Home Entertainment ತನ್ನ ಮನೆಯಲ್ಲಿ ವಾಸಿಸಬೇಕಾದರೆ ಬಾಡಿಗೆ ನೀಡಬೇಕೆಂದು ಮಗಳಿಗೆ ತಾಯಿ ತಾಕೀತು !!? | ಅಷ್ಟಕ್ಕೂ ತಾಯಿ...

ತನ್ನ ಮನೆಯಲ್ಲಿ ವಾಸಿಸಬೇಕಾದರೆ ಬಾಡಿಗೆ ನೀಡಬೇಕೆಂದು ಮಗಳಿಗೆ ತಾಯಿ ತಾಕೀತು !!? | ಅಷ್ಟಕ್ಕೂ ತಾಯಿ ಈ ನಿರ್ಧಾರ ಕೈಗೊಳ್ಳಲು ಕಾರಣವಾದರೂ ಏನು??

Hindu neighbor gifts plot of land

Hindu neighbour gifts land to Muslim journalist

ಸಾಮಾನ್ಯವಾಗಿ ಬೇರೆಯವರಿಗೆ ಮನೆ ಬಾಡಿಗೆ ನೀಡಿದಾಗ ಅವರಿಂದ ರೆಂಟ್ ಪಡೆದುಕೊಳ್ಳೋದು ಸಾಮಾನ್ಯ.ಆದರೆ ಇಲ್ಲೊಂದು ಕಡೆ ಯಾರು ಯಾರಿಂದ ಬಾಡಿಗೆ ಹಣ ಸ್ವೀಕರಿಸಿದ್ದಾರೆ ಎಂದು ತಿಳಿದರೆ ಆಶ್ಚರ್ಯ ಆಗೋದಂತೂ ಗ್ಯಾರಂಟಿ.ನಾವೆಲ್ಲರೂ ತಿಳಿದ ಪ್ರಕಾರ ಪ್ರತಿಯೊಬ್ಬ ತಂದೆ-ತಾಯಿಗೂ ತಮ್ಮ ಮಕ್ಕಳೇ ಸರ್ವಸ್ವ. ತಮ್ಮ ಮಕ್ಕಳಿಗೆ ಯಾವುದೇ ರೀತಿಯ ಕಷ್ಟ ಬರಬಾರದೆಂದು ಯೋಚಿಸುತ್ತಾರೆ.ತಮ್ಮ ಮಕ್ಕಳನ್ನು ಚೆನ್ನಾಗಿ ಬೆಳೆಸಬೇಕೆಂದು ಬಯಸುತ್ತಾರೆ.ಇನ್ನೂ ಕೆಲವರು ಮಕ್ಕಳಿಗೆ ಕಷ್ಟದ ಬಗ್ಗೆ ಅರಿವಾಗಬೇಕೆಂದು ಹಲವಾರು ಷರತ್ತುಗಳ್ನು ವಿಧಿಸುತ್ತಾರೆ.ಇದೇ ರೀತಿ ತನ್ನ ಮಗಳಿಗೆ ಜೀವನದ ಕಷ್ಟ ಅರಿವಾಗಲೆಂದು ತಾಯಿ ಮಾಡಿದ ಕೆಲಸ ಮೆಚ್ಚುವಂತದ್ದೇ.

ಹೌದು.ನ್ಯೂಜಿಲೆಂಡ್‌ನಲ್ಲಿರುವ ಮಹಿಳೆಯೊಬ್ಬರು ತಮ್ಮ ಮನೆಯಲ್ಲಿ ವಾಸಿಸಬೇಕೆಂದ್ರೆ ತನ್ನ ಮಕ್ಕಳಿಂದ ಬಾಡಿಗೆ ಪಡೆಯುವುದಾಗಿ ಟಿಕ್ ಟಾಕ್ ನಲ್ಲಿ ಹೇಳಿದ್ದಾರೆ. ಇದು ಆನ್‌ಲೈನ್‌ನಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ್ದು,ಟಿಕ್‌ಟಾಕ್‌ನಲ್ಲಿ ಇದರ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಭಾರಿ ವೈರಲ್ ಆಗಿದೆ.

ಅಷ್ಟಕ್ಕೂ ಆಕೆಯ ಈ ನಿರ್ಧಾರಕ್ಕೆ ಕಾರಣ ಏನೆಂಬ ಕುತೂಹಲ ನಿಮಗೆ ಇರಬೇಕಲ್ಲ?ಉತ್ತರ ಇಲ್ಲಿದೆ ನೋಡಿ. ಮಹಿಳೆ ತನ್ನ ಪುತ್ರಿಯ ಜೊತೆಗೆ ಆಟವಾಡಿದ ಕೇಟ್, ಪೆನ್ ಅನ್ನು ಕಪ್ ಗೆ ಎಸೆಯಬೇಕು ಎಂದು ಹೇಳಿದ್ದಾಳೆ. ಈ ಆಟದಲ್ಲಿ ಕೇಟ್ ಮಗಳು 18 ವರ್ಷದ ಲತೀಶಾ ಸೋತಿದ್ದಾಳೆ. ಆಟದಲ್ಲಿ ಸೋತ ಮಗಳಿಗೆ, ಮುಂದಿನ ವರ್ಷದಿಂದ ಮನೆಯಲ್ಲಿ ವಾಸ ಮಾಡಬೇಕಂದ್ರೆ ಬಾಡಿಗೆ ಪಾವತಿಸಬೇಕು ಎಂದು ವಿಶಿಷ್ಠ ಷರತ್ತು ಇಟ್ಟಿದ್ದಾಳೆ.

ಕೇಟ್ ಮಗಳು ಪ್ರತಿ ತಿಂಗಳು 2600 ರೂಪಾಯಿ ಬಾಡಿಗೆ ನೀಡಬೇಕಾಗಿದೆ. ಏನೂ ಉಚಿತವಲ್ಲದ ಈ ಪ್ರಪಂಚದ ಬಗ್ಗೆ ತನ್ನ ಮಗಳಿಗೆ ಈ ಮೂಲಕ ಕಲಿಸಲು ತಾಯಿಬಯಸಿದ್ದಾಳೆ ಎಂಬುದು ಮೆಚ್ಚುವಂತಹ ವಿಷಯವೇ ಸರಿ.ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆದ ನಂತರ,ನೆಟ್ಟಿಗರು ಶಾಕ್ ಆಗಿದ್ದಾರೆ.ಹಲವಾರು ಮಂದಿ ತಮ್ಮದೇ ಆದಂತಹ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಆದರೆ, ನಕಾರಾತ್ಮಕ ಕಾಮೆಂಟ್‌ಗಳು ತನಗೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕೇಟ್ ಹೇಳಿದ್ದಾರೆ.ಕೇಟ್ ಳ ಈ ನಿರ್ಧಾರಕ್ಕೆ ಅನೇಕರು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದು,ಮಗಳ ಬಾಡಿಗೆಯನ್ನು ಯಾರು ತೆಗೆದುಕೊಳ್ಳುತ್ತಾರೆ ? ಇದು ನಾಚಿಕೆಗೇಡು ಅಂತೆಲ್ಲಾ ಪ್ರತಿಕ್ರಿಯಿಸಿದ್ದಾರೆ.