Home latest ಮಂಗಳೂರಿನಲ್ಲಿ ಸುಲಿಗೆಗಿಳಿದ ಮಂಗಳಮುಖಿ!! ಒಂಟಿ ಬೈಕ್ ಸವಾರರೇ ಇವರ ಟಾರ್ಗೆಟ್

ಮಂಗಳೂರಿನಲ್ಲಿ ಸುಲಿಗೆಗಿಳಿದ ಮಂಗಳಮುಖಿ!! ಒಂಟಿ ಬೈಕ್ ಸವಾರರೇ ಇವರ ಟಾರ್ಗೆಟ್

Hindu neighbor gifts plot of land

Hindu neighbour gifts land to Muslim journalist

ಮಂಗಳೂರು:ಇತ್ತೀಚೆಗೆ ಮಂಗಳಮುಖಿಯರ ಸುಲಿಗೆ ಅಧಿಕವಾಗಿದೆ.ಬಸ್ ಪ್ರಯಾಣಿಕರನ್ನು ಬಿಡದೆ ಎಲ್ಲಾ ಜನರಿಂದ ಹಣ ವಸೂಲಿ ಮಾಡುತ್ತಿರುವುದು ಕಂಡು ಬಂದಿದೆ. ಇದೀಗ ಒಂಟಿಯಾಗಿ ಹೋಗುವ ಬೈಕ್ ಸವಾರರನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಮಂಗಳಮುಖಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ನಗರದ ಇಜಿಪುರದ ಅಭಿಷೇಕ್ @ ಗೊಂಬೆ @ಅನಾಮಿಕ (27) ಬಂಧಿತ ಮಂಗಳಮುಖಿ ಎಂದು ತಿಳಿದು ಬಂದಿದೆ.

ಘಟನೆಯ ವಿವರ :

ಮಂಗಳೂರು ನಗರದ ನಂತೂರು ಪದವು ಬಳಿಯಿರುವ ಬಿ ಎಸ್ ಎನ್ ಎಲ್ ಎಕ್ಸ್‌ಚೇಂಜ್ ಬಳಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಗಣೇಶ್ ಶೆಟ್ಟಿ ರವರು ಬೈಕ್ ನಲ್ಲಿ ಬರುವಾಗ ಈ ಮಂಗಳಮುಖಿ ರಸ್ತೆಗೆ ಅಡ್ಡ ಬಂದು ಗಣೇಶ್ ಶೆಟ್ಟಿರವರನ್ನು ತಡೆದು ನಿಲ್ಲಿಸಿ, ಅವರ
ಮುಖಕ್ಕೆ ಪೆಪ್ಪರ್ ಸ್ಪೇ ಮಾಡಿ ಅವರ ಕುತ್ತಿಯಲ್ಲಿದ್ದ ಸುಮಾರು 24 ಗ್ರಾಂ ತೂಕದ ಚಿನ್ನದ ಸರವನ್ನು ಸುಲಿಗೆ ಮಾಡಿಕೊಂಡು ಹೋಗಿದ್ದನು.

ಈ ಘಟನೆಯ ದೂರಿನ ಪ್ರಕಾರ,ಆರೋಪಿಯನ್ನು ಕದ್ರಿ ಠಾಣೆಯ ಪೊಲೀಸರು ಬಂಧಿಸಿದಾಗ ಈತ ಮೂರು ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ತಿಳಿದುಬಂದಿದೆ.ಆರೋಪಿ ಯಿಂದ ಒಟ್ಟು 71 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.