Home Interesting ಈ ಮಸಾಜ್ ಸೆಂಟರ್ ನಲ್ಲಿ ಹಾವುಗಳು ಮಾಡುತ್ತವೆಯಂತೆ ಬೊಂಬಾಟ್ ಮಸಾಜ್ !! | ಬೆಚ್ಚಿಬೀಳಿಸುವಂತಿದೆ ಈ...

ಈ ಮಸಾಜ್ ಸೆಂಟರ್ ನಲ್ಲಿ ಹಾವುಗಳು ಮಾಡುತ್ತವೆಯಂತೆ ಬೊಂಬಾಟ್ ಮಸಾಜ್ !! | ಬೆಚ್ಚಿಬೀಳಿಸುವಂತಿದೆ ಈ ಮಸಾಜ್ ವೀಡಿಯೋ

Hindu neighbor gifts plot of land

Hindu neighbour gifts land to Muslim journalist

ಬಹಳಷ್ಟು ಜನ ಕೆಲಸದ ಒತ್ತಡದಿಂದಲೋ ಅಥವಾ ಆರೋಗ್ಯದ ಸಮಸ್ಯೆಯಿಂದ ಸುಧಾರಿಸಿಕೊಳ್ಳಲು ಮಸಾಜ್ ಸೆಂಟರ್ ಗೆ ತೆರಳುವುದು ಸಾಮಾನ್ಯ. ನಾವು ನೋಡಿರೋ ಹಾಗೆ ಮಸಾಜ್ ಮಾಡಲು ವೃತ್ತಿಯ ಅನುಭವವುಳ್ಳ ವ್ಯಕ್ತಿ ಇರುತ್ತಾರೆ. ಆದ್ರೆ ಇಲ್ಲೊಂದು ಕಡೆ ಮಸಾಜ್ ಮಾಡಲು ಇರುವವರು ಯಾರು ಗೊತ್ತೇ?

ಹೌದು.ಈಜಿಪ್ಟ್ ನ ರಾಜಧಾನಿ ಕೈರೋದ ಸ್ಪಾನಲ್ಲಿ,ಮಸಾಜ್ ಸೆಂಟರ್ ಸಿಬ್ಬಂದಿ ಮನುಷ್ಯರ ಬದಲು ಹಾವು!. ಒಮ್ಮೆಗೆ ನಂಬಲು ಅಸಾಧ್ಯ ಅಲ್ಲವೇ? ಆದರೂ ನಂಬಲೇ ಬೇಕು.ಹಾವು ನಿದ್ದೆಯಲ್ಲಿ ಕಂಡರೂ ಬೆಚ್ಚಿ ಬೀಳುವವರಿದ್ದಾರೆ.ಹಾಗಿರುವಾಗ ಹಾವಿನಿಂದ ಮಸಾಜ್ ಮಾಡಿಸಿಕೊಳ್ಳೋದಾ ಎನ್ನಬೇಡಿ.ಇದನ್ನು ‘ಸ್ನೇಕ್ ಮಸಾಜ್’ ಎಂದು ಕರೆಯಲಾಗುತ್ತದೆ. ಹಾವುಗಳನ್ನು ದೇಹದ ಮೇಲೆ ಹೊರಳಾಡಿಸುವ ಮೂಲಕ ಮಸಾಜ್ ಮಾಡಲಾಗುತ್ತದೆ.

ಹಾವಿನ ಮಸಾಜ್‌ನಲ್ಲಿ, ವ್ಯಕ್ತಿಯ ದೇಹದ ಮೇಲೆ ಹತ್ತಾರು ಹಾವುಗಳನ್ನು ಬಿಡಲಾಗುತ್ತದೆ. ನಂತರ ಹಾವುಗಳು ವ್ಯಕ್ತಿಯ ದೇಹದ ಮೇಲೆ ತೆವಳುತ್ತವೆ. ಹಾವಿನ ಮಸಾಜ್ ಸಮಯದಲ್ಲಿ ಅನೇಕ ಜನರು ಭಯಗೊಳ್ಳುತ್ತಾರೆ.ಹಾವಿನ ಮಸಾಜ್ ಗೆ ವಿಷಕಾರಿ ಹಾವುಗಳನ್ನು ಬಳಸುವುದಿಲ್ಲ.ಹಾಗಾಗಿ ಈ ಹಾವುಗಳಿಂದ ಯಾವುದೇ ಅಪಾಯವಿಲ್ಲ. ಜನರು ಆರಂಭದಲ್ಲಿ ಈ ಹಾವುಗಳಿಗೆ ಹೆದರುತ್ತಿದ್ದರೂ ಕ್ರಮೇಣ ಅವುಗಳಿಗೆ ಒಗ್ಗಿಕೊಳ್ಳುತ್ತಾರೆ. ಈ ಹಾವುಗಳು ದೇಹದ ಮೇಲೆ ಹರಿದಾಡಿದಾಗ ವಿಶ್ರಾಂತಿಯ ಅನುಭವವಾಗುತ್ತದೆ.

ದುರ್ಬಲ ಹೃದಯ ಹೊಂದಿದವರು ಹಾವಿನ ಮಸಾಜ್ ಮಾಡಿಸಿಕೊಳ್ಳದಿರುವುದು ಸೂಕ್ತವೆಂದು ಸ್ಪಾದಲ್ಲಿ ಹೇಳಲಾಗುತ್ತದೆ. ಸ್ನೇಕ್ ಮಸಾಜ್, ಕೀಲು ನೋವಿಗೆ ಪರಿಹಾರ ನೀಡುತ್ತದೆ ಎಂದು ಕೈರೋ ಸ್ಪಾ ಹೇಳುತ್ತದೆ. ಸ್ನೇಕ್ ಮಸಾಜ್ ನಿಂದ ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ.ಹಾವಿನ ಮಸಾಜನ್ನು ಸುಮಾರು ಅರ್ಧ ಗಂಟೆಯವರೆಗೆ ಮಾಡಲಾಗುತ್ತದೆ. ವ್ಯಕ್ತಿಯ ಬೆನ್ನಿನ ಮೇಲೆ ಎಣ್ಣೆಯನ್ನು ಸುರಿದು ಮಸಾಜ್ ಮಾಡಲಾಗುತ್ತದೆ. ಇದರ ನಂತರ ಹಾವುಗಳು ವ್ಯಕ್ತಿಯ ಬೆನ್ನಿನ ಮೇಲೆ ಬಿಡಲಾಗುತ್ತದೆ. ಗ್ರಾಹಕರಿಗೆ ಕಚ್ಚದಂತೆ ಹಾವಿಗೆ ತರಬೇತಿ ನೀಡಲಾಗಿರುತ್ತದೆ. ಆರಂಭದಲ್ಲಿ ಭಯವಾದ್ರೂ, ಸ್ನೇಕ್ ಮಸಾಜ್ ಆರಾಮ ನೀಡಿದೆ ಎಂದು ಅಲ್ಲಿಗೆ ಬರುವ ಗ್ರಾಹಕರು ಹೇಳ್ತಾರೆ.

ನಿಮಗೂ ‘ಸ್ನೇಕ್ ಮಸಾಜ್’ಅನುಭವ ಬೇಕಿದ್ದರೆ ನೀವೂ ಕೂಡ ಹಾವಿನ ಸ್ಪಾಕ್ಕೆ ಹೋಗಿ ಬನ್ನಿ. ಆದ್ರೆ ಹಾವು ಕಂಡ್ರೆ ಭಯವಿಲ್ಲ ಎನ್ನುವವರು ಎನ್ನುವವರು ಮಾತ್ರ ತೆರಳಿದರೆ ಉತ್ತಮ. ಇಲ್ಲವಾದಲ್ಲಿ ನಿಮ್ಮ ಮಸಾಜ್ ಬೆಡ್ ರೆಸ್ಟ್ ಗೆ ತಳ್ಳೋತರ ಆಗಲು ಆಗಬಹುದಲ್ಲವೇ!!