Home latest Bhopal News: ಮಹಿಳಾ ಪೇದೆಯಿಂದ ಲಿಂಗ ಬದಲಾವಣೆ- ಸರಕಾರದಿಂದ ಒಪ್ಪಿಗೆ

Bhopal News: ಮಹಿಳಾ ಪೇದೆಯಿಂದ ಲಿಂಗ ಬದಲಾವಣೆ- ಸರಕಾರದಿಂದ ಒಪ್ಪಿಗೆ

Hindu neighbor gifts plot of land

Hindu neighbour gifts land to Muslim journalist

Bophal: ಪುರುಷನಾಗಿ (Men)ಬದಲಾಗುವ ಇಂಗಿತ ವ್ಯಕ್ತಪಡಿಸಿ ಲಿಂಗ ಬದಲಾವಣೆ ಆಪರೇಷನ್ ಮಾಡಿಸಿಕೊಳ್ಳಲು ಅನುಮತಿ ಕೋರಿದ್ದ ಮಹಿಳಾ ಪೊಲೀಸ್ ಕಾನ್ಸ್ಟೆಬಲ್ ಗೆ ಮಧ್ಯಪ್ರದೇಶ (Madya Pradesh)ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

ಮಧ್ಯಪ್ರದೇಶದ ರಾತ್ಲಮ್ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಪೇದೆ ದೀಪಿಕಾ ಕೋಥಾರಿ ಪುರುಷನಾಗಿ ಬದಲಾಗಲು ಬಯಸಿದ ಮಹಿಳಾ ಪೇದೆಯಾಗಿದ್ದು, ಸದ್ಯ, ಲಿಂಗ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಹೌದು!! ಕಳೆದ ವರ್ಷ ಗೃಹ ಇಲಾಖೆಗೆ ದೀಪಿಕಾ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ಪುರಸ್ಕರಿಸಿರುವ ಗೃಹ ಇಲಾಖೆ ಲಿಂಗ ಬದಲಾವಣೆಗೆ ಗ್ರೀನ್ ಸಿಗ್ನಲ್ ನೀಡಿದೆ.

ಕಾನೂನು ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪನ್ನು ಪರಿಗಣಿಸಿ ಲಿಂಗ ಬದಲಾವಣೆಗೆ ಅನುಮತಿ ನೀಡುವ ನಿರ್ಧಾರವನ್ನು ಗೃಹ ಇಲಾಖೆ ಕೈಗೊಂಡಿದೆ. ಸರ್ಕಾರಿ ನೌಕರರಿಗೆ ಲಿಂಗ ಬದಲಾವಣೆಯನ್ನು ಅನುಮತಿಸಲು ಯಾವುದೇ ಸ್ಪಷ್ಟ ನಿಯಮಗಳಿಲ್ಲ ಎಂದು ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ. ದೀಪಿಕಾ ಅವರು ಸಲ್ಲಿಸಿದ್ದ ವೈದ್ಯಕೀಯ ವರದಿಗಳ ಆಧಾರದ ಮೇರೆಗೆ ಲಿಂಗ ಬದಲಾವಣೆಗೆ ಅವಕಾಶ ನೀಡಲಾಗಿದೆ. ಡಾ. ರಾಜೀವ್ ಶರ್ಮಾ ಎಂಬುವರು ಆಪರೇಷನ್ ಮಾಡಲಿದ್ದಾರೆ ಎಂದು ವರದಿಯಾಗಿದೆ.ಆದರೆ, ಲಿಂಗ ಬದಲಾವಣೆಯ ಬಳಿಕ ದೀಪಿಕಾ ಅವರಿಗೆ ಮಹಿಳಾ ನೌಕರರಿಗೆ (women Workers)ಸಿಗುವ ಯಾವುದೇ ಸವಲತ್ತುಗಳು ಸಿಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.