Home latest ಮೈಲಿ ಬೇನೆಯ ನಿಯಂತ್ರಣಕ್ಕೆ ನೀಡುವ ‘ರೂಬೆಲ್ಲಾ’ ಚುಚ್ಚುಮದ್ದು ಪಡೆದ ಮೂರು ಹಸುಗೂಸುಗಳು ನಿಗೂಢವಾಗಿ ಸಾವು!!

ಮೈಲಿ ಬೇನೆಯ ನಿಯಂತ್ರಣಕ್ಕೆ ನೀಡುವ ‘ರೂಬೆಲ್ಲಾ’ ಚುಚ್ಚುಮದ್ದು ಪಡೆದ ಮೂರು ಹಸುಗೂಸುಗಳು ನಿಗೂಢವಾಗಿ ಸಾವು!!

Hindu neighbor gifts plot of land

Hindu neighbour gifts land to Muslim journalist

ಬೆಳಗಾವಿ: ರೂಬೆಲ್ಲಾ ಚುಚ್ಚುಮದ್ದು ಪಡೆದು ಜಿಲ್ಲೆಯ ವಿಮ್ಸ್ ನಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಂತ 3 ಹಸುಗೂಸುಗಳು ನಿಗೂಢವಾಗಿ ಸಾವನ್ನಪ್ಪಿದ ಘಟನೆ ನಡೆದಿದ್ದು,ರಾಜ್ಯವೇ ಬೆಚ್ಚಿ ಬೀಳುವಂತಿದೆ.

ರಾಮದುರ್ಗ ತಾಲೂಕಿನ ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಈ ಅಘಾತಕಾರಿ ಘಟನೆ ನಡೆದಿದ್ದು, ಮೈಲಿ ಬೇನೆಯ ನಿಯಂತ್ರಣಕ್ಕೆ ನೀಡುವ ರೂಬೆಲ್ಲಾ ಚುಚ್ಚುಮದ್ದು ಪಡೆದ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ .

ಬೆಳಗಾವಿಯ ರಾಮದುರ್ಗ ತಾಲೂಕಿನ 13 ತಿಂಗಳ ಪವಿತ್ರಾ ಹುಲಗುರ್, ಒಂದು ವರ್ಷ ಎರಡು ತಿಂಗಳ ಮಧು ಉಮೇಶ್ ಕುರಗಂದಿ ಹಾಗೂ ಒಂದೂವರೆ ವರ್ಷದ ಚೇತನಾ ಪೂಜಾರಿ ಎಂಬ ಹಸುಗೂಸುಗಳು ಬಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.ಮೂವರು ಮಕ್ಕಳು ಐಸಿಯುನಲ್ಲಿ ಆಮ್ಲಜನಕದ ಸಪೋರ್ಟ್ ನಲ್ಲಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಆದ್ರೇ, ಚಿಕಿತ್ಸೆ ಪಡೆದು ಗುಣಮುಖವಾಗಬೇಕಿದ್ದಂತ ಮೂರು ಮಕ್ಕಳು ನಿಗೂಢವಾಗಿ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.

ಜ.11 ಮತ್ತು 12 ರಂದು ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಟ್ಟು 25 ಮಕ್ಕಳಿಗೆ ರೂಬೆಲ್ಲಾ ಲಸಿಕೆ ಹಾಕಲಾಗಿದ್ದು, ಇದ್ರರಲ್ಲಿ 6 ಮಕ್ಕಳಿಗೆ ರೂಬೆಲ್ಲಾ ಚುಚ್ಚುಮದ್ದು ನೀಡಿದ್ದರು. ಸಧ್ಯ ಈ ಚಚ್ಚು ಮದ್ದು ಪಡೆದ ಮಕ್ಕಳಲ್ಲಿ ಮೂರು ಮಕ್ಕಳು ಮೃತಪಟ್ಟಿದ್ದು, ಇನ್ನೊಂದು ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ರಾಮದುರ್ಗ ತಾಲೂಕು ವೈದ್ಯಾಧಿಕಾರಿ ಡಾ. ಸತೀಶ್ ಪೋತದಾರ್, ‘ಇಡೀ ತಾಲೂಕಿನಾದ್ಯಂತ ಎಲ್ಲಾ ಪಿಎಚ್‌ಸಿಗಳಲ್ಲಿ ಮಕ್ಕಳಿಗೆ ವಿವಿಧ ಲಸಿಕೆಗಳನ್ನ ನೀಡಲಾಗುತ್ತಿದೆ. ಆದ್ರೆ, ಸಾಲಹಳ್ಳಿ ಪಿಎಚ್‌ಸಿಯಲ್ಲಿ ಮಾತ್ರ ಇಂಥಹ ದುರ್ಘಟನೆ ನಡೆದಿದೆ. ಈ ಮಕ್ಕಳಿಗೆ ನೀಡಿದ ರೂಬೆಲ್ಲಾ ಚುಚ್ಚು ಮದ್ದಿನ ಮಾದರಿಯನ್ನ ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನು ಒಂದು ಮಗುವಿನ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಆ ಮಾದರಿಯನ್ನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆ ವರದಿ ಬಂದ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ಸ್ಪಷ್ಟವಾಗಲಿದೆ’ ಎಂದರು.