Home Karnataka State Politics Updates ಮೇಕೆದಾಟು ಪಾದಯಾತ್ರೆಗೆ ನಟ ಶಿವರಾಜ್ ಕುಮಾರ್ ಗೈರು ! ಅಭಿಮಾನಿಗಳ ಒತ್ತಡವೇ ಕಾರಣವಾಯಿತೇ?

ಮೇಕೆದಾಟು ಪಾದಯಾತ್ರೆಗೆ ನಟ ಶಿವರಾಜ್ ಕುಮಾರ್ ಗೈರು ! ಅಭಿಮಾನಿಗಳ ಒತ್ತಡವೇ ಕಾರಣವಾಯಿತೇ?

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು : ಕಾಂಗ್ರೆಸ್ ನೇತೃತ್ವದ ಮೇಕೆದಾಟು ಪಾದಯಾತ್ರೆಗೆ ನಟ ಶಿವರಾಜ್ ಕುಮಾರ್ ಗೈರು ಹಾಜರಾಗಿದ್ದಾರೆ.

ಶಿವರಾಜ್ ಕುಮಾರ್ ಅವರು ನಿನ್ನೆ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ ಇಂದು ದಿಢೀರ್ ಆಗಿ ಕಾರ್ಯಕ್ರಮ ರದ್ದುಗೊಳಿಸಿದ್ದಾರೆ ಶಿವಣ್ಣ.

ಶಿವಣ್ಣ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ ಎಂಬ ಸುದ್ದಿ ಬೆನ್ನಲ್ಲೇ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಡಾ. ರಾಜ್ ಕುಮಾರ್ ಕುಟುಂಬದವರು ಯಾವತ್ತೂ ರಾಜಕೀಯದಲ್ಲಿ ತಲೆ ಹಾಕಿಲ್ಲ‌. ನೀವು ಕಾಂಗ್ರೆಸ್ ಪಾದಯಾತ್ರೆಯಲ್ಲಿ ಪಾಲ್ಗೊಂಡು ವಿಶ್ವಾಸ ಕಳೆದುಕೊಳ್ಳಬೇಡಿ. ನೀವು ಎಲ್ಲಾ ವರ್ಗದವರಿಗೂ ಸೇರಿದವರು. ನಿಮ್ಮನ್ನು ಒಂದು ಪಕ್ಷದಲ್ಲಿ ಗುರುತಿಸಿಕೊಳ್ಳಲು ಇಷ್ಟಪಡಲ್ಲ ಎಂದು ಕಾಮೆಂಟ್ ಮಾಡಿದ್ದರು.

ಅಭಿಮಾನಿಗಳ ಒತ್ತಾಯದಿಂದಾಗಿ ಶಿವರಾಜ್ ಕುಮಾರ್ ಈ ಕಾರ್ಯಕ್ರಮದಿಂದ ದೂರವುಳಿಯಲು ತೀರ್ಮಾನಿಸಿರಬಹುದು ಎನ್ನಲಾಗಿದೆ.

ಆದರೆ ನಟ ದುನಿಯಾ ವಿಜಯ್ ಪಾದಯಾತ್ರೆ ಆರಂಭದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದ್ದಾರೆ.