Home latest Puttur: ಬೆಟ್ಟದಲ್ಲಿ ಪತ್ತೆಯಾದ ಅಪರಿಚಿತ ಶವ , ಮೃತದೇಹಕ್ಕೆ ಹೆಗಲುಕೊಟ್ಟ ಪಿಎಸೈ ಪುತ್ತೂರಿನ ಪ್ರದೀಪ್ ಪೂಜಾರಿ

Puttur: ಬೆಟ್ಟದಲ್ಲಿ ಪತ್ತೆಯಾದ ಅಪರಿಚಿತ ಶವ , ಮೃತದೇಹಕ್ಕೆ ಹೆಗಲುಕೊಟ್ಟ ಪಿಎಸೈ ಪುತ್ತೂರಿನ ಪ್ರದೀಪ್ ಪೂಜಾರಿ

Hindu neighbor gifts plot of land

Hindu neighbour gifts land to Muslim journalist

ಪುತ್ತೂರು : ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಆವಲಗುರ್ಕಿ ಬಳಿಯ ಈಶಾ ಆದಿಯೋಗಿ ಸನ್ನಿಧಾನದ ಬಳಿಯ ಶ್ರೀ ಜಾಲಾರಿ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ಬೆಟ್ಟದಲ್ಲಿ ಪತ್ತೆಯಾದ ಅಪರಿಚಿತ ವ್ಯಕ್ತಿಯ ಮೃತದೇಹಕ್ಕೆ ಹೆಗಲು ಕೊಟ್ಟು ಬೆಟ್ಟದಲ್ಲಿ ಇಳಿಸುವ ಮೂಲಕ ಪಿಎಸೈ ಪ್ರದೀಪ್ ಪೂಜಾರಿ ಹಾಗೂ ಸಿಬಂದಿಗಳು ,ಸೈನಿಕರು ಮಾನವೀಯತೆ ಮೆರೆದಿದ್ದಾರೆ.

ಜಾಲಾರಿ ದೇವಾಲಯದ ಬೆಟ್ಟದ ಬಳಿ ಸೈನಿಕರು ಕ್ಯಾಂಪ್ ಹಾಕಿ ಕೂಂಬಿಂಗ್ ನಡೆಸುತ್ತಿದ್ದಾಗ ಬೆಟ್ಟದಲ್ಲಿ ಸೈನಿಕರ ಕಣ್ಣಿಗೆ ಶವ ಕಾಣಿಸಿದೆ. ಈ ವಿಷಯವನ್ನು ಚಿಕ್ಕಬಳ್ಳಾಪುರ ಎಸ್‌ಪಿಯವರ ಗಮನಕ್ಕೆ ಸೈನಿಕರು ತಂದಿದ್ದಾರೆ.

ಸುಮಾರು 50 ವರ್ಷದ ಪ್ರಾಯದ ಅಪರಿಚಿತ ವ್ಯಕ್ತಿಯಾಗಿದ್ದು ಗುರುತು ಪತ್ತೆಯಾಗಿಲ್ಲ. ಹತ್ತಾರು ಕಿಲೋಮೀಟರ್ ಎತ್ತರದ ಬೆಟ್ಟದ ಸಾಲು ಇದ್ದು,5-6 ಕಿಲೋಮೀಟರ್ ದೂರದಲ್ಲಿ ಪೊದೆಯ ನಡುವೆ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

ಸ್ಥಳಕ್ಕೆ ತೆರಳಿದ್ದ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸೈ ಹಾಗೂ ಸಿಬ್ಬಂದಿಗಳು,ಸೈನಿಕರು ಮೃತದೇಹ ಹೊತ್ತು ಕೆಳಗೆ ತರಲು ಸಾಕಷ್ಟು ಹರಸಾಹಸ ಪಟ್ಟಿದ್ದಾರೆ.

ಚಿಕ್ಕಬಳ್ಳಾಪುರ ಗ್ರಾಮಾಂತರ ಪಿಎಸ್‌ಐ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಕೆಂಗುಡೇಲು ನಿವಾಸಿ ಪ್ರದೀಪ್ ಪೂಜಾರಿ ಹಾಗೂ ಅವರ ಸಿಬ್ಬಂದಿ ಸೇರಿದಂತೆ-ಸೈನಿಕರು ಚಟ್ಟದ ಮಾದರಿ ತಯಾರು ಮಾಡಿ 5-6 ಕಿಲೋಮೀಟರ್ ದುರ್ಗಮ ಹಾದಿಯಲ್ಲಿ ಸಾಕಷ್ಟು ಹರಸಾಹಸ ಪಟ್ಟು ಮೃತದೇಹವನ್ನು ಕೆಳಗೆ ಹೊತ್ತು ತಂದಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಪ್ರದೀಪ್ ಪೂಜಾರಿ

ಪೊಲೀಸ್ ಠಾಣೆಯಲ್ಲಿ ಸಬ್‌ಇನ್ಸ್‌ಪೆಕ್ಟರ್ ಆಗಿರುವ ಕೆಯ್ಯೂರಿನ ಪ್ರದೀಪ್ ಪೂಜಾರಿಯವರು 2022ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾಗಿದ್ದರು.

2010ನೇ ಸಾಲಿನಲ್ಲಿ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ ಆಗಿ ಆಯ್ಕೆಗೊಂಡಿದ್ದು, ನಿವೃತ್ತ ಸರ್ವೆ ಸೂಪರ್ ವೈಸರ್ ಬಾಲಕೃಷ್ಣ ಪೂಜಾರಿ ಕೆಂಗುಡೇಲು ಮತ್ತು ಗುಣವತಿ ದಂಪತಿ ಪುತ್ರ.

ಪ್ರದೀಪ್ ಪೂಜಾರಿ ಅವರು ರಾಜಾನುಕುಂಟೆ, ಅವಲಹಳ್ಳಿ, ಕಮರ್ಷಿಯಲ್ ಸ್ಟ್ರೀಟ್, ಶಿಡ್ಲಘಟ್ಟ ಗ್ರಾಮಾಂತರ, ವಿಶ್ವನಾಥಪುರ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪಿ.ಎಸ್‌.ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.