Home latest Nyaya setu: ಕೇಂದ್ರ ಸರ್ಕಾರದಿಂದ ವಾಟ್ಸಾಪ್‌ನಲ್ಲಿ ಉಚಿತ ಕಾನೂನು ನೆರವು: ‘ನ್ಯಾಯ ಸೇತು’ ಬಳಕೆ ಹೇಗೆ?

Nyaya setu: ಕೇಂದ್ರ ಸರ್ಕಾರದಿಂದ ವಾಟ್ಸಾಪ್‌ನಲ್ಲಿ ಉಚಿತ ಕಾನೂನು ನೆರವು: ‘ನ್ಯಾಯ ಸೇತು’ ಬಳಕೆ ಹೇಗೆ?

Hindu neighbor gifts plot of land

Hindu neighbour gifts land to Muslim journalist

Nyaya setu: ಕೇಂದ್ರ ಸರ್ಕಾರ ಜನರಿಗೆ ವಾಟ್ಸಾಪ್‌ನಲ್ಲಿ ಉಚಿತ ಕಾನೂನು ನೆರವು ಸೇವೆಯನ್ನು ‘ನ್ಯಾಯ ಸೇತು’ ಮೂಲಕ ನೀಡಲಿದೆ. ಬೆರಳ ತುದಿಯಲ್ಲಿಯೇ ನೀವು ಎಲ್ಲಿಂದ ಬೇಕಾದರೂ ಕಾನೂನು ನೆರವು ಪಡೆಯಬಹುದಾಗಿದೆ.

ಇದನ್ನು ಬಳಕೆ ಮಾಡುವುದು ಹೇಗೆ?, ಸೇವೆ ಕಾರ್ಯ ನಿರ್ವವಹಣೆ ಹೇಗೆ?ಮುಂತಾದ ವಿವರಗಳು ಇಲ್ಲಿದೆ.

ಭಾರತ ಸರ್ಕಾರದ ಕಾನೂನು ಮತ್ತು ನ್ಯಾಯ ಸಚಿವಾಲಯ ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ನೀಡಿದೆ. ಸಿವಿಲ್/ ಕ್ರಿಮಿನಲ್ ಕಾನೂನು, ರಕ್ಷಣೆ, ಕಾರ್ಪೊರೇಟ್ ಮತ್ತು ಕೌಟುಂಬಿಕ ವಿವಾದಗಳಂತಹ ವಿವಿಧ ಕ್ಷೇತ್ರಗಳಲ್ಲಿ ಕಾನೂನು ನೆರವು ಪಡೆಯಲು ಜನರು ನ್ಯಾಯ ಸೇತು (Nyaya Setu) ಚಾಟ್‌ಬಾಟ್ ಅನ್ನು ಬಳಕೆ ಮಾಡಬಹುದು, ಈ ಬಳಕೆ ಸಂಪೂರ್ಣ ಉಚಿತವಾಗಿದೆ.ಕಾನೂನು ಸಲಹೆ ಮತ್ತು ಮಾಹಿತಿಯನ್ನು ಪಡೆಯಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ಧೃಢೀಕರಿಸಿ. ಈ ಸ್ಮಾರ್ಟ್ ನ್ಯಾವಿಗೇಷನ್ ಮೂಲಕ ವೃತ್ತಿಪರ ಕಾನೂನು ನೆರವು ಪ್ರತಿ ನಾಗರಿಕರಿಗೂ ಯಾವಾಗಲೂ ವೇಗವಾಗಿ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತದೆ ಎಂದು ಹೇಳಿದೆ.

ನ್ಯಾಯ ಸೇತು ಬಳಸುವುದು ಹೇಗೆ?:

ಜನರು ಮೊದಲು ತಮ್ಮ ವಾಟ್ಸಾಪ್‌ನಲ್ಲಿ 7217711814 ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಿ. ಬಳಿಕ ಈ ಚಾಟ್‌ಬಾಟ್ ಬಳಸಲು ಪ್ರಾರಂಭಿಸಬಹುದು. Tele-Law ಎಂಬ ಆಯ್ಕೆ ನಿಮಗೆ ಕಾಣಿಸಿಕೊಳ್ಳುತ್ತದೆ. ಮೊಬೈಲ್ ಸಂಖ್ಯೆಯ ಧೃಢೀಕರಣದ ನಂತರ ಎಐ ತಂತ್ರಜ್ಞಾನ ಆಧಾರಿತ ನ್ಯಾಯ ಸೇತು ಚಾಟ್‌ಬಾಟ್ ಮೂಲಕ ಕಾನೂನು ಸಲಹೆ ಮತ್ತು ಮಾಹಿತಿ ಪಡೆಯಬಹುದು.