Home latest Ration Card E-KYC: ಪಡಿತರ ಚೀಟಿದಾರರೇ E-KYC ಮಾಡೋದು ಹೇಗೆ ಗೊತ್ತೇ? ಸಂಪೂರ್ಣ ಮಾಹಿತಿ ಇಲ್ಲಿದೆ!

Ration Card E-KYC: ಪಡಿತರ ಚೀಟಿದಾರರೇ E-KYC ಮಾಡೋದು ಹೇಗೆ ಗೊತ್ತೇ? ಸಂಪೂರ್ಣ ಮಾಹಿತಿ ಇಲ್ಲಿದೆ!

Ration Card E-KYC

Hindu neighbor gifts plot of land

Hindu neighbour gifts land to Muslim journalist

Ration Card E-KYC: ಅನ್ನಭಾಗ್ಯ ಯೋಜನೆ, ಗೃಹಲಕ್ಷ್ಮಿ ಯೋಜನೆ, ಕಿಸಾನ್‌ ಯೋಜನೆ ಇರಬಹುದು, ಇವೆಲ್ಲದ್ದಕ್ಕೂ ರೇಷನ್‌ಕಾರ್ಡ್‌ನಲ್ಲಿ ಇರುವ ಸದಸ್ಯರ e-kyc (Ration Card E-KYC)ಆಗಿರಬೇಕು. ಇದನ್ನು ಮಾಡಿದರೆ ಮಾತ್ರ ಫಲಾನುಭವಿಗೆ ಹಣ ಅವರ ಖಾತೆಗೆ ಸೇರುತ್ತದೆ. ಹಾಗಾದರೆ e-kyc ಮಾಡುವುದು ಹೇಗೆ? ಬನ್ನಿ ತಿಳಿಯೋಣ.

ಮೊದಲು ಗ್ರಾಹಕರು ತಮ್ಮ ಬ್ಯಾಂಕಿನ ಅಧಿಕೃತ ಪೋರ್ಟಲ್‌ಗೆ ಹೋಗಿ ಲಾಗಿನ್‌ ಆಗಬೇಕು. ನಂತರ ಕೆವೈಸಿಯ ಮೇಲೆ ಕ್ಲಿಕ್‌ ಮಾಡಬೇಕು.
ಹೆಸರು, ವಿಳಾಸ, ಹುಟ್ಟಿದ ದಿನಾಂಕ ಇವುಗಳನ್ನೆಲ್ಲ ಭರ್ತಿ ಮಾಡಬೇಕು.
ಆಧಾರ್‌, ಪ್ಯಾನ್‌ ಕಾರ್ಡ್‌ ಹಾಗೂ ಅಗತ್ಯ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ಅಪ್ಲೋಡ್‌ ಮಾಡಬೇಕು. ಎರಡೂ ಬದಿ ಸ್ಕ್ಯಾನ್‌ ಮಾಡುವುದು ಇಲ್ಲಿ ಕಡ್ಡಾಯ.
ನಂತರ ಎಲ್ಲಾ ಡಿಟೇಲ್ಸ್‌ ಹಾಕಿದ ನಂತರ ಸಬ್ಮಿಟ್‌ ಬಟನ್‌ ಕ್ಲಿಕ್‌ ಮಾಡಿ. ನಂತರ ನಿಮಗೆ ಸಂದೇಶ ಅಥವಾ ಮೇಲ್‌ ಬರುತ್ತದೆ.

ಇದನ್ನೂ ಓದಿ: Liqor Sale: ಮದ್ಯಪ್ರಿಯರೇ ಇತ್ತ ಒಮ್ಮೆ ಗಮನಿಸಿ; ನಾಳೆ ಇಲ್ಲಿ ಮದ್ಯಮಾರಾಟ ನಿಷೇಧ!

ಹಾಗೆನೇ ನೀವು ನ್ಯಾಯಬೆಲೆ ಅಂಗಡಿಯಲ್ಲಿ ನಿಮ್ಮ ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಮಾಡಬಹುದು. ಇದಕ್ಕೆ ಬೇಕಾಗಿರುವ ದಾಖಲೆಗಳು;
ಕುಟುಂಬದ ಎಲ್ಲಾ ಸದಸ್ಯರ ಆಧಾರ್‌ ಕಾರ್ಡ್‌, ಭಾವ ಚಿತ್ರ
ಓರ್ವ ಸದಸ್ಯರ ಮೊಬೈಲ್‌ ಸಂಖ್ಯೆ, ಬಯೋಮೆಟ್ರಿಕ್‌
ಪಾಸ್‌ಬುಕ್‌ ವಿವರ

ಇ-ಕೆವೈಸಿ ಮಾಡದೇ ಪಡಿತರದಾರರಿಗೆ ರೇಷನ್‌ ಸಿಗಲ್ಲ. ಆಧಾರ್‌ ಕಾರ್ಡ್‌ ನ್ನು ರೇಷನ್‌ಕಾರ್ಡ್‌ ಹಾಗೂ ಬ್ಯಾಂಕ್‌ ಖಾತೆಗೆ ಲಿಂಕ್‌ ಮಾಡದಿದ್ದರೆ ಯಾವುದೇ ಸೌಲಭ್ಯ ಸಿಗುವುದಿಲ್ಲ. ಹಾಗಾಗಿ ಮೊದಲು ಈ ಕೆಲಸ ಮಾಡಿಕೊಳ್ಳಿ.

ಇದನ್ನೂ ಓದಿ: KPSC ಇಂದ ಗ್ರೂಪ್‌ ಸಿ ಪರೀಕ್ಷೆ ದಿನಾಂಕ ಪ್ರಕಟ!