Home latest Missing…ಸೊರೆನ್‌ ಬಗ್ಗೆ ಮಾಹಿತಿ ನೀಡಿ ಬಹುಮಾನ ಪಡೆಯಿರಿ-ಬಿಜೆಪಿ ಮುಖಂಡ ಘೋಷಣೆ!!!

Missing…ಸೊರೆನ್‌ ಬಗ್ಗೆ ಮಾಹಿತಿ ನೀಡಿ ಬಹುಮಾನ ಪಡೆಯಿರಿ-ಬಿಜೆಪಿ ಮುಖಂಡ ಘೋಷಣೆ!!!

Hindu neighbor gifts plot of land

Hindu neighbour gifts land to Muslim journalist

Hemant Soren: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಕುರಿತಂತೆ ಝಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಹೊಸದಿಲ್ಲಿಯಲ್ಲಿ ಜಾರಿ ನಿರ್ದೇಶನಾಲಯ ವಿಚಾರನೆಗೆ ಗೈರಾಗಿ ನಾಪತ್ತೆಯಾಗಿದ್ದಾರೆ.

ಹೇಮಂತ್‌ ಸೋರೇನ್‌ ಅವರ ನಿವಾಸ ಹೊಸದಿಲ್ಲಿಯಲ್ಲಿ ಇ.ಡಿ. ಅಧಿಕಾರಿಗಳು ತಡರಾತ್ರಿಯವರೆಗೆ ಶೋಧ ನಡೆಸಿ ಅವರಿಗೆ ಸಂಬಂಧಿಸಿದ ಎರಡು ಕಾರುಗಳು ಸೇರಿ 35ಲಕ್ಷ ಹಣವನ್ನು ವಶಕ್ಕೆ ಪಡೆದಿದ್ದಾರೆ.

ಇದರ ನಡುವೆ ಬಿಜೆಪಿ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಬಾಬುಲಾಲ್‌ ಮರಾಂಡಿ ಅವರು ಸೊರೇನ್‌ ನಾಪತ್ತೆ ಕುರಿತು ವ್ಯಂಗ್ಯವಾಡಿದ್ದಾರೆ. ಹಾಗೂ ಈ ಕುರಿತು x ಖಾತೆಯಲ್ಲಿ ಹೇಮಂತ್‌ ಸೊರೇನ್‌ ಕಾಣೆಯಾಗಿದ್ದಾರೆ ಎಂದು ಪೋಸ್ಟರ್‌ ಮಾಡಿದ್ದಾರೆ. ಹಾಗೂ ನಗದು ಬಹುಮಾನ ಗೆಲ್ಲುವ ಅವಕಾಶ ಇದೆ ಎಂದು ಹೇಳಿದ್ದಾರೆ.

ಫೋಟೋ ಸಮೇತ ಪೋಸ್ಟ್‌ ಮಾಡಿದ್ದು, ಬಿಳಿ ಅಂಗಿ, ಕಪ್ಪು ಪ್ಯಾಂಟ್‌, ಚಪ್ಪಲಿಯನ್ನು ಧರಿಸಿದ್ದು 5 ಅಡಿ 2 ಇಂಚು ಎತ್ತರ ಇದ್ದಾರೆ ಎಂದು ಬರೆದುಕೊಂಡಿದ್ದಾರೆ.