Home latest ಬ್ರೈಟ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ, ಆಡಳಿತ ನಿರ್ದೇಶಕ ಕನ್ನಡ್ಕ ಗಣೇಶ್ ನಾಯಕ್ ಇಂದಾಜೆ ನಿಧನ

ಬ್ರೈಟ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ, ಆಡಳಿತ ನಿರ್ದೇಶಕ ಕನ್ನಡ್ಕ ಗಣೇಶ್ ನಾಯಕ್ ಇಂದಾಜೆ ನಿಧನ

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ಪುತ್ತೂರಿನ ಬ್ರೈಟ್ ವಿದ್ಯಾ ಸಂಸ್ಥೆ ಗಳ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ರಾಗಿದ್ದ ಕನ್ನಡ್ಕ ಗಣೀಶ ನಾಯಕ್ ಇಂದಾಜೆ (59)ನಗರದ ಖಾಸಗಿ ಆಸ್ಪತ್ರೆಯ ಲ್ಲಿಂದು ನಿಧನ ಹೊಂದಿದರು.

ದೆಹಲಿ ನ್ಯಾಶನಲ್ ಯೂತ್ ಪ್ರೋಜೆಕ್ಟ್ ನ ಜಿಲ್ಲಾ ಅಧ್ಯಕ್ಷ ರಾಗಿ ಕಾರ್ಯ ನಿರ್ವಹಿಸಿರುವ ಇವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಗಣೇಶೋ ತ್ಸವ ಸಮಿತಿಯ ಕಾರ್ಯ ದರ್ಶಿಯಾಗಿ, ಪುತ್ತೂರು ಗ್ರಾಹಕರ ವೇದಿಕೆ ಯ ಸದಸ್ಯ ರಾಗಿ ಸೇವೆ ಸಲ್ಲಿಸಿರುತ್ತಾರೆ.

ಮೃತರು ಪತ್ನಿ, ಪುತ್ರ,ಪುತ್ರಿಹಾಗೂ ದ.ಕ ಜಿಲ್ಲಾ ಕಾರ್ಯ ನಿರತ ಪತ್ರಕರ್ತ ರ ಸಂಘದ ಅಧ್ಯಕ್ಷ ಶ್ರೀ ನಿವಾಸ ನಾಯಕ್ ಇಂದಾಜೆ,ಸಹಿತ 8 ಸಹೋದರರು,5ಮಂದಿ ಸಹೋದರಿಯರು ಸೇರಿ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಪುತ್ತೂರು ತಾಲೂಕಿನ ಸುಳ್ಯ ಪದವಿ ನ ಕನ್ನಡ್ಕದಲ್ಲಿ ರವಿವಾರ 3ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.