Home Interesting ಕೇವಲ 199 ರೂ.ಗೆ ಖರೀದಿಸಿ ಸೊಳ್ಳೆ ಕಿಲ್ಲರ್ ಬಲ್ಬ್ | ಈ ಬಲ್ಬ್ ನಿಂದ ಬೆಳಕೂ...

ಕೇವಲ 199 ರೂ.ಗೆ ಖರೀದಿಸಿ ಸೊಳ್ಳೆ ಕಿಲ್ಲರ್ ಬಲ್ಬ್ | ಈ ಬಲ್ಬ್ ನಿಂದ ಬೆಳಕೂ ಸಿಗುತ್ತೆ, ಸೊಳ್ಳೆ ಕಾಟದಿಂದ ಮುಕ್ತಿನೂ ದೊರಕುತ್ತೆ !!

Hindu neighbor gifts plot of land

Hindu neighbour gifts land to Muslim journalist

ಸೊಳ್ಳೆಗಳ ಕಾಟ ಯಾರ ಮನೆಯಲ್ಲಿ ಕಮ್ಮಿ ಹೇಳಿ. ಮಳೆಗಾಲ ಪ್ರಾರಂಭವಾದ ಮೇಲಂತೂ ದಿನೇ ದಿನೇ ಸೊಳ್ಳೆಗಳು ಹೆಚ್ಚುತ್ತಿವೆ. ಸೊಳ್ಳೆಗಳ ಕಾಟವನ್ನು ತಪ್ಪಿಸಲು ನಾನಾ ರೀತಿಯ ಕಸರತ್ತು ಮಾಡಿರುತ್ತೇವೆ. ಆದರೆ ಇವೆಲ್ಲವೂ ಕೆಲವೊಮ್ಮೆ ಯಾವುದೇ ರೀತಿಯಲ್ಲಿಯೂ ಪ್ರಯೋಜನವಾಗುವುದಿಲ್ಲ. ಆದರೆ ಮಾರುಕಟ್ಟೆಗೆ ಬಂದಿರುವ ಈ ಹೊಸ ಬಲ್ಬ್ ಬಳಸಿದರೆ ಸೊಳ್ಳೆ ಕಾಟದಿಂದ ಶಾಶ್ವತವಾಗಿ ಮುಕ್ತಿ ಪಡೆಯಬಹುದಂತೆ !!

ಈ ಬಲ್ಬ್‌ ಬೆಳಕು ನೀಡುತ್ತದೆ. ಇದರಿಂದ ಹೊರ ಹೊಮ್ಮುವ ಬೆಳಕು ಸೊಳ್ಳೆಗಳನ್ನು ತನ್ನ ಕಡೆಗೆ ಆಕರ್ಷಿಸುತ್ತದೆ. ಹೀಗೆ ಒಮ್ಮೆ ಈ ಬೆಳಕಿನೆಡೆಗೆ ಸೊಳ್ಳೆ ಹೋಯಿತೆಂದರೆ ಅಲ್ಲೇ ಸತ್ತು ಬೀಳುತ್ತದೆ. ಮಲಗುವ ಕೋಣೆ, ಲಿವಿಂಗ್ ರೂಂ, ಅಥವಾ ಕಚೇರಿಯಲ್ಲಿಯೂ ಈ ಬಲ್ಬ್ ಅನ್ನು ಇರಿಸಬಹುದು. ಈ ಬಲ್ಬ್ ತುಂಬಾ ಹಗುರವಾದ ಮತ್ತು ಸೊಗಸಾದ ವಿನ್ಯಾಸದಲ್ಲಿ ಬರುತ್ತದೆ. ಇದು ಸೊಳ್ಳೆಗಳನ್ನು ಕೊಲ್ಲುವುದರ ಜೊತೆಗೆ ನೈಟ್ ಲ್ಯಾಂಪ್ ಆಗಿಯೂ ಕಾರ್ಯನಿರ್ವಹಿಸುತ್ತದೆ.

ಈ ಸೊಳ್ಳೆ ಕಿಲ್ಲರ್ ಬಲ್ಬ್ ಅನ್ನು ಮಾರುಕಟ್ಟೆಯಲ್ಲಿ ಕೇವಲ 299 ರೂ.ಗೆ ಖರೀದಿಸಬಹುದು. ಯಾವುದೇ ಶ್ರಮವಿಲ್ಲದೆ ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಬಹುದು. ನೀವು ಆನ್‌ಲೈನ್‌ನಲ್ಲಿ ಈ ಬಲ್ಬ್ ಅನ್ನು ಖರೀದಿಸುವುದಾದರೆ ಫ್ಲಿಪ್‌ಕಾರ್ಟ್‌ನಲ್ಲಿ ಕೂಡಾ ಇದು ಲಭ್ಯವಿದೆ. ಇಲ್ಲಿ ಇನ್ನೂ ಕಡಿಮೆ ಬೆಲೆಗೆ ಈ ಬಲ್ಬ್ ಅನ್ನು ಖರೀದಿಸಬಹುದು. ಫ್ಲಿಪ್ ಕಾರ್ಟ್ ನಲ್ಲಿ ಕೇವಲ 199 ರೂ. ಗೆ ಈ ಸೊಳ್ಳೆ ಕಿಲ್ಲರ್ ಬಲ್ಬ್ ಅನ್ನು ಖರೀದಿಸಬಹುದು.