Home latest Shocking Video: ಟ್ರ್ಯಾಕ್ಟರ್‌ ಸೀಟು ಹರಿದಿದ್ದಕ್ಕೆ ಈ ರೀತಿ ನಾಯಿಯನ್ನು ಕೊಲ್ತಾರಾ?!! ಇಲ್ಲೋರ್ವ ಪಾಪಿ ಏನ್ಮಾಡಿದ...

Shocking Video: ಟ್ರ್ಯಾಕ್ಟರ್‌ ಸೀಟು ಹರಿದಿದ್ದಕ್ಕೆ ಈ ರೀತಿ ನಾಯಿಯನ್ನು ಕೊಲ್ತಾರಾ?!! ಇಲ್ಲೋರ್ವ ಪಾಪಿ ಏನ್ಮಾಡಿದ ನೋಡಿ, ಜನರಿಂದ ತರಾಟೆ!!

Maharashtra
Image source: kannada dunia

Hindu neighbor gifts plot of land

Hindu neighbour gifts land to Muslim journalist

Maharashtra: ಟ್ರಾಕ್ಟರ್‌ನ ಸೀಟ್‌ ಕವರನ್ನು ಹರಿದು ಹಾನಿ ಮಾಡಿದ್ದಕ್ಕೆ ಬೀದಿನಾಯಿಯೊಂದನ್ನು ವ್ಯಕ್ತಿಯೋರ್ವ ಯಾರೂ ಊಹಿಸದ ರೀತಿಯಲ್ಲಿ ಕೊಂದ ಭೀಕರ ಘಟನೆಯೊಂದು ಮಹಾರಾಷ್ಟ್ರದ(Maharashtra) ಜಲಗಾಂವ್‌ನ ಪರೋಲಾದಲ್ಲಿ ನಡೆದಿದೆ.

ಈತ ನಾಯಿಯ ಕುತ್ತಿಗೆಗೆ ಹಗ್ಗ ಬಿಗಿದು ತನ್ನದೇ ವಾಹನಕ್ಕೆ ನೇತು ಹಾಕಿ ಕೊಂದಿದ್ದಾನೆ. ಇದನ್ನು ನಂತರ ಕಂಡ ಸ್ಥಳೀಯರು ಆತನಿಗೆ ಹಿಗ್ಗಾಮುಗ್ಗವಾಗಿ ಝಾಡಿಸುವ ಘಟನೆಯ ವೀಡಿಯೋ ವೈರಲ್‌ ಆಗಿದೆ. ನಾಯಿಗೆ ಚಿತ್ರಹಿಂಸೆ ನೀಡಿ ಕುತ್ತಿಗೆಗೆ ಹಗ್ಗ ಬಿಗಿದು ಕೊಂದ ವ್ಯಕ್ತಿಯ ವಿರುದ್ಧ ಜನಾಕ್ರೋಶ ಹೆಚ್ಚಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಘಟನೆ ವೈರಲ್‌ ಆಗಿದ್ದು, ಬೀದಿನಾಯಿಯ ಸಾವಿಗೆ ಜನ ಕಂಬಿ ಮಿಡಿದಿದ್ದಾರೆ.

ಇನ್ಸ್‌ಟಾಗ್ರಾಮ್‌ನಲ್ಲಿ ಈ ವೀಡಿಯೋ ಹಂಚಿಕೊಳ್ಳಲಾಗಿದೆ. ಆ ವ್ಯಕ್ತಿ ತನ್ನ ಟ್ರ್ಯಾಕ್ಟರ್‌ನ ಸೀಟ್‌ ಕವರನ್ನು ಹರಿದು ಹಾಕಿದ ನಾಯಿಯನ್ನು ಜೀವಂತವಾಗಿ ಕೊಂದಿದ್ದಾನೆ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ. ಈ ಕೃತ್ಯವನ್ನು ಖಂಡಿಸಿರುವ ಎಲ್ಲರೂ ಸೀಟ್‌ಗಿಂತ ನಾಯಿಯ ಪ್ರಾಣಕ್ಕೆ ಬೆಲೆ ಕಡಿಮೇ ಎಂದು ಪ್ರಶ್ನೆ ಮಾಡಿದ್ದಾರೆ. ಈ ಘಟನೆ ನಡೆದ ಸ್ಥಳದಲ್ಲಿ ಜಮಾವಣೆಯಾದ ಜನರು ವ್ಯಕ್ತಿಯನ್ನು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಬಹುಮಹಡಿ ಕಟ್ಟಡದ ಲಿಫ್ಟ್ ಕುಸಿದು 7 ಮಂದಿ ಸಾವು