Home Interesting ಹಾವುಗಳಿಗೆ ನಡೆದಾಡಲು ‘ರೋಬೋಟಿಕ್ ಕಾಲು’ಗಳನ್ನು ಕಂಡುಹಿಡಿದ ಯೂಟ್ಯೂಬರ್!

ಹಾವುಗಳಿಗೆ ನಡೆದಾಡಲು ‘ರೋಬೋಟಿಕ್ ಕಾಲು’ಗಳನ್ನು ಕಂಡುಹಿಡಿದ ಯೂಟ್ಯೂಬರ್!

Hindu neighbor gifts plot of land

Hindu neighbour gifts land to Muslim journalist

ಹಾವುಗಳಿಗೆ ಕಾಲಿಲ್ಲ ಹಾಗಾಗಿ ಹಾವುಗಳು ತೆವಳುತ್ತದೆ ಎಂಬುದು ಎಲ್ಲರಿಗೂ ತಿಳಿದಿರೋ ವಿಷಯ. ಆದ್ರೆ, ಹಾವುಗಳಿಗೆ ಈಗ ಕಾಲು ಇಲ್ಲದೇ ಇರಬಹುದು. 100 ದಶಲಕ್ಷ ವರ್ಷಗಳಷ್ಟು ಹಿಂದೆ ಹಾವುಗಳಿಗೂ ಕಾಲುಗಳು ಇದ್ದವು ಎಂದು ಸಂಶೋಧನೆಗಳು ತಿಳಿಸುತ್ತವೆ.

ಸದ್ಯ ಯೂಟ್ಯೂಬರ್ ಓರ್ವ ಹಾವು ನಡೆಯಲು ಸಹಾಯ ಮಾಡಲು ರೋಬೋಟಿಕ್ ಕಾಲುಗಳನ್ನು ಕಂಡುಹಿಡಿದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರ ಗಮನ ಸೆಳೆದಿವೆ. ಅಲೆನ್ ಪ್ಯಾನ್ ಎಂಬಾತ ಯೂಟ್ಯೂಬರ್ ಕಂಟೆಂಟ್ ಪ್ರೊಡ್ಯೂಸರ್ ಆಗಿದ್ದು , ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಾವುಗಳಿಗೆ ನಡೆದಾಡಲು ರೋಬೋಟಿಕ್ ಕಾಲಿನ ಬಗ್ಗೆ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ.

” ಹಾವುಗಳಿಗೆ ತಮ್ಮ ಕಾಲುಗಳನ್ನು ಹಿಂತಿರುಗಿಸುವುದು” ಎಂಬ ಶೀರ್ಷಿಕೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಅಲೆನ್ ಪ್ಯಾನ್ ಅವರು ಹಾವು ನಡೆಯಲು ತಮ್ಮ ಎಂಜಿನಿಯರಿಂಗ್ ತಂತ್ರಗಳನ್ನು ವಿವರಿಸಿದ್ದಾರೆ.ತಾಂತ್ರಿಕ ಜ್ಞಾನದ ಮೂಲಕ ವಿನೂತನ ಆವಿಷ್ಕಾರಗಳನ್ನು ಮನೆಯಲ್ಲಿ ತಯಾರಿಸುತ್ತಾರೆ. ಅಲ್ಲದೆ ಅದನ್ನು ಯೂಟ್ಯೂಬ್ ನಲ್ಲಿ ಹಂಚಿಕೊಂಡು ಲಕ್ಷಾಂತರ ವೀಕ್ಷಣೆಗಳನ್ನು ಪಡೆಯುತ್ತಾರೆ.

ತಾನೊಬ್ಬ “ಉರಗ ಪ್ರೇಮಿ” ಎಂದು ತೋರಿಸಲು ಈ ರೋಬೋಟಿಕ್ ಕಾಲು ಕಂಡುಹಿಡಿಯುವ ಪ್ರಯತ್ನ ಮಾಡಿದ್ದೇನೆ ಎಂದು ಯೂಟ್ಯೂಬರ್ ಹೇಳಿದ್ದಾರೆ. ಅಲೆನ್‌ ಪ್ಯಾನ್‌ ಅವರ ಆಮೂಲಾಗ್ರ ಹೊಸ ಆವಿಷ್ಕಾರವು ಜೀವಶಾಸ್ತ್ರವು ನಿರಾಕರಿಸಿದ ಅಂಗಗಳೊಂದಿಗೆ ಹಾವುಗಳನ್ನು ಸಜ್ಜುಗೊಳಿಸುವ ರೋಬೋಟ್ ಕಾಲುಗಳ ಸೆಟ್ ಈಗ ಆನ್‌ಲೈನ್‌ನಲ್ಲಿ ಹೃದಯಗಳನ್ನು ಗೆಲ್ಲುತ್ತಿದೆ.

“ಕೊನೆ ಪಕ್ಷ ಯಾರಾದರೂ ಓರ್ವರಾದರೂ , ಹಾವುಗಳು ತಾವು ಕಳೆದುಕೊಂಡ ಕಾಲುಗಳನ್ನು ಹಿಂತಿರುಗಿಸಲು ಮುತುವರ್ಜಿ ತೋರುತ್ತಾರೆ ” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋಗೆ ಇದುವರೆಗೆ 2 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳು ಮತ್ತು 1.1 ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ.