Home latest ಸುಳ್ಯ: ವಾಟ್ಸಪ್ ಗ್ರೂಪ್ ನಲ್ಲಿ ಪರಿಚಯ-ಸುಳ್ಯ ಪೇಟೆಯಲ್ಲಿ ಸುತ್ತಾಟ!! ಅಪ್ರಾಪ್ತ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿದಾಗ ಆತನ...

ಸುಳ್ಯ: ವಾಟ್ಸಪ್ ಗ್ರೂಪ್ ನಲ್ಲಿ ಪರಿಚಯ-ಸುಳ್ಯ ಪೇಟೆಯಲ್ಲಿ ಸುತ್ತಾಟ!! ಅಪ್ರಾಪ್ತ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿದಾಗ ಆತನ ಮೇಲೆ ಬಿತ್ತು ಪೋಕ್ಸೋ !!

Hindu neighbor gifts plot of land

Hindu neighbour gifts land to Muslim journalist

ಸುಳ್ಯ: ವಾಟ್ಸಪ್ ಗ್ರೂಪ್ ಒಂದರಲ್ಲಿ ರವಾನಿಸಿದ ಸಂದೇಶದಲ್ಲಿ ಇಬ್ಬರ ಪರಿಚಯವಾಗಿ, ಬಳಿಕ ಸುಲುಗೆ ಮುಂದುವರಿದು ದೈಹಿಕ ಸಂಪರ್ಕ ಬೆಳೆಸಿ ಅಪ್ರಾಪ್ತ ಪ್ರಾಯದ ವಿದ್ಯಾರ್ಥಿನಿಯನ್ನು ಅತ್ಯಾಚಾರ ಎಸಗಿ ಗರ್ಭವತಿ ಮಾಡಿದ ಸಂಬಂಧ ಯುವಕನೋರ್ವನ ಮೇಲೆ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಆರೋಪಿ ಯುವಕನನ್ನು ಸುಳ್ಯ ತಾಲೂಕಿನ ಉಬರಡ್ಕ ನಿವಾಸಿ ತೀರ್ಥಪ್ರಸಾದ್ ಎಂದು ಗುರುತಿಸಲಾಗಿದ್ದು, ಈತ ಅಪ್ರಾಪ್ತ ಬಾಲಕಿಯೊಂದಿಗೆ ಸಲುಗೆ ಬೆಳೆಸಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದ್ದು, ಬಾಲಕಿಯ ಪೋಷಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣದ ವಿವರ: ಆರೋಪಿ ತೀರ್ಥಪ್ರಸಾದ್ ಹಾಗೂ ಅಪ್ರಾಪ್ತ ಬಾಲಕಿಗೆ ವಾಟ್ಸಪ್ ಗ್ರೂಪ್ ಒಂದರಲ್ಲಿ ಪರಿಚಯವಾಗಿದ್ದು, ಬಳಿಕ ಇಬ್ಬರ ನಡುವೆ ವಾಟ್ಸಪ್ ನಲ್ಲಿ ಸಂದೇಶ ರವಾನೆಯಾಗುತ್ತಿತ್ತು. ಬಾಲಕಿಯೊಂದಿಗೆ ಸಲುಗೆ ಬೆಳೆಸಿದ ಆರೋಪಿ ಆಕೆಯನ್ನು ಸುಳ್ಯಕ್ಕೆ ಕರೆಸಿಕೊಂಡಿದ್ದಾನೆ ಎನ್ನಲಾಗಿದೆ.

ಬಾಲಕಿ ಸುಳ್ಯಕ್ಕೆ ಬಂದ ಬಳಿಕ ಆಕೆಯನ್ನು ಕರೆದುಕೊಂಡು ಸ್ನೇಹಿತನ ರೂಮ್ ಗೆ ತೆರಳಿದ್ದು, ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ಈ ವಿಚಾರವನ್ನು ಬಾಲಕಿ ಯಾರಲ್ಲಿಯೂ ಹೇಳದೆ ಮುಚ್ಚಿಟ್ಟಿದ್ದಳು. ಆದರೆ ಕಳೆದ ತಿಂಗಳಿನನಿಂದ ವಿಪರೀತ ಹೊಟ್ಟೆನೋವು ಪ್ರಾರಂಭವಾಗಿದ್ದು, ಪೋಷಕರು ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿದಾಗ ಗರ್ಭಿಣಿ ಎನ್ನುವುದು ದೃಢಪಟ್ಟಿದೆ.

ಕೂಡಲೇ ಪೋಷಕರು ಬಾಲಕಿಯನ್ನು ಪ್ರಶ್ನಿಸಿದ್ದು, ಬಳಿಕ ಆಕೆ ನಡೆದ ವಿಚಾರವನ್ನು ಹೇಳಿದ್ದು ಈ ಸಂಬಂಧ ಆರೋಪಿ ವಿರುದ್ಧ ಪೋಷಕರು ಪ್ರಕರಣ ದಾಖಲು ಮಾಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.