Home International ಮದುವೆಯಾದ ನವದಂಪತಿಗಳು 3 ದಿನಗಳವರೆಗೆ ಟಾಯ್ಲೆಟ್ ಗೆ ಹೋಗುವಂತಿಲ್ಲ, ಕಾರಣ?

ಮದುವೆಯಾದ ನವದಂಪತಿಗಳು 3 ದಿನಗಳವರೆಗೆ ಟಾಯ್ಲೆಟ್ ಗೆ ಹೋಗುವಂತಿಲ್ಲ, ಕಾರಣ?

Hindu neighbor gifts plot of land

Hindu neighbour gifts land to Muslim journalist

ಮದುವೆ ಎಂದರೆ ಶಾಸ್ತ್ರ ಸಂಪ್ರದಾಯ ಎಲ್ಲಾ ಇರುತ್ತೆ. ಒಂದೊಂದು ದೇಶದಲ್ಲಿ ಒಂದೊಂದು ರೀತಿ. ಆದರೆ ಇಲ್ಲೊಂದು ದೇಶದಲ್ಲಿ ಮದುವೆಯಾದ ನವದಂಪತಿಗಳು 3 ದಿನಗಳವರೆಗೂ ಶೌಚಾಲಯಕ್ಕೆ ಹೋಗಬಾರದೆಂಬ ಸಂಪ್ರದಾಯವಿದೆಯಂತೆ. ಇದೊಂದು ವಿಚಿತ್ರ ಆದರೂ ಸತ್ಯ. ಅಷ್ಟಕ್ಕೂ ಇದರ ಹಿಂದಿನ ಅಸಲಿ ಸತ್ಯ ಕೇಳಿದರೆ ನೀವು ಕೂಡ ಅಚ್ಚರಿ ಪಡುತ್ತೀರಾ.

ಹೌದು, ಇಂಡೋನೇಷ್ಯಾದ ಡಿಡಾಂಗ್ ಸಮುದಾಯದಲ್ಲಿ ಮದುವೆಯಾದ ಎಂಬ 3 ದಿನದವರೆಗೂ ವಧು, ವರ ಶೌಚಾಲಯಕ್ಕೆ ತೆರಳುವಂತಿಲ್ಲ. ವಿವಾಹ ನಂತರ ಒಂದು ವೇಳೆ ವಧು-ವರರು ಶೌಚಾಲಯಕ್ಕೆ ಹೋದರೆ, ಅವರ ಶುದ್ಧತೆಗೆ ಭಂಗವುಂಟಾಗುತ್ತದೆ ಮತ್ತು ಅವರು ಅಶುದ್ಧರಾಗುತ್ತಾರೆ ಎಂಬ ಮಾತಿದೆಯಂತೆ. ಹೀಗಾಗಿ ಮದುವೆಯ ಸಮಯದಲ್ಲಿ ಅಥವಾ ನಂತರ ವಧು ವರರು ಶೌಚಾಲಯಕ್ಕೆ ಹೋಗುವಂತಿಲ್ಲ.

ಮತ್ತೊಂದೆಡೆ ಮಲವಿಸರ್ಜನೆ ಮಾಡುವ ಸ್ಥಳದಲ್ಲಿ ಕೊಳಕು ಇರುತ್ತದೆ ಮತ್ತು ನಕಾರಾತ್ಮಕ ಶಕ್ತಿಗಳ ಪ್ರಭಾವವಿರುತ್ತದೆ. ಈ ವೇಳೆ ಶೌಚಾಲಯಕ್ಕೆ ಹೋದರೆ ವಧುವರರ ವೈವಾಹಿಕ ಜೀವನದಲ್ಲಿ ತೊಂದರೆ ಉಂಟಾಗುತ್ತದೆ ಎಂದು 3 ದಿನಗಳವರೆಗೆ ಶೌಚಾಲಯಕ್ಕೆ ಹೋಗಲು ಅವಕಾಶ ನೀಡುವುದಿಲ್ಲ. ಅಲ್ಲದೇ ಮದುವೆ ಸಮಯದಲ್ಲಿ ವಧು-ವರರಿಗೆ ಊಟ-ನೀರನ್ನು ಕೂಡ ನೀಡುವುದು ಬಹಳ ಕಡಿಮೆ, ಕಾರಣ ಇದರಿಂದ ಅವರು ಶೌಚಾಲಯಕ್ಕೆ ನೋಡಿಕೊಳ್ಳಲಾಗುತ್ತದೆ.

ಈ ನಿಯಮವನ್ನು ಅಲ್ಲಿ ಕಟ್ಟುನಿಟ್ಟಾಗಿ ಪಾಲಿಸಲೇಬೇಕಂತೆ. ಇಂಡೋನೇಷ್ಯಾದಲ್ಲಿ ಆಚರಿಸುವ ಈ ಆಚರಣೆಯನ್ನು ಯಾರಾದರೂ ಒಂದು ವೇಳೆ ಪಾಲನೆ ಮಾಡದೇ ಇದ್ದರೆ, ಇದನ್ನು ಅಪಶಕುನ ಎಂದು ಭಾವಿಸಲಾಗುತ್ತದೆ.

ಒಟ್ಟಾರೆಯಾಗಿ ಈ ನವವಧು ವರರ ಪಾಡು ಏನು ಎಂಬ ಒಂದು ಜಿಜ್ಞಾಸೆ ಸಾಮಾನ್ಯವಾಗಿ ಎಲ್ಲರಲ್ಲೂ ಮೂಡಬಹುದು. ಆದರೂ ಅವರವರ ಆಚಾರ ವಿಚಾರ ಅವರವರಿಗೆ ಬಿಟ್ಟದ್ದು.