Home latest ಮಂಗಳೂರು: ಬೆಳ್ಳಂಬೆಳಗ್ಗೆ ಹೆಜ್ಜೇನು ದಾಳಿ, ಎಂಟು ಮಂದಿ ಆಸ್ಪತ್ರೆಗೆ ದಾಖಲು

ಮಂಗಳೂರು: ಬೆಳ್ಳಂಬೆಳಗ್ಗೆ ಹೆಜ್ಜೇನು ದಾಳಿ, ಎಂಟು ಮಂದಿ ಆಸ್ಪತ್ರೆಗೆ ದಾಖಲು

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ಕಿನ್ನಿಗೋಳಿಯ ಮುಖ್ಯ ರಸ್ತೆ ಮೂರು ಕಾವೇರಿ ರಾಜ್ ಹೆರಿಟೇಜ್ ಕಟ್ಟಡದಲ್ಲಿ ಗೂಡು ಕಟ್ಟಿದ್ದ ಹೆಜ್ಜೇನುಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದ ಜನರ ಮೇಲೆ ದಾಳಿ ನಡೆಸಿದ್ದು, ಅಸ್ವಸ್ಥಗೊಂಡ 8 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪಕ್ಷಿಯೊಂದು ಗೂಡಿಗೆ ಕುಕ್ಕಿದ ಕಾರಣದಿಂದ ಜನರ ಮೇಲೆ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.ಒಬ್ಬರು ವಾಕಿಂಗ್ ಹೋಗುತ್ತಿದ್ದ ವ್ಯಕ್ತಿ, ಶಿಕ್ಷಕರು, ಕೆಲಸಕ್ಕೆ ಹೋಗುತ್ತಿದ್ದವರು ಸೇರಿ 8ರಿಂದ 10 ಮಂದಿ ಮೇಲೆ ಏಕಾಏಕಿ ದಾಳಿ ನಡೆಸಿದೆ.

ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪಟ್ಟಣ ಪಂಚಾಯತಿನಿಂದ ಹೆಜ್ಜೇನು ಗೂಡು ತೆರವುಗೊಳಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.ಸ್ಥಳೀಯ ವಸತಿ ಸಮುಚ್ಚಯ ನಿವಾಸಿಗಳಿಗೆ ಹೊರಗೆ ಬಾರದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.