Home latest ವಧುದಕ್ಷಿಣೆ ಕಿರುಕುಳಕ್ಕೆ ನೇಣು ಕೊಟ್ಟನಾ ಹುಡುಗ ? ವಿಚಿತ್ರ ಪ್ರಕರಣ ಹಾಸನದಲ್ಲಿ ಬಯಲಿಗೆ !

ವಧುದಕ್ಷಿಣೆ ಕಿರುಕುಳಕ್ಕೆ ನೇಣು ಕೊಟ್ಟನಾ ಹುಡುಗ ? ವಿಚಿತ್ರ ಪ್ರಕರಣ ಹಾಸನದಲ್ಲಿ ಬಯಲಿಗೆ !

Hindu neighbor gifts plot of land

Hindu neighbour gifts land to Muslim journalist

 

ನವವಿವಾಹಿತನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದಲ್ಲಿ ನಡೆದಿದೆ. ಚನ್ನರಾಯಪಟ್ಟಣ ತಾಲೂಕಿನ ಕರಿಯಪ್ಪನಗುಡಿ ಗ್ರಾಮದಲ್ಲಿ ಈ ಘಟ ಈ ನಡೆದಿದೆ. 26 ವರ್ಷದ ಕಿರಣ್ ಬಿ.ಬಿ..ಎಂಬಾತನೇ ಮೃತ ಯುವಕ. ಮೂಲತಃ ಚನ್ನರಾಯಪಟ್ಟಣ ತಾಲ್ಲೂಕಿನ ಉದಯಪುರ ಗ್ರಾಮದವನಾದ ಕಿರಣ್, ಬೇಕರಿ ನಡೆಸುತ್ತಿದ್ದ ಈತ ಕುಟುಂಬ ಜಗಳಕ್ಕೆ ಮೃತನಾಗಿದ್ದಾನೆ. ಆತನಿಗೆ ಮದುವೆಯಾಗಿ ಒಂದು ವರ್ಷವೂ ಕಳೆದಿಲ್ಲ.

ಕಳೆದ ಫೆಬ್ರವರಿ 19 ರಂದು ದಂಡಿಗನಹಳ್ಳಿ ಹೋಬಳಿಯ ವಗರಹಳ್ಳಿ ಗ್ರಾಮದ 24 ವರ್ಷದ ಸ್ಪಂದನಾಳನ್ನು ಪ್ರೀತಿಸಿ ಮದುವೆಯಾಗಿದ್ದ. ಮದುವೆಯಾದ ಮೇಲೆ ಪತ್ನಿ ಸ್ಪಂದನಾ ಸೇರಿ ಆಕೆಯ ತಂದೆ ವಾಸು, ತಾಯಿ ಗೀತಾ, ಅಜ್ಜಿ ರತ್ನಮ್ಮ ಹಣಕ್ಕಾಗಿ ಬೇಡಿಕೆಯಿಟ್ಟು ಕಿರುಕುಳ ನೀಡುತ್ತಿದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಮದುವೆ ಆಗಿ 1 ವರ್ಷ ಕೂಡಾ ಆಗಿಲ್ಲ. ಅಷ್ಟರಲ್ಲೇ ಕೌತುಂಬಿಕ ಕಿರುಕುಳ ಜೋರಾಗಿದೆ ಎನ್ನಲಾಗಿದೆ.

ಅಷ್ಟರಲ್ಲಿಯೇ ಕಿರಣ್ ವಿರುದ್ಧ ಸುಳ್ಳು ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಿದ್ದ ಬಗ್ಗೆ ಕಿರಣ್ ಪೋಷಕರು ಆರೋಪ ಮಾಡಿದ್ದಾರೆ. ಆರೋಪದ ಮೇಲೆ ಜೈಲು ಪಾಲಾಗಿದ್ದ ಕಿರಣ್ ಒಂದು ವಾರದ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಪತ್ನಿ ಮತ್ತು ಕುಟುಂಬದಿಂದ ಆದ ನೋವಿನಿಂದ ಮನನೊಂದು ಆತ ಸಾವಿಗೆ ಶರಣಾಗಿದ್ದಾನೆ. ಮೊನ್ನೆ ಜುಲೈ 31ರ ರಾತ್ರಿ ಮರಕ್ಕೆ ನೇಣು ಬಿಗಿದುಕೊಂಡು ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಹೊಳೇನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.