Home Karnataka State Politics Updates Pratap Simha Vs H.Vishwanath: ಪ್ರತಾಪ್ ಸಿಂಹ, ಇನ್ನು ಕೆಲವೇ ದಿನಗಳಲ್ಲಿ ನಿನ್ನನ್ನು ಬೆತ್ತಲೆಗೊಳಿಸುವೆ: ಹೆಚ್....

Pratap Simha Vs H.Vishwanath: ಪ್ರತಾಪ್ ಸಿಂಹ, ಇನ್ನು ಕೆಲವೇ ದಿನಗಳಲ್ಲಿ ನಿನ್ನನ್ನು ಬೆತ್ತಲೆಗೊಳಿಸುವೆ: ಹೆಚ್. ವಿಶ್ವನಾಥ್ ವಾಗ್ದಾಳಿ !

Pratap Simha Vs Vishwanath

Hindu neighbor gifts plot of land

Hindu neighbour gifts land to Muslim journalist

Pratap Simha Vs Vishwanath: ವರುಣಾದ ಚುನಾವಣಾ ಜಗಳ ಇದೀಗ ಪರ್ಸನಲ್ ಅಟ್ಯಾಕ್ ಆಗಿ ಬದಲಾಗಿದೆ. ಸಂಸದ ಪ್ರತಾಪ್‌ ಸಿಂಹ ವಿರುದ್ಧ ವಿಧಾನ ಪರಿಷತ್ ಸದಸ್ಯ ಎಚ್‌ ವಿಶ್ವನಾಥ್‌ ಕಿಡಿಕಾರಿದ್ದಾರೆ.( Pratap Simha Vs Vishwanath)

‘ ಪ್ರತಾಪ್‌ ಸಿಂಹ ನಿನ್ನ ದರ್ಪ ನಮ್ಮ ಎದುರು ತೋರಿಸಬೇಡ ಎಂದಿರುವ ವಿಶ್ವನಾಥ್‌, ನೀನು ಇದು ಬೆತ್ತಲೆ ಜಗತ್ತು ಎಂದು ಬರೆದಿರಬಹುದು. ನೀನೇನೊ ಗೀಚೋದು ? ನಾನೇ ನಿನ್ನನ್ನು ಬೆತ್ತಲು ಮಾಡುತ್ತೇನೆ ‘ ಎಂದು ರೊಚ್ಚಿಗೇಳುವ ಮೂಲಕ ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದ್ದಾರೆ.

‘ಸೋಮಣ್ಣ ಮತ್ತು ಸಿದ್ದರಾಮಯ್ಯ ಕೆಳಗಿನ ಮಟ್ಟದಿಂದ ರಾಜಕೀಯದ ಮೆಟ್ಟಿಲೇರಿ ಬಂದವರು. ಚುನಾವಣೆಯಲ್ಲಿ ಮೇಲಕ್ಕೆ ಬರಲು ತನ್ನನ್ನು ತಾನು ಪ್ರಚಾರ ಮಾಡಿ ಗುರುತಿಸಿಕೊಂಡವರು. ನಿನ್ನ ಹಾಗೇ ಸುಳ್ಳು ಬೊಗಳಿ ಸೈಟ್ ತೆಗೆದುಕೊಂಡವರಲ್ಲ. ಕಳ್ಳರ ಹಾಗೆ ಸೈಟ್ ತೆಗೆದುಕೊಂಡವ ನೀನು. ಯಾರ ಬಗ್ಗೆಯೂ ಮಾತನಾಡುವ ಅರ್ಹತೆ ನಿನಗಿಲ್ಲ, ನಿನ್ನ ದಮ್ಕಿ ಏನೇ ಇದ್ರೂ ಅದನ್ನ ಬೇರೆ ಅವರತ್ರ ತೋರಿಸು. ಈ ಸಮಯದಲ್ಲಿ ಮಾಧ್ಯಮದ ಎದುರು ನಿನ್ನ ಯಾವುದೇ ವರಸೆ ನಡಿಯಲ್ಲ. ನಿನ್ನ ಕರ್ಮಕಾಂಡದ ಎಲ್ಲ ಜಾತಕ ನನ್ನ ಕೈಯಲ್ಲಿದೆ’ ಎನ್ನುವ ಮೂಲಕ ಸುದ್ದಿಗೋಷ್ಠಿಯಲ್ಲಿ ಎಚ್. ವಿಶ್ವನಾಥ್ ರೊಚ್ಚಿಗೆದ್ದಿದ್ದಾರೆ.

ಇದನ್ನೂ ಓದಿ: ಭಾರತದ ಈ ನಗರವನ್ನು ನ್ಯೂಯಾರ್ಕ್ ನಗರಕ್ಕೆ ಹೋಲಿಸಿದ ಸೂಪರ್ ಸ್ಟಾರ್ ರಜನಿಕಾಂತ್ !