Home Interesting ಕೇವಲ 17 ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗುತ್ತದೆಯಂತೆ ಈ ಹೊಸ ಒನ್ ಪ್ಲಸ್ ಫೋನ್ !!...

ಕೇವಲ 17 ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗುತ್ತದೆಯಂತೆ ಈ ಹೊಸ ಒನ್ ಪ್ಲಸ್ ಫೋನ್ !! | ಮಾರುಕಟ್ಟೆಯಲ್ಲಿ ಅನಾವರಣಗೊಂಡಿರುವ ಈ ಹೊಸ ಫೋನ್ ನ ವೈಶಿಷ್ಟ್ಯದ ಕುರಿತು ಇಲ್ಲಿದೆ ಮಾಹಿತಿ

Hindu neighbor gifts plot of land

Hindu neighbour gifts land to Muslim journalist

ಮಾರುಕಟ್ಟೆಗೆ ಆಗಾಗ ಹೊಸ ಫೋನ್ ಗಳು ಲಗ್ಗೆ ಇಡುತ್ತಿರುತ್ತವೆ. ಅಂತೆಯೇ ಇದೀಗ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಒನ್ ಪ್ಲಸ್ ಮಾರುಕಟ್ಟೆಯಲ್ಲಿ ತನ್ನ ಹೊಸ ಫೋನ್ ಒನ್ ಪ್ಲಸ್ ಏಸ್ ಅನ್ನು ಅನಾವರಣಗೊಳಿಸಿದ್ದು, ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಈ ಫೋನ್ ಕೇವಲ 17 ನಿಮಿಷಗಳಲ್ಲೇ ಫುಲ್ ಚಾರ್ಜ್ ಆಗುತ್ತದೆಯಂತೆ !!

ಹೌದು. 4,500mAh ಬ್ಯಾಟರಿ ಸಾಮರ್ಥ್ಯದೊಂದಿಗೆ ಲಭ್ಯವಿರುವ ಈ ಫೋನ್ 150W SuperVOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದ್ದು, ಗ್ರಾಹಕರು ಈ ಸಾಧನವನ್ನು 0% ರಿಂದ 100% ವರೆಗೆ ಕೇವಲ 17 ನಿಮಿಷಗಳಲ್ಲಿ ಫುಲ್ ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ. ಫೇಸ್‌ಲಿಫ್ಟ್‌ನೊಂದಿಗೆ ಬರುವ ಈ ಸ್ಮಾರ್ಟ್‌ಫೋನ್ ಅನ್ನು ಹೊಸ ಮೀಡಿಯಾ ಟೆಕ್ ಡೈಮೆನ್ಶನ್ 8100-ಮ್ಯಾಕ್ಸ್ ಪ್ರೀಮಿಯಂ ಮಧ್ಯಮ ಶ್ರೇಣಿಯ ಎಸ್ಒಸಿ ಜೊತೆಗೆ ಜೋಡಿಸಲಾಗಿದೆ. ವಿಶಿಷ್ಟ ಲುಕ್ ನೊಂದಿಗೆ ಬರುವ ಈ ಫೋನಿನಲ್ಲಿ ಎಲ್ಇಡಿ ಫ್ಲ್ಯಾಷ್ ಜೊತೆಗೆ ಟ್ರಿಪಲ್ ಕ್ಯಾಮರಾವನ್ನು ಒದಗಿಸಲಾಗಿದೆ. ಫೋನ್ ಬಿಗ್ ಸ್ಕ್ರೀನ್, ಸ್ಟ್ರಾಂಗ್ ಬ್ಯಾಟರಿ ಮತ್ತು ಅತ್ಯುತ್ತಮ ಕ್ಯಾಮರಾ ವ್ಯವಸ್ಥೆಯನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

ಒನ್ ಪ್ಲಸ್ ಏಸ್ ಎಫ್ಎಚ್ಡಿ+ ರೆಸಲ್ಯೂಶನ್ ಹೊಂದಿರುವ 6.7-ಇಂಚಿನ ಒಎಲ್ಇಡಿ ಡಿಸ್ಪ್ಲೇ ಬೆಂಬಲಿಸುತ್ತದೆ. ಇದು 360Hz ಟಚ್ ಸ್ಯಾಂಪ್ಲಿಂಗ್ ರೇಟ್, 720Hz ಗೇಮಿಂಗ್ ಟಚ್ ಸ್ಯಾಂಪ್ಲಿಂಗ್ ರೇಟ್ ಜೊತೆಗೆ 120Hz ರಿಫ್ರೆಶ್ ರೇಟ್ ಅನ್ನು ಸಹ ಬೆಂಬಲಿಸುತ್ತದೆ. ಇದು 100% ಡಿಸಿಐಪಿ 3 ಬಣ್ಣದ ಹರವು, HDR10+ ಬೆಂಬಲ ಮತ್ತು 1000 ನಿಟ್‌ಗಳ ಗರಿಷ್ಠ ಹೊಳಪನ್ನು ನೀಡುತ್ತದೆ. ಮುಂಭಾಗದ ಕ್ಯಾಮೆರಾಕ್ಕಾಗಿ ಪರದೆಯು ಮೇಲಿನ ಮಧ್ಯದಲ್ಲಿ ಪಂಚ್-ಹೋಲ್ ಕಟೌಟ್ ಅನ್ನು ಹೊಂದಿದೆ ಎನ್ನಲಾಗಿದೆ.

ಒನ್ ಪ್ಲಸ್ ಏಸ್ ನಲ್ಲಿ ಹೊಸ ಮೀಡಿಯಾ ಟೆಕ್ ಡೈಮೆನ್ಸಿಟಿ 8100-MAX ಎಸ್ಒಸಿ ಆಗಿದೆ. ಹೊಸ ಎಸ್ಒಸಿ 12ಜಿಬಿ ಯ ಎಲ್ಪಿಡಿಡಿಆರ್ 5 ಜಿಬಿ ರಾಮ್ ಮತ್ತು 512ಜಿಬಿ ಯುಎಫ್ಎಸ್ 3.1 ಸಂಗ್ರಹಣೆಯೊಂದಿಗೆ ಬರುತ್ತದೆ. ಆನ್‌ಬೋರ್ಡ್ ಗ್ರಾಫಿಕ್ಸ್ ಜೊತೆಗೆ, ಇಂಗೇಮ್ ಫ್ರೇಮ್‌ರೇಟ್‌ಗಳನ್ನು ಹೆಚ್ಚಿಸಲು ಒನ್ ಪ್ಲಸ್ ಸಾಧನದಲ್ಲಿ ಸ್ವತಂತ್ರ ಗ್ರಾಫಿಕ್ಸ್ ಚಿಪ್ ಅನ್ನು ಸಹ ಅಳವಡಿಸಲಾಗಿದೆ ಎಂದು ತಿಳಿದುಬಂದಿದೆ.

ಒನ್ ಪ್ಲಸ್ ಏಸ್ 8ಜಿಬಿ + 128ಜಿಬಿ ರೂಪಾಂತರದ ಬೆಲೆ – 2499 ಯುವಾನ್ (ರೂ. 29,509), ಒನ್ ಪ್ಲಸ್ ಏಸ್ 8ಜಿಬಿ ರಾಮ್ + 256ಜಿಬಿ ರೂಪಾಂತರದ ಬೆಲೆ – 2699 ಯುವಾನ್ (ರೂ. 31,855), ಒನ್ ಪ್ಲಸ್ ಏಸ್ 12ಜಿಬಿ + 256ಜಿಬಿ ರೂಪಾಂತರ ಬೆಲೆ – 2999 ಯುವಾನ್ (ರೂ. 35,439) ಆಗಿದೆ.

ಸಾಧನವು ಭದ್ರತೆಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ರೀಡರ್‌ನೊಂದಿಗೆ ಬರುತ್ತದೆ ಮತ್ತು ಒನ್ ಪ್ಲಸ್ ನ ಇತಿಹಾಸದಲ್ಲಿ ಅತಿದೊಡ್ಡ ಕೂಲಿಂಗ್ ಪ್ರದೇಶದೊಂದಿಗೆ X- ಆಕ್ಸಿಸ್ ಲೀನಿಯರ್ ಮೋಟಾರ್ ಮತ್ತು ಆವಿ ಚೇಂಬರ್ ಅನ್ನು ಒಳಗೊಂಡಿದೆ. ಫೋನಿನಲ್ಲಿ 5ಜಿ, ಡ್ಯುಯಲ್ 4ಜಿ ಎಲ್ಟಿಇ, ವೈ-ಫೈ 6ಇ, ಬ್ಲೂಟೂತ್ 5.2, ಜಿಪಿಎಸ್, ಎನ್ಎಫ್ಸಿ ಮತ್ತು ಯುಎಸ್ಬಿ ಟೈಪ್-ಸಿ ಪೋರ್ಟ್ ಚಾರ್ಜಿಂಗ್ ಮತ್ತು ಡೇಟಾ ಸಿಂಕ್‌ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಸೇರಿವೆ.

ಒನ್ ಪ್ಲಸ್ ಏಸ್ ಕ್ಯಾಮೆರಾ ವೈಶಿಷ್ಟ್ಯ:

ಒನ್ ಪ್ಲಸ್ ಏಸ್ 50-ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 766 ಪ್ರಾಥಮಿಕ ಸಂವೇದಕದೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ (OIS, 4K, ರಾತ್ರಿ ಮೋಡ್ ಮತ್ತು ಹೆಚ್ಚಿನವುಗಳೊಂದಿಗೆ) ಅನ್ನು ಹೊಂದಿದೆ. ಪ್ರಾಥಮಿಕ ಸಂವೇದಕದೊಂದಿಗೆ, ಫೋನ್ 8-ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್355 ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಸಂವೇದಕವನ್ನು ತರುತ್ತದೆ. ಮುಂಭಾಗದಲ್ಲಿ, ಸ್ಮಾರ್ಟ್ ಫೋನ್ ಸೆಲ್ಫಿಗಳು ಮತ್ತು ವೀಡಿಯೋ ಕರೆಗಾಗಿ 16-ಮೆಗಾಪಿಕ್ಸೆಲ್ ಸ್ಯಾಮ್ಸಂಗ್ ISOCELL S5K3P9SP ಲೆನ್ಸ್ ಅನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.