Home latest Anchor: ವರದಿ ಮಾಡೋವಾಗ ಲೇಡಿ ರಿಪೋರ್ಟರ್ ನ ಖಾಸಗಿ ಅಂಗ ಮುಟ್ಟಿದ ಭೂಪ !! ಮಾಡೋದ್...

Anchor: ವರದಿ ಮಾಡೋವಾಗ ಲೇಡಿ ರಿಪೋರ್ಟರ್ ನ ಖಾಸಗಿ ಅಂಗ ಮುಟ್ಟಿದ ಭೂಪ !! ಮಾಡೋದ್ ಮಾಡಿ ಆತ ಹೇಳಿದ್ದೇನು ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

Spane: ದಿನಂಪ್ರತಿ ಅದೆಷ್ಟೋ ಕ್ರಿಮಿನಲ್ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ.ಇದೀಗ, ವರದಿಗಾರ್ತಿಯೊಬ್ಬಳು ಲೈವ್ ರಿಪೋರ್ಟ್ ಮಾಡುವ ಸಂದರ್ಭ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿಯೊಬ್ಬ ರಿಪೋರ್ಟರ್ (Reporter)ಒಬ್ಬಳ ಖಾಸಗಿ ಅಂಗವನ್ನು(Private Part)ಸ್ಪರ್ಶಿಸುವ ಮೂಲಕ ಅನುಚಿತವಾಗಿ ವರ್ತಿಸಿದ ಹೇಯ ಕೃತ್ಯ ಸ್ಪೇನ್ನಲ್ಲಿ(Spane)ವರದಿಯಾಗಿದೆ.

ಸ್ಪೇನ್ ರಾಜಧಾನಿ ಮ್ಯಾಡ್ರಿಡ್ನಲ್ಲಿ ಪತ್ರಕರ್ತೆ ಇಸಾ ಬಲ್ಲಾಡೋ ಸ್ಪೇನ್ ನಲ್ಲಿ ನಡೆದ ದರೋಡೆಯ ಬಗ್ಗೆ ಲೈವ್ ರಿಪೋರ್ಟ್ ನೀಡುತ್ತಿದ್ದ ಸಂದರ್ಭ ಅಲ್ಲಿಗೆ ಬಂದ ಆಗಂತುಕ ಹಿಂದಿನಿಂದ ಆಕೆಯ ಖಾಸಗಿ ಅಂಗವನ್ನು ಸ್ಪರ್ಶಿಸಿದ್ದು, ಇದರಿಂದ ಇಸಾ ಮುಜುಗರಕ್ಕೀಡಾದ ಘಟನೆ ನಡೆದಿದೆ. ಇಷ್ಟಕ್ಕೆ ಸುಮ್ಮನಾಗದ ಭೂಪ ಇಸಾ ಅವರು ಯಾವ ಟೆಲಿವಿಷನ್ನಲ್ಲಿ(Telivision)ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನ ಪಟ್ಟಿದ್ದಾನೆ. ಇದಕ್ಕೆ ಇಸಾ, ನಾವು ಯಾವ ಟಿವಿ ಸ್ಟೇಷನ್ ಎಂದು ತಿಳಿದುಕೊಳ್ಳಲು ನನ್ನನ್ನು ಮುಟ್ಟಬೇಕೆ? ನಾನು ಲೈವ್ ರಿಪೋರ್ಟ್(Live Report)ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media)ಹರಿದಾಡುತ್ತಿದೆ.

ಈ ಸಂದರ್ಭದಲ್ಲಿ ಆ ವ್ಯಕ್ತಿ ನಾನೇನು ತಪ್ಪು ಮಾಡಿಲ್ಲ. ನಾನು ನಿಮ್ಮನ್ನು ಮುಟ್ಟಿಯೇ ಇಲ್ಲ ಹೇಳಿದ್ದು, ನಾನು ನಿಮ್ಮದನ್ನು ಮುಟ್ಟಲು ಬಯಸಲಿಲ್ಲ. ನಾನು ನಿಮ್ಮನ್ನು ಗೌರವಿಸುತ್ತೇನೆ, ನಿಮಗೆ ಗೊತ್ತಿದೆ, ನಾನು ನಿಮ್ಮದನ್ನು ಮುಟ್ಟುವುದಿಲ್ಲ ಎಂದು ಮತ್ತೆ ಮತ್ತೆ ಹೇಳುವ ಮೂಲಕ ಉದ್ಧಟತನ ಮೆರೆದ ಅಸಹ್ಯಕರ ಘಟನೆ ನಡೆದಿದ್ದು, ವೈರಲ್ ಆದ ವಿಡಿಯೋದಲ್ಲಿ ಇಬ್ಬರ ಸಂಭಾಷಣೆ ಕೇಳುತ್ತದೆ.

ಇತ್ತ ಸ್ಟುಡಿಯೋದಿಂದ ವಿಡಿಯೋ ವೀಕ್ಷಣೆ ಮಾಡುತ್ತಿದ್ದ ಟಿವಿ ನಿರೂಪಕ ಮಧ್ಯಪ್ರವೇಶಿಸಿ ಘಟನೆಯನ್ನು ಸಂಭಾಳಿಸುವ ಪ್ರಯತ್ನ ಮಾಡಿದ್ದಾರೆ. ಖಾಸಗೀ ಅಂಗವನ್ನು ಮುಟ್ಟಿದ್ದನ್ನ ಅರಿತ ನಿರೂಪಕ ಆಕ್ರೋಶಗೊಂಡು ಆರೋಪಿಯನ್ನು ಕ್ಯಾಮೆರಾ ಮುಂದೆ ಬರುವಂತೆ ಹೇಳಿದ್ದು, ಈ ವೇಳೆ ಕೂಡ ಭೂಪ ತಾನೇನು ತಪ್ಪು ಮಾಡಿಲ್ಲ ಎಂದು ಸಮರ್ಥನೆ ನೀಡಿದ್ದಾನೆ. ವರದಿಗಾರ್ತಿ ಪೊಲೀಸರಿಗೆ ದೂರು ನೀಡಿದ್ದು, ಸ್ಪೇನ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.