Home latest ಬಂಟ್ವಾಳ:ಎಚ್ಚರಿಕೆಯ ಬಳಿಕವೂ ಸಾಮಾಜಿಕ ಜಾಲತಾಣದಲ್ಲಿ ಗಣ್ಯ ವ್ಯಕ್ತಿಗಳ ಅವಹೇಳನ-ಸುಳ್ಳು ಸುದ್ದಿ ಬಿತ್ತರ!! ಯುವಕನಿಗೆ ನ್ಯಾಯಾಂಗ ಬಂಧನ!!

ಬಂಟ್ವಾಳ:ಎಚ್ಚರಿಕೆಯ ಬಳಿಕವೂ ಸಾಮಾಜಿಕ ಜಾಲತಾಣದಲ್ಲಿ ಗಣ್ಯ ವ್ಯಕ್ತಿಗಳ ಅವಹೇಳನ-ಸುಳ್ಳು ಸುದ್ದಿ ಬಿತ್ತರ!! ಯುವಕನಿಗೆ ನ್ಯಾಯಾಂಗ ಬಂಧನ!!

Hindu neighbor gifts plot of land

Hindu neighbour gifts land to Muslim journalist

ಬಂಟ್ವಾಳ:ರಾಜಕೀಯ ಗಣ್ಯ ವ್ಯಕ್ತಿಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಅಪಪ್ರಚಾರ ನಡೆಸುತ್ತಿದ್ದ ವ್ಯಕ್ತಿಯೋರ್ವನಿಗೆ ಬಂಟ್ವಾಳ ತಾಲೂಕು ದಂಡಾಧಿಕಾರಿ ವಾಮದಪದವು ನಿವಾಸಿ ಪದ್ಮನಾಭ ಸಾಮಂತ ಎಂಬಾತನಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಈತ ಸಾಮಾಜಿಕ ಜಾಲತಾಣದಲ್ಲಿ ನಿರಂತರ ಸುಳ್ಳು ಸುದ್ದಿಗಳನ್ನು ಬಿತ್ತರಿಸಿ ಸಮಾಜದಲ್ಲಿನ ಗಣ್ಯ ವ್ಯಕ್ತಿಗಳ ಧಕ್ಕೆಗೆ ಕುತ್ತು ತರುವ ಪ್ರಯತ್ನ ನಡೆಸುತ್ತಿದ್ದ ಎನ್ನುವ ಆರೋಪವೊಂದು ಕೇಳಿಬಂದಿತ್ತು.ಈ ಹಿನ್ನೆಲೆಯಲ್ಲಿ ಪುಂಜಾಲಕಟ್ಟೆ ಪೊಲೀಸರು ಈತನಿಂದ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿದ್ದರು.

ಆದರೆ ಬಳಿಕವೂ ಈತ ತನ್ನ ಹಳೇ ಚಾಳಿ ಮುಂದುವರಿಸಿದ ಹಿನ್ನೆಲೆಯಲ್ಲಿ ಪೊಲೀಸರು ದಂಡಾಧಿಕಾರಿಗಳಿಗೆ ಪಿ.ಎ.ಆರ್ ವರದಿ ಸಲ್ಲಿಸಿದ್ದರು. ಈ ಪ್ರಕರಣ ತನಿಖೆಯ ಹಂತದಲ್ಲಿರುವಾಗಲೇ ಆರೋಪಿ ಇನ್ನೊಂದು ಸುಳ್ಳು ಸುದ್ದಿ ಬಿತ್ತರಿಸಿದ್ದ ಎನ್ನಲಾಗಿದ್ದು, ಸದ್ಯ ಈತನಿಗೆ 5 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.