Home latest ಮಗುವನ್ನು ಸಾಕಲು ಕಷ್ಟವಾಗಿ ಎಂಟು ದಿನಗಳ ಮಗುವನ್ನು ಐದು ಸಾವಿರ ರೂಪಾಯಿಗೆ ಮಾರಾಟ ಮಾಡಿದ ಪಾಪಿ...

ಮಗುವನ್ನು ಸಾಕಲು ಕಷ್ಟವಾಗಿ ಎಂಟು ದಿನಗಳ ಮಗುವನ್ನು ಐದು ಸಾವಿರ ರೂಪಾಯಿಗೆ ಮಾರಾಟ ಮಾಡಿದ ಪಾಪಿ ತಾಯಿ!!

Hindu neighbor gifts plot of land

Hindu neighbour gifts land to Muslim journalist

ಯಾವುದೇ ತಾಯಿಯು ತನ್ನ ಮಗುವನ್ನು ಎಂದಿಗೂ ಕಳೆದುಕೊಳ್ಳಲು ಬಯಸುವುದಿಲ್ಲ. ಆದರೆ ಇಲ್ಲೊಂದು ಕಡೆ ಪಾಪಿ ತಾಯಿ ತನ್ನ ಎಂಟು ದಿನದ ಮಗುವನ್ನೇ ಮಾರಾಟ ಮಾಡಿರುವ ಘಟನೆ ನಡೆದಿದೆ.

ನವಜಾತ 8 ದಿನಗಳ ಗಂಡು ಮಗುವನ್ನು 5
ಸಾವಿರ ರೂಪಾಯಿಗೆ ಮಾರಾಟ ಮಾಡಿದ
ಪ್ರಕರಣ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಬೆಳಕಿಗೆ
ಬಂದಿದೆ.

ಮಗು ಸಾಕಲು ಸಾಧ್ಯವಾಗದೆ ತಾಯಿಯೊಬ್ಬಳು
ಮಗುವನ್ನು ಮಾರಾಟ ಮಾಡಿದ್ದಾಳೆ. ಮಗುವಿನ
ತಾಯಿ ರೇಣುಕಾ ಕಾಂಬೈ ನರ್ಸ್ ಕಸ್ತೂರಿ
ಮೂಲಕ ಮಾರಾಟ ಮಾಡಿರುವುದು ತನಿಖೆ ವೇಳೆ
ಗೊತ್ತಾಗಿದೆ.

ಮಾರಾಡ ಮಾಡಿದ 2 ದಿನಗಳ ಬಳಿಕ ಮಗು
ಬೇಕು ಎಂದು ಆಸ್ಪತ್ರೆಗೆ ಬಂದಿದ್ದು,ಮಗು
ಸಿಗದೇ ಇದ್ದಾಗ ಸಹಾಯವಾಣಿಗೆ ಮೊರೆ
ಹೋಗಿದ್ದಾಳೆ. ಆಗ ಮಗುವಿನ ಮಾರಾಟ
ಜಾಲದಲ್ಲಿ ಕಸ್ತೂರಿ ಭಾಗಿಯಾಗಿರುವುದು ಕಂಡು
ಬಂದಿದ್ದು ಜಿಲ್ಲಾಡಳಿತ ಅಮಾನತು ಮಾಡಿದೆ.

ನರ್ಸ್ ಕಸ್ತೂರಿ ಮತ್ತು ಆಕೆಯ ಪತಿ
ಮಂಜುನಾಥ್ ಪಡಸಲಗಿ ವಿರುದ್ಧ ಪ್ರಕರಣ
ದಾಖಲಾಗಿದ್ದು ಇದುವರೆಗೆ ಮಗುವಿನ ಸುಳಿವು
ಪತ್ತೆಯಾಗಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.