Home latest ಮಂಗಳೂರು:ಅಪಘಾತಗಳಲ್ಲಿ ತನ್ನವರನ್ನು ಕಳೆದುಕೊಂಡ ಹಿನ್ನೆಲೆ!! ರೈಲಿನಡಿಗೆ ತಲೆ ಕೊಟ್ಟು ನವವಿವಾಹಿತ ಆತ್ಮಹತ್ಯೆ!!

ಮಂಗಳೂರು:ಅಪಘಾತಗಳಲ್ಲಿ ತನ್ನವರನ್ನು ಕಳೆದುಕೊಂಡ ಹಿನ್ನೆಲೆ!! ರೈಲಿನಡಿಗೆ ತಲೆ ಕೊಟ್ಟು ನವವಿವಾಹಿತ ಆತ್ಮಹತ್ಯೆ!!

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ಕೆಲ ವರ್ಷಗಳ ಹಿಂದೆ ತನ್ನ ತಾಯಿ ಹಾಗೂ ಇತ್ತೀಚೆಗೆ ತನ್ನ ಅಣ್ಣನನ್ನು ಅಪಘಾತದಲ್ಲಿ ಕಳೆದುಕೊಂಡ ನೋವನ್ನು ಸಹಿಸಿಕೊಳ್ಳಲಾಗದ ನವವಿವಾಹಿತ ಯುವಕನೋರ್ವ ರೈಲಿನಡಿಗೆ ತಲೆ ಇಟ್ಟು ಆತ್ಮಹತ್ಯೆಗೆ ಶರಣಾದ ಘಟನೆಯೊಂದು ಮಂಗಳೂರು ನಗರದ ಹೊರವಲಯದ ಎಕ್ಕೂರು ಎಂಬಲ್ಲಿ ನಡೆದಿದೆ.ಮೃತ ಯುವಕನನ್ನು ಖಾಸಗಿ ಕಂಪನಿಯೊಂದರ ಮಾರ್ಕೆಟಿಂಗ್ ಮ್ಯಾನೇಜರ್,ಜಪ್ಪಿನಮೊಗರು ನಿವಾಸಿ ಧೀರಜ್ ಕುಲಾಲ್(32) ಎಂದು ಗುರುತಿಸಲಾಗಿದೆ.

ಘಟನೆ ವಿವರ: ಮೃತ ಯುವಕ ಧೀರಜ್ ಅವರ ತಾಯಿ 1995ರಲ್ಲಿ ನಡೆದ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು.ಇದಾದ ಬಳಿಕ ತಂದೆ ಮಕ್ಕಳನ್ನು ತೊರೆದಿದ್ದು, ಬಳಿಕ ದೊಡ್ಡಮ್ಮನ ಆರೈಕೆಯಲ್ಲಿ ದಿನ ಕಳೆದಿದ್ದರು ಎನ್ನಲಾಗಿದೆ.

ಆದರೆ ಕಳೆದ ಎರಡು ವರ್ಷಗಳ ಹಿಂದೆ ಧೀರಜ್ ಅವರ ಸಹೋದರ ಪುಷ್ಪರಾಜ್ ಎಂಬವರು ನಗರದ ಹೊರವಲಯದ ಪದವಿನಂಗಡಿಯಲ್ಲಿ ನಡೆದ ಅಪಘಾತವೊಂದರಲ್ಲಿ ಮೃತಪಟ್ಟಿದ್ದು ಇಡೀ ಕುಟುಂಬಕ್ಕೆ ದೊಡ್ಡ ಆಘಾತವಾಗಿತ್ತು. ಇದರಿಂದ ಬೇಸತ್ತ ಧೀರಜ್ ಜೀವನವೇ ಬೇಡ ಎನ್ನುವ ದುಡುಕಿನ ನಿರ್ಧಾರದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಮೃತರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬದಲ್ಲಿ ಸ್ಮಶಾನ ಮೌನ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.