Home latest ಪರೇಶ್ ಮೇಸ್ತ ಸಾಯುವ ಮೊದಲು ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗಿ | ಇನ್ನಷ್ಟು ಹಲವು ಮಹತ್ವದ ಮಾಹಿತಿ...

ಪರೇಶ್ ಮೇಸ್ತ ಸಾಯುವ ಮೊದಲು ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗಿ | ಇನ್ನಷ್ಟು ಹಲವು ಮಹತ್ವದ ಮಾಹಿತಿ ಬಹಿರಂಗ – ಸಿಬಿಐ ವರದಿ

Hindu neighbor gifts plot of land

Hindu neighbour gifts land to Muslim journalist

ದಿವಂಗತ ಪರೇಶ್ ಮೇಸ್ತ ಸಾವಿನ ಬಗ್ಗೆ ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಂಶಗಳು ಈಗ ಮತ್ತಷ್ಟು ಮಹತ್ವ ಪಡೆಯುತ್ತಿದೆ. ಹಿಂದುತ್ವ ಪರ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಪರೇಶ್ ಮೇಸ್ತ ಸಾಯುವ ಮೊದಲು ಕಾಂಗ್ರೆಸ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು ಎಂಬ ಅಂಶವು ಸಿಬಿಐ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖವಾಗಿದೆ ಎಂದು ಮಾಧ್ಯಮ ವರದಿ ಮಾಡಿದೆ.

ಕುಮಟಾದಲ್ಲಿ ಸಿದ್ದರಾಮಯ್ಯ ಪಾಲ್ಗೊಂಡಿದ್ದ ಕಾರ್ಯಕ್ರಮವಲ್ಲಿ ಮೇಸ್ತ ಸಹ ಭಾಗವಹಿಸಿದ್ದರು. ಇದಕ್ಕಾಗಿ 25 ಕಿಮೀ ಪ್ರಯಾಣ ಮಾಡಿದ್ದಾಗಿ ಅನಂತರ ಕಾರ್ಯಕ್ರಮ ಮುಗಿಸಿ ಸಂಜೆ ಮನೆಗೆ ಬಂದಿದ್ದ ಪರೇಶ್ ಮೇಸ್ತ ನಂತರ ಸ್ನೇಹಿತರ ಭೇಟಿಗೆಂದು ಹೊರಗೆ ಹೋಗಿದ್ದರು ಎಂದು ಎಂದು ವರದಿಯು ಉಲ್ಲೇಖಿಸಿದೆ.

ಹೊನ್ನಾವರ ನ್ಯಾಯಾಲಯಕ್ಕೆ ಸಿಬಿಐ ಸಲ್ಲಿಸಿರುವ ವರದಿಯಲ್ಲಿ ಪರೇಶ ಮೇಸ್ತಾ ಒಡನಾಡಿಗಳು ಮತ್ತು ಸ್ನೇಹಿತರ ಹೇಳಿಕೆಗಳನ್ನು ಉಲ್ಲೇಖ ಮಾಡಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳೂ ಸೇರಿದಂತೆ ಸಾಕಷ್ಟು ಸಾಕ್ಷ್ಯಗಳನ್ನು ಪೂರಕ ಪುರಾವೆಯಾಗಿ ಇಲ್ಲಿ ತೆಗೆದುಕೊಳ್ಳಲಾಗಿದೆ. ‘ಪರೇಶ ಮೇಸ್ತ ಯಾವ ಹುಡುಗಿಯನ್ನೂ ಪ್ರೀತಿಸುತ್ತಿರಲಿಲ್ಲ. ಶಬರಿಮಲೆಗೆ ಹೋಗಲು ಸಹ ತಂದೆ ಒಪ್ಪಿಗೆ ಪಡೆದಿದ್ದ. ಕೆಲವೊಮ್ಮೆ ಮದ್ಯ ಸೇವಿಸಿಯೂ ಮನೆಗೆ ಬಂದಿದ್ದ. ಆಗಾಗ ಸ್ನೇಹಿತರ ಮನೆಯಲ್ಲಿ ಇರುತ್ತಿದ್ದ’ ಎಂದು ವರದಿಯಲ್ಲಿ ಸಿಬಿಐ ತಿಳಿಸಿದೆ. ಗಲಭೆ ವೇಳೆ ಪರೇಶ್ ಮೇಸ್ತ ಓಡುತ್ತಿದ್ದಾಗ ಶೆಟ್ಟಿಕೆರೆಯಲ್ಲಿ ಜಾರಿ ಬಿದ್ದು, ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಸಿಬಿಐ ತನಿಖಾ ವರದಿಯಲ್ಲಿ ಹೇಳಿದೆ.

ಅ.18 ರಂದು ಸಿಬಿಐ ಅಧಿಕಾರಿಗಳು ಹೊನ್ನಾವರದ ನ್ಯಾಯಾಲಯಕ್ಕೆ ಪ್ರಕರಣದ ವಿಸ್ತ್ರತ ವರದಿಯನ್ನು ಸಲ್ಲಿಸಿದ್ದಾರೆ. ಈ ವರದಿಯಲ್ಲಿ ಪರೇಶ್ ಮೇಸ್ತನನ್ನು ಕೊಲೆ ಮಡಿರುವ ಯಾವುದೇ ಸಾಕ್ಷ್ಯಗಳಿಲ್ಲ. ಆರೋಪಿಗಳನ್ನು ದೋಷಮುಕ್ತಗೊಳಿಸಬಹುದು ಉಲ್ಲೇಖಿಸಲಾಗಿದೆ.

ಅ.3 ರಂದು ಸಿಬಿಐ ಅಧಿಕಾರಿಗಳು ಹೊನ್ನಾವರದ ನ್ಯಾಯಾಲಯಕ್ಕೆ ಪ್ರಕರಣದ ಮೊದಲ ವರದಿ ಸಲ್ಲಿಕೆ ಮಾಡಿದ್ದರು. ಅದರಲ್ಲಿ ಪರೇಶ್ ಮೇಸ್ತ ಸಾವು ಹತ್ಯೆಯಲ್ಲ, ಆಕಸ್ಮಿಕ ಎಂದು ನ್ಯಾಯಾಲಯಕ್ಕೆ ವರದಿ ಒಪ್ಪಿಸಿದ್ದರು. ಈ ಸಿಬಿಐ ವರದಿಯು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.