Home latest ಶುದ್ಧ ಗಾಳಿಯನ್ನೇ ಮಾರಾಟಕ್ಕಿಟ್ಟ ವ್ಯಕ್ತಿ | ಅಷ್ಟಕ್ಕೂ ಈ ಕಾರ್ಯದ ಹಿಂದಿರುವ ಕಾರಣ ಏನು ಗೊತ್ತಾ?

ಶುದ್ಧ ಗಾಳಿಯನ್ನೇ ಮಾರಾಟಕ್ಕಿಟ್ಟ ವ್ಯಕ್ತಿ | ಅಷ್ಟಕ್ಕೂ ಈ ಕಾರ್ಯದ ಹಿಂದಿರುವ ಕಾರಣ ಏನು ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

ಜಗತ್ತು ಡಿಜಿಟಲೀಕರಣದತ್ತ ಹೆಜ್ಜೆ ಹಾಕುತ್ತಿದ್ದಂತೆ ಎಲ್ಲವೂ ಟೆಕ್ನಾಲಾಜಿ ಮಯವಾಗಿದೆ. ಎಲ್ಲಿ ನೋಡಿದರೂ ಯಂತ್ರಗಳು, ಕಾರ್ಖಾನೆಗಳು, ವಾಹನಗಳ ಸಾಲುಗಳು, ಕಟ್ಟಡಗಳು ಇವೇ ಕಾಣಸಿಗುತ್ತಿದೆ. ಇದೆಲ್ಲದರ ಪರಿಣಾಮವಾಗಿ ಪರಿಸರ ಮಾಲಿನ್ಯ ಆಗುತ್ತಿದೆ. ಉಸಿರಾಡಲು ಶುದ್ಧ ಗಾಳಿ ಸಿಗದೇ ಹೋಗುವ ಪರಿಸ್ಥಿತಿ ಎದುರಗಿದೆ. ಈ ಕಾರಣದಿಂದಾಗಿಯೇ ಮುಂದೊಂದು ದಿನ ಶುದ್ಧ ಗಾಳಿ, ಶುದ್ಧ ನೀರು ಸಿಗದೇ ಪರದಾಡುವಂತೆ ಆಗುವುದರಲ್ಲಿ ಸಂಶಯವಿಲ್ಲ ಎನ್ನಬಹುದು.

ಇಂತಹ ಎಲ್ಲಾ ಆಲೋಚನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಇಲ್ಲೊಬ್ಬ ವ್ಯಕ್ತಿ ಶುದ್ಧ ಗಾಳಿಯನ್ನೇ ಮಾರಾಟಕ್ಕೆ ಇಟ್ಟಿದ್ದಾನೆ. ಹೌದು. ಥೈಲ್ಯಾಂಡ್​ ಮೂಲದ ವ್ಯಕ್ತಿಯೊಬ್ಬ ತನ್ನ ಫಾರ್ಮ್​ನಲ್ಲಿ ಶುದ್ಧಗಾಳಿ ಮಾರಾಟ ಮಾಡುತ್ತಿದ್ದಾನೆ. ಅಷ್ಟಕ್ಕೂ ಈ ಶುದ್ಧಗಾಳಿಯ ಬೆಲೆ ಎಷ್ಟು ಗೊತ್ತಾದರೆ ಶಾಕ್ ಆಗೋದು ಖಂಡಿತ. ಯಾಕಂದ್ರೆ ಆತ ಬರೋಬ್ಬರಿ 2,500 ರೂಪಾಯಿಗೆ ಶುದ್ಧ ಗಾಳಿಯನ್ನು ಮಾರಾಟ ಮಾಡುತ್ತಿದ್ದಾನೆ.

52 ವರ್ಷದ ರೈತ ದುಸಿತ್​ ಕಚೈ ಫಾರ್ಮ್​ ನಡೆಸುತ್ತಿದ್ದು, ಫು ಲೇನ್​ ಖಾ ನ್ಯಾಷನಲ್​ ಪಾರ್ಕ್ ಬಳಿ ಇರುವ ಈ ಫಾರ್ಮ್​​​ಗೆ ಭೇಟಿ ನೀಡುವ ಪ್ರವಾಸಿಗರು ಉಸಿರಾಡುವ ಶುದ್ಧಗಾಳಿಗೂ ವೆಚ್ಚವನ್ನು ಹಾಕುತ್ತಿದ್ದಾನೆ. ಇದರೊಂದಿಗೆ ಮಕ್ಕಳು ,ಮತ್ತು ವೃದ್ಧರಿಗೆ ಉಚಿತ ವಸತಿ, ಆಹಾರವನ್ನು ನೀಡುತ್ತಾನೆ. ದುಸಿತ್​ ಪರಿಸರ ಸಮೂಹ ತಂಡವನ್ನು ಮುನ್ನಡೆಸುತ್ತಿದ್ದು, ಈ ಫಾರ್ಮ್​ ಇರುವ ಪ್ರದೇಶವು ಕಾಡು ಮತ್ತು ಬೆಟ್ಟಗಳಿಂದ ಆವೃತವಾಗಿದೆ. ಹಾಗಾಗಿ ಶುದ್ಧಗಾಳಿಯು ಬೀಸುತ್ತಿದೆ ಎಂದು ದುಸಿತ್​ ಉಸಿರಾಡುವ ಗಾಳಿಗೂ ವೆಚ್ಚ ಹಾಕುತ್ತಿದ್ದಾನೆ.

ರೈತ ದುಸಿತ್, ​ ಓಝೋನ್​ ಸವಕಳಿ, ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಮತ್ತು ಕಲುಷಿತ ಗಾಳಿಯಿಂದ ತಪ್ಪಿಸಿಕೊಳ್ಳಲು ಜನರು ಹೆಚ್ಚು ನೈಸರ್ಗಿಕ ಪ್ರದೇಶವನ್ನು ಹುಡುಕುತ್ತಿದ್ದಾರೆ. ಈ ಕಾರಣಕ್ಕೆ ಫಾರ್ಮ್​ಗೆ ಭೇಟಿ ನೀಡುವ ಪ್ರವಾಸಿಗರಿಗೆ ಶುದ್ಧ ಗಾಳಿಗೂ ಸಹ ವೆಚ್ಚ ಹಾಕುತ್ತಿದ್ದಾನೆ ಎಂದು ರೈತ ತಿಳಿಸಿದ್ದಾನೆ. ಬಹುಶಃ ಈತನ ಈ ಶುದ್ಧ ಗಾಳಿ ಮಾರಾಟ ಎನ್ನುವ ಅರ್ಥ ಪೂರ್ಣ ವ್ಯಾಪಾರದಿಂದಾದರೂ ಜನರು ಗಾಳಿಯ ಬೆಲೆ ತಿಳಿಯಬಹುದು ಎಂಬುದು ನಂಬಿಕೆ…