಾ ವಿಭಾಗಸತ್ಯ ಪರಿಶೀಲನೆ ಈ ಸತ್ಯವನ್ನ ದೃಢೀಕರಿಸಿ, ಗ್ರಾಹಕರಿಗೆ ಎಚ್ಚರಿಸಿದೆ.













