Home latest Ramanagara: ಕಂಠಪೂರ್ತಿ ಕುಡಿದು ಶಾಲಾ ಮಕ್ಕಳಿದ್ದ ಬಸ್‌ ಚಲಾಯಿಸಿದ ಚಾಲಕ; ಮುಂದೇನಾಯ್ತು ಗೊತ್ತೇ?

Ramanagara: ಕಂಠಪೂರ್ತಿ ಕುಡಿದು ಶಾಲಾ ಮಕ್ಕಳಿದ್ದ ಬಸ್‌ ಚಲಾಯಿಸಿದ ಚಾಲಕ; ಮುಂದೇನಾಯ್ತು ಗೊತ್ತೇ?

Hindu neighbor gifts plot of land

Hindu neighbour gifts land to Muslim journalist

Ramanagara: ಕುಡಿದ ಮತ್ತಿನಲ್ಲಿ ಶಾಲಾ ಮಕ್ಕಳ ಬಸ್‌ ಚಲಾಯಿಸಿದ ಚಾಲಕನೋರ್ವ ಎದುರಲ್ಲಿ ಹೋಗುತ್ತಿದ್ದ ಟಾಟಾ ಏಸ್‌ ವಾಹನಕ್ಕೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಬಿಜಿಎಸ್‌ ವರ್ಲ್ಡ್‌ ಸ್ಕೂಲ್‌ಗೆ ಸೇರಿರುವ ಶಾಲಾ ವಾಹನ ಇದಾಗಿದ್ದು, ಈ ಘಟನೆ ಚನ್ನಪಟ್ಟಣ ತಾಲೂಕಿನ ಕೆಂಗಲ್‌ ಬಳಿ ನಡೆದಿದೆ.

ಬಸ್‌ನಲ್ಲಿ ಮಕ್ಕಳಿದ್ದು ಕಂಠಪೂರ್ತಿ ಕುಡಿದು ಬಂದು ವಾಹನ ಚಲಾಯಿಸಿದ್ದಾನೆ. ನಂತರ ಎದುರಿನ ಟಾಟಾ ಏಸ್‌ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಶಾಲಾ ವಾಹನ ಜಖಂ ಆಗಿದೆ. ಈತನ ಈ ಕೃತ್ಯದಿಂದ ಅದೃಷ್ಟವಶಾತ್‌ ಮಕ್ಕಳಿಗೆ ಏನೂ ಹಾನಿಯಾಗಿಲ್ಲ. ನಂತರ ಸಾರ್ವಜನಿಕರು ಕುಡುಕ ಚಾಲಕನನ್ನು ಹಿಡಿದು ಪೊಲೀಸರಿಗೆ ನೀಡಿದ್ದಾರೆ.

ನಂತರ ಶಾಲಾ ಆಡಳಿತ ಮಂಡಳಿ ಇಂತಹ ತಪ್ಪು ನಡೆಯದಂತೆ ನೋಡಿಕೊಳ್ಳುವುದಾಗಿ ಸಾರ್ವಜನಕರಲ್ಲಿ ಮನವಿ ಮಾಡಿದೆ. ಆದರೆ ತಪ್ಪು ಮಾಡಿದವನಿಗೆ ಶಿಕ್ಷೆ ಆಗಲೇಬೇಕೆಂದು ಸಾರ್ವಜನಿಕರು ಹೇಳಿದ್ದಾರೆ. ಚನ್ನಪಟ್ಟಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.