Home editor picks Big Boss | ಆತನ ಗುಪ್ತಾಂಗಕ್ಕೆ ರೇಟಿಂಗ್ ಕೊಡ್ತೇನೆ ಎಂದ ನಟಿ | ಹಾಗಾದ್ರೆ ಆತ...

Big Boss | ಆತನ ಗುಪ್ತಾಂಗಕ್ಕೆ ರೇಟಿಂಗ್ ಕೊಡ್ತೇನೆ ಎಂದ ನಟಿ | ಹಾಗಾದ್ರೆ ಆತ ಯಾರು, ಯಾರಾ ನಟಿ ?

Hindu neighbor gifts plot of land

Hindu neighbour gifts land to Muslim journalist

ಆತನ​ ಗುಪ್ತಾಂಗಕ್ಕೆ ರೇಟಿಂಗ್ ನೀಡಲು ನಾನು ಬಿಗ್ ಬಾಸ್ ಮನೆಗೆ ಹೋಗಬೇಕು ಎಂದ ನಟಿಯೊಬ್ಬಳು ಹೇಳಿದ್ದಾಳೆ. ನನಗೆ ಅರ್ಜೆಂಟಾಗಿ ಆತನ ಗುಪ್ತಂಗಕ್ಕೆ ರೇಟಿಂಗ್ ನೀಡಬೇಕಾಗಿದೆ. ರೇಟಿಂಗ್ ಸ್ಕೇಲ್ 0-10 ರೊಳಗೆ ಇದ್ದು ಅದರೊಳಗೆ ಒಂದು ರೇಟಿಂಗ್ ಕೊಡುವ ಅಗತ್ಯ ಇದೆ ಎಂದು ಆಕೆ ಕೇಳಿಕೊಂಡಿದ್ದಾಳೆ.
   
ಆಕೆ ಬಿಗ್ ಬಾಸ್ ನನ್ನು.ಕೇಳಿಕೊಂಡಿದ್ದಾರೆ. ನಂಗೆ ಬಿಗ್ ಬಾಸ್ ಗೆ ಹೋಗುವ ಅವಕಾಶ ಕೊಡಿ. ನಾನು ಆತನ ಗುಪ್ತಾಂಗಕ್ಕೆ ರೇಟಿಂಗ್ ನೀಡಬೇಕಿದೆ ಎಂದು ಈ ನಟಿ ಮನವಿ ಮಾಡಿಕೊಂಡಿದ್ದಾಳೆ. ಅಷ್ಟಕ್ಕೂ ಏನೀ ಗುಪ್ತಾಂಗ ರೇಟಿಂಗ್ ನ ಹಿಂದಿನ ಗುಪ್ತ ಸ್ಟೋರಿ ಅಂತೀರಾ, ಇಲ್ನೋಡಿ.

ನಿರ್ದೇಶಕ ಸಾಜಿದ್ ಖಾನ್ ಹಿಂದಿಯ ಒಬ್ಬ ನಿರ್ದೇಶಕ. 
ಆತ ಅನುಚಿತ ವರ್ತನೆ ಮಾಡಿದ್ದಾರೆ ಎಂದು ಅನೇಕ ಹೀರೋಯಿನ್​ಗಳು ಹೇಳಿದ್ದಿದೆ. ಆದರೆ, ಆತ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದಂತಿಲ್ಲ. ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳು ಸುಳ್ಳು ಎಂದೇ ವಾದಿಸುತ್ತಾ ಬಂದಿದ್ದಾರೆ. ಆದರೆ ಈ ಸಲ ಪರಿಸ್ಥಿತಿ ಭಿನ್ನ ಆಗಿದೆ. ಕಾರಣ ಸಾಜಿದ್ ಖಾನ್​ ಗುಪ್ತಾಂಗಕ್ಕೆ ರೇಟಿಂಗ್ ನೀಡಲು ನಾನು ಬಿಗ್ ಬಾಸ್ ಮನೆಗೆ ಹೋಗಬೇಕು ಎಂದ ನಟಿ ಶೆರ್ಲಿನ್ ಹೇಳಿಕೆ ಈಗ ಮಹತ್ವ ಪಡೆದುಕೊಳ್ಳುತ್ತಿದೆ.

ನಿರ್ದೇಶಕ ಸಾಜಿದ್ ಖಾನ್ (Sajid Khan) ಅವರು ಸಾಕಷ್ಟು ವಿವಾದಗಳಿಂದ ಗುರುತಿಸಿಕೊಂಡಿದ್ದಾರೆ. ಅವರ ವಿರುದ್ಧ  ಸಾಕಷ್ಟು ಮೀಟೂ ಆರೋಪಗಳು ಕೇಳಿ ಬಂದಿದ್ದವು. ಅನೇಕ ಹೀರೋಯಿನ್​ಗಳು ನಿರ್ದೇಶಕನ ವಿರುದ್ಧ ತಿರುಗಿಬಿದ್ದಿದ್ದಾರೆ. ಈಗ ಸಾಜಿದ್ ಖಾನ್ ಅವರು ‘ಬಿಗ್ ಬಾಸ್ (Bigg Boss) ಹಿಂದಿ ಸೀಸನ್ 16’ಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಬಗ್ಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಶೆರ್ಲಿನ್ ಚೋಪ್ರಾ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅದೂ ಕೇವಲ ಸಾಜಿದ್ ಖಾನ್ ಗುಪ್ತಾಂಗಕ್ಕೆ ರೇಟಿಂಗ್ ಕೊಡೋಕೆ ! ಇದೇನಪ್ಪಾ ರೇಟಿಂಗ್ ಕೊಡಲು ಯಾಕ್ ಒಳಗ್ ಹೋಗ್ಬೇಕು ಅನ್ನೋದೇ ಒಳಗಿರುವ ‘ ಇನ್ ಸೈಡ್ ಸ್ಟೋರಿ.

‘ಸಾಜಿದ್ ಖಾನ್ ನನಗೆ ತಮ್ಮ ಗುಪ್ತಾಂಗ ತೋರಿಸಿದ್ದರು. ಅದನ್ನು ತೋರಿಸಿ ಅದಕ್ಕೆ 0-1 0 ರ ಅಂತರದಲ್ಲಿ ರೇಟಿಂಗ್ ನೀಡಲು ಹೇಳಿದ್ದರು. ನಾನು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಬೇಕು ಹಾಗೂ ಅವರ ಗುಪ್ತಾಂಗಕ್ಕೆ ರೇಟಿಂಗ್ ನೀಡಬೇಕು. ಕಿರುಕುಳ ನೀಡುವವನ ಜತೆ ಸಂತ್ರಸ್ತೆಯು ಹೇಗೆ ವರ್ತಿಸುತ್ತಾಳೆ ಎಂಬುದನ್ನು ಇಡೀ ಭಾರತ ನೋಡಲಿ. ದಯವಿಟ್ಟು ಒಂದು ನಿಲುವು ತೆಗೆದುಕೊಳ್ಳಿ’ ಎಂದು ಶೆರ್ಲಿನ್ ಬಿಗ್ ಬಾಸ್ ಅನ್ನು ಕೋರಿದ್ದಾರೆ.

ಹೀಗೆ ಮೀಟೂ ಹಗರಣದ ಆತ ಬಿಗ್ ಬಾಸ್ ಮನೆ ಒಳಗೆ ಎಂಟ್ರಿ ಕೊಟ್ಟಿರೋದು ಅನೇಕರ ಅಸಮಾಧಾನಕ್ಕೆ ಕಾರಣ ಆಗಿದೆ. ಈ ಶೋ ನಡೆಸಿಕೊಡುವ ಸಲ್ಮಾನ್ ಖಾನ್ ವಿರುದ್ಧವೂ ಅನೇಕರು ಟೀಕೆ ಮಾಡಿದ್ದು ಇದೆ. ಈಗ ಸಲ್ಮಾನ್​ ಖಾನ್​ ಬಳಿ ಶೆರ್ಲಿನ್ ಮನವಿ ಮಾಡಿಕೊಂಡಿದ್ದಾರೆ. ‘ಸಲ್ಮಾನ್ ಖಾನ್ ಅವರು ಒಂದು ನಿಲುವು ತೆಗೆದುಕೊಳ್ಳಬೇಕು’ ಎಂದು ಕೋರಿದ್ದಾರೆ.

ಸಾಜಿದ್ ಖಾನ್ ವಿರುದ್ಧ ಶೆರ್ಲಿನ್ ಮಾತ್ರವಲ್ಲ ಅನೇಕ ಮಾಡೆಲ್​ಗಳು ಹಾಗೂ ಹೀರೋಯಿನ್​ಗಳು ಧ್ವನಿ ಎತ್ತಿದ್ದಾರೆ. ಆದಾಗ್ಯೂ ವಾಹಿನಿ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಒಂದೊಮ್ಮೆ ವಿರೋಧ ಹೆಚ್ಚಿದರೆ ಬಿಗ್ ಬಾಸ್​ನಿಂದ ಅವರನ್ನು ಹೊರಗೆ ಕಳಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.