Home Entertainment ಮದ್ಯ ಖರೀದಿಸಲು ಕ್ಯೂ ನಿಲ್ಲೋ ಮಂದಿ, ಕಾಂಡೋಂ ಖರೀದಿಸಲು ಹಿಂದೆ ಮುಂದೆ ನೋಡ್ತಾರೆ – ರಾಖಿ...

ಮದ್ಯ ಖರೀದಿಸಲು ಕ್ಯೂ ನಿಲ್ಲೋ ಮಂದಿ, ಕಾಂಡೋಂ ಖರೀದಿಸಲು ಹಿಂದೆ ಮುಂದೆ ನೋಡ್ತಾರೆ – ರಾಖಿ ಸಾವಂತ್ | ಪೆಚ್ಚು ಮೋರೆ ಹಾಕಿದ ಬಾಯ್ ಫ್ರೆಂಡ್!!!

Hindu neighbor gifts plot of land

Hindu neighbour gifts land to Muslim journalist

ಬಾಲಿವುಡ್ ನ ಡ್ರಾಮಾ ಕ್ವೀನ್ ರಾಖಿ ಸಾವಂತ್ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ತಮ್ಮ ಬಾಯ್ ಫ್ರೆಂಡ್ ಗಳ ವಿಚಾರದಲ್ಲೇ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಅವರ ಹೊಸ ಬಾಯ್ ಫ್ರೆಂಡ್ ನಮ್ಮ ಮೈಸೂರಿನ ಹುಡುಗ..ಆದಿಲ್ ವಿಷಯದಲ್ಲಿ ಈಗ ಟ್ರೆಂಡಿಂಗ್ ನಲ್ಲಿದ್ದಾರೆ ಅಂತಾನೇ ಹೇಳಬಹುದು.

ಈತನ ಜೊತೆಗೆ ರಾಕಿ ಸದಾ ಕಾಣಿಸಿಕೊಳ್ತಿದ್ದಾರೆ.. ಇತ್ತೀಚೆಗೆ ಆದಿಲ್ ಜೊತೆಗೆ ಮಾಧ್ಯಮದವರ ಮುಂದೆ ಬಂದ ರಾಖಿ ಬೋಲ್ಡ್ ಹೇಳಿಕೆ ನೀಡಿದ್ದು ಆಕೆಯ ಬಾಯ್ ಫ್ರೆಂಡ್ ಗೂ ಶಾಕ್ ಆಗಿದೆ..

ಹೌದು.. ! ಆದಿಲ್ ಜೊತೆ ‘ಜನಹಿತ್ ಮೇನ್ ಜಾರಿ’ ಸಿನಿಮಾವನ್ನು ವೀಕ್ಷಿಸಿದ್ದು ಅದರ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡುವಾಗ ಕಾಂಡೋಮ್ ಅರಿವಿನ ಬಗ್ಗೆ ಹೇಳಿದ್ದಾರೆ.

ಆದಿಲ್ ದುರ್ನಾನಿ ಅಭಿನಯದ ‘ಜನಹಿತ್ ಮೇನ್ ಜಾರಿ’ ಸಿನಿಮಾದಲ್ಲಿ ಸುರಕ್ಷಿತ್ ಲೈಂಗಿಕತೆಯ ಕುರಿತು ಕಥೆಯನ್ನು ಹೇಳಲಾಗಿದೆ. ಅಲ್ಲದೇ, ಕಾಂಡೋಮ್ ಬಳಸುವ ಕುರಿತಾಗಿಯೂ ಜಾಗೃತೆ ಮೂಡಿಸಲಾಗಿದೆ. ಈ ಸಿನಿಮಾವನ್ನು ಬಾಯ್ ಫ್ರೆಂಡ್ ಆದಿಲ್ ಜೊತೆ ನೋಡಿಕೊಂಡು ಬಂದ ರಾಕಿ, ಮಾಧ್ಯಮಗಳ ಜೊತೆ ಮಾತನಾಡುತ್ತಾ ಜನರ ಮನಸ್ಸು ವಿಚಿತ್ರವಾಗಿದೆ. ಮದ್ಯವನ್ನು ಖರೀದಿಸಲು ಗಂಟೆಗಟ್ಟಲೆ ರಸ್ತೆಯಲ್ಲಿ ಕ್ಯೂ ನಿಲ್ಲುತ್ತಾರೆ. ಆದರೆ, ಸುರಕ್ಷತೆಯ ದೃಷ್ಟಿಯಿಂದ ಕಾಂಡೋಮ್ ಖರೀದಿಸಲು ಮಾತ್ರ ಮುಜುಗರ ಪಡುತ್ತಾರೆ ಎಂದು ಆದಿಲ್ ಮುಖ ನೋಡಿಕೊಂಡು ನುಡಿದಿದ್ದಾರೆ.

ರಾಕಿ ಈ ಮಾತುಗಳನ್ನು ಕೇಳಿ ಆದಿಲ್ ಶಾಕ್ ಆಗಿದ್ದಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.