Home latest Praveen Nettaru: ಪ್ರವೀಣ್ ನೆಟ್ಟಾರು ಕನಸಿನ ಮನೆಯ ಗೃಹಪ್ರವೇಶ: ಗಣ್ಯಾತೀಗಣ್ಯರ ಆಗಮನ!

Praveen Nettaru: ಪ್ರವೀಣ್ ನೆಟ್ಟಾರು ಕನಸಿನ ಮನೆಯ ಗೃಹಪ್ರವೇಶ: ಗಣ್ಯಾತೀಗಣ್ಯರ ಆಗಮನ!

Hindu neighbor gifts plot of land

Hindu neighbour gifts land to Muslim journalist

ಪುತ್ತೂರು: ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೊಂಡ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು(Praveen Nettaru) ಅವರ ಕನಸಿನ ಮನೆ ಗೃಹ ಪ್ರವೇಶ ಎ.27ರಂದು ನಡೆಯಲಿದೆ. ಕಾರ್ಯಕ್ರಮಕ್ಕೆ ನಾಯಕರು, ಗಣ್ಯರು, ಸ್ವಾಮೀಜಿಗಳು ಆಗಮಿಸುವ ನಿರೀಕ್ಷೆಯಿದೆ.

ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು(Praveen Nettaru) ಅವರ ಹೆಸರಿನಲ್ಲಿ ಬಿಜೆಪಿ ನಿರ್ಮಿಸಿರುವ ಮನೆ ʻಪ್ರವೀಣ್ ನಿಲಯದ ʼ ಗೃಹ ಪ್ರವೇಶ( House Warming) ನಡೆಯಲಿದ್ದು, ಬೆಳಿಗ್ಗೆ ಶ್ರೀ ಗಣಪತಿ ಹೋಮ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ( Sathyanarayana Pooja) ಗೃಹ ಪ್ರವೇಶ ನೆರವೇರಲಿದೆ.

ಇದೇ ವೇಳೆ ಬೆಳಗ್ಗೆ 11 ಗಂಟೆಗೆ ಪುತ್ತೂರು(Puttur) ಜಗದೀಶ ಆಚಾರ್ಯ ಮತ್ತು ಬಳಗದವರಿಂದ ಭಜನಾ ಸಂಕೀರ್ತನೆ ಹಾಗೂ ರಾತ್ರಿ 7 ರಿಂದ ಶ್ರೀ ಕಲ್ಲುರ್ಟಿ ದೈವದ ನೇಮೋತ್ಸವ ನಡೆಯಲಿದೆ.

ಗೃಹ ಪ್ರವೇಶಕ್ಕೆ ರಾಜ್ಯದ ನಾಯಕರು, ಗಣ್ಯರು, ಸ್ವಾಮೀಜಿಗಳು ಆಗಮಿಸುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.

ಪ್ರವೀಣ್‌ ನೆಟ್ಟಾರು ಹತ್ಯೆ

ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಅಕ್ಷಯ್ ಚಿಕನ್ ಸೆಂಟರ್ ಹೆಸರಿನಲ್ಲಿ ಕೋಳಿ ಮಾಂಸದ ಅಂಗಡಿ ಹೊಂದಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ 31 ವರ್ಷದ ಪ್ರವೀಣ್ ಕುಮಾರ್ ನೆಟ್ಟಾರು( Praveen Kumar Nettaru) ಅವರನ್ನು ಜುಲೈ 26 ರಂದು ರಾತ್ರಿ 8 ಗಂಟೆ ಸುಮಾರಿಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಡಲು ಸಿದ್ದತೆ ನಡೆಸುತ್ತಿದ್ದಾಗ ಬೈಕಿನಲ್ಲಿ ಬಂದಿದ್ದ ಮೂವರು ತಲ್ವಾರ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು ತಕ್ಷಣವೇ ಪುತ್ತೂರು ಆಸ್ಪತ್ರೆಗೆ ದಾಖಲಿಸಿದರೂ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದಿದ್ದ ಕಾರಣ ಪ್ರವೀಣ್ ಮೃತಪಟ್ಟಿದ್ದರು.

ಈ ಬೆನ್ನಲ್ಲೆ ಕರಾವಳಿ ನಗರದೆಲ್ಲೆಡೆ ಬೂದಿ ಮುಚ್ಚಿದ ಕೆಂಡದಂತಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಿಜೆಪಿ ನೇತೃತ್ವದ ಸರಕಾರವಿದ್ದರೂ ಹಿಂದೂ ಯುವಕನ ಹತ್ಯೆಯಾಗಿತ್ತು. ಅಲ್ಲದೇ ಆಕ್ರೋಶಗೊಂಡ ಹಿಂದೂ ಸಮೂಹ ಪ್ರತಿಭಟನೆ ನಡೆಸಿತ್ತು. ಹಾಗೂ ಶವಯಾತ್ರೆ ಬೆಳ್ಳಾರೆ ತಲುಪಿದಾಗ ಅಂತಿಮ ದರ್ಶನಕ್ಕೆ ಬಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್( Nalin Kumar Kateel) ಅವರ ಕಾರನ್ನು ಆಕ್ರೋಶಿತ ಯುವಕರು ಅಲುಗಾಡಿಸಿದ್ದರು.

ಬಳಿಕ ನಡೆದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿಯಾಗಿ ಇಡೀ ಸರಕಾರವೇ ಪ್ರವೀಣ್ ಅವರ ಮನೆಗೆ ಬಂದು ಮನೆಯವರಿಗೆ ಸಾಂತ್ವನ ಹೇಳಿದ್ದರು. ಈ ಕೊಲೆಯ ಆರೋಪಿಗಳ ಬಂಧನವಾದಾಗ ಕೊಲೆಯ ಹಿಂದೆ ಪಿಎಫ್‌ಐ ಸಂಘಟನೆಯ ಪಾತ್ರ ಇರುವುದಾಗಿ ಕಂಡು ಬಂದ ಬಳಿಕ ಕೇಂದ್ರ ಸರಕಾರ ಪಿಎಫ್‌ಐ ನಿಷೇಧಿಸಿತ್ತು. ಸಂಘಟನೆಯ ಕಚೇರಿಗಳನ್ನು ಜಫ್ತಿ ಮಾಡಿತ್ತು. ಕೊಲೆಯ ಹಿಂದೆ ಇರುವ ವ್ಯವಸ್ಥಿತ ಪಿತೂರಿಯನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ಇನ್ನೂ ಕೆಲವು ಆರೋಪಿಗಳ ಪತ್ತೆಹಚ್ಚುವ ಕಾರ್ಯ ನಡೆಸಲಾಗುತ್ತಿದೆ.