Home latest ಪ್ರೀತಿ ನಿರಾಕರಿಸಿದ ಯುವತಿಯ ಬರ್ಬರ ಕೊಲೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ! ಪೊಲೀಸ್‌ ತನಿಖೆಯಲ್ಲಿ ಮಹತ್ತರ...

ಪ್ರೀತಿ ನಿರಾಕರಿಸಿದ ಯುವತಿಯ ಬರ್ಬರ ಕೊಲೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ! ಪೊಲೀಸ್‌ ತನಿಖೆಯಲ್ಲಿ ಮಹತ್ತರ ಮಾಹಿತಿಯ ಸುಳಿವು

Lover Murder Case

Hindu neighbor gifts plot of land

Hindu neighbour gifts land to Muslim journalist

Lover Murder Case: ಪ್ರೀತಿ (Love) ಕೆಲವರ ಪಾಲಿಗೆ ಒಂದು ಸುಂದರ ಭಾವವಾದರೆ ಮತ್ತೆ ಕೆಲವರ ಪಾಲಿಗೆ ನುಂಗಲಾರದ ಬಿಸಿ ತುಪ್ಪದಂತೆ ಪರಿಣಮಿಸುತ್ತದೆ. ಪ್ರೀತಿ ಪ್ರೇಮ ಎಂದು ಮನೆಯವರ ವಿರೋಧದ ನಡುವೆ ಮದುವೆಯಾಗಿ ಸಾವಿನ ಕದ ತಟ್ಟಿದ ಅದೆಷ್ಟೋ ಜೀವಂತ ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ. ಇಡೀ ದೇಶವೇ ಬೆಚ್ಚಿ ಬೀಳಿಸಿದ್ದ ಶ್ರದ್ದಾ ಹತ್ಯೆ(Murder of Shraddha Walkar) ಪ್ರಕರಣದ ಬಳಿಕ ಪಾಗಲ್ ಪ್ರೇಮಿಯೊಬ್ಬ ಪ್ರೀತಿಯನ್ನು ನಿರಾಕರಿಸಿದ ಯುವತಿಯನ್ನು ಬರ್ಬರವಾಗಿ ಇರಿದ ಘಟನೆ ಇತ್ತೀಚಿಗಷ್ಟೇ ವರದಿಯಾಗಿತ್ತು. ಈ ಪ್ರಕರಣದ ಕುರಿತು ರೋಚಕ ಮಾಹಿತಿಯೊಂದು ತನಿಖೆ ( Investigation)ವೇಳೆ ಹೊರ ಬಿದ್ದಿದೆ.

ಪಾಗಲ್ ಪ್ರೇಮಿಯೊಬ್ಬನ ಅಟ್ಟಹಾಸಕ್ಕೆ ಬೆಂಗಳೂರಿನಲ್ಲಿ ಯುವತಿಯೊಬ್ಬಳು ಬಲಿ(Lover Murder Case)ಯಾಗಿದ್ದು, ಆರೋಪಿ ಯುವತಿಯನ್ನು 16 ಸಲ ಚುಚ್ಚಿ ಚುಚ್ಚಿ ಅಮಾನುಷವಾಗಿ ಎದೆ, ಹೊಟ್ಟೆ, ಕುತ್ತಿಗೆಗೆ ಇರಿದು ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಮುರಗೇಶ್ ಪಾಳ್ಯದ ಎನ್ಎಎಲ್ ರಸ್ತೆಯಲ್ಲಿ ನಡೆದಿತ್ತು. ಲೀಲಾ ಪವಿತ್ರ (26) ಕೊಲೆಯಾದ ಯುವತಿಯಾಗಿದ್ದು,ಈಕೆಯನ್ನು ಪ್ರೀತಿಸುತ್ತಿರುವ ದಿವಾಕರ್ ಎಂಬಾತ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಲೀಲಾ ಪವಿತ್ರ ಆಂಧ್ರಪ್ರದೇಶ ಮೂಲದ ಈಕೆ ಒಮೆಗಾ ಎನ್ನುವ ಮೆಡಿಸನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದ್ದು, ಮೂರು ದಿನಗಳ ಹಿಂದೆ ಕೆಲಸ ಮುಗಿಸಿ ಹೊರಗಡೆ ಬಂದಾಗ ಆರೋಪಿ ಈಕೆಯ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಈ ಹಿಂದೆ ಆಂಧ್ರಪ್ರದೇಶದ ಶ್ರೀಕಾಕೋಳುವಿನಲ್ಲಿ ಕಾಲೇಜಿನಲ್ಲಿ ಓದುವ ಸಂದರ್ಭದಲ್ಲಿ ಆರೋಪಿ ದಿನಕರ್, ಲೀಲಾ ಪವಿತ್ರಾಗೆ ತನ್ನನ್ನು ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ವ್ಯಾಸಂಗ ಪೂರ್ಣಗೊಂಡ ನಂತರ ಯುವತಿ ಕೆಲಸ ಅರಸುತ್ತಾ ಬೆಂಗಳೂರಿಗೆ ಬಂದಿದ್ದು, ಇದರಿಂದಾಗಿ ಲೀಲಾ ತನ್ನ ಕೈ ತಪ್ಪಿ ಹೋಗುವ ಭೀತಿಯಿಂದ ದಿನಕರ್, ಲೀಲಾಳ ತಾಯಿಗೆ ಕರೆ ಮಾಡಿ ಅವಳನ್ನು ತಾನೇ ಮದುವೆಯಾಗಿ ಚೆನ್ನಾಗಿ ನೋಡಿಕೊಳ್ಳುವುದಾಗಿ ಕೇಳಿಕೊಂಡಿದ್ದ. ಆದರೆ, ಲೀಲಾ ತಾಯಿ ಅಂತರ್ಜಾತಿ ಎಂದು ಮದ್ವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ದಿನಕರ್ ಆಕೆ ತನಗೆ ಸಿಗಲಿಲ್ಲ ಎಂದಾದರೆ ಆಕೆಯನ್ನು ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದ ಎನ್ನಲಾಗಿದೆ. ಇದು ಸಾಲದು ಎಂಬಂತೆ, ಲೀಲಾ ಪವಿತ್ರ ಕೆಲಸ ಮಾಡುತ್ತಿದ್ದ ಸ್ಥಳವನ್ನು ಸ್ನೇಹಿತರ ನೆರವಿನಿಂದ ಪತ್ತೆ ಮಾಡಿದ್ದಾನೆ.

ಹುಚ್ಚು ಪ್ರೇಮಿ ದಿನಕರ್, ಯುವತಿ ಕೆಲಸ ಮಾಡುತ್ತಿದ್ದ ಜಾಗಕ್ಕೆ ಆಕೆಯನ್ನು ಅರಸುತ್ತಾ ಹೋಗಿದ್ದು, ಇದನ್ನು ಗಮನಿಸಿ ಲೀಲಾ ಪವಿತ್ರಾಆಂಧ್ರಪ್ರದೇಶದಲ್ಲಿರುವ (Andhra Pradesh) ತನ್ನ ತಾಯಿಗೆ ಕರೆ ಮಾಡಿ ಈತ ಇಲ್ಲಿಗೂ ಬಂದಿದ್ದು, ಏನೂ ಮಾಡುತ್ತಾನೋ ಎಂಬ ಭಯವಾಗುತ್ತಿದೆ ಎಂದು ಆತಂಕ ವ್ಯಕ್ತ ಪಡಿಸಿದ್ದಾಳೆ ಎನ್ನಲಾಗಿದೆ. ಇದೇ ವೇಳೆ, ದಿನಕರ್ ಅಲ್ಲಿಗೆ ಬಂದಿದ್ದು, ತಾಯಿಯೊಂದಿಗೆ ಮಾತಾಡುವಂತೆ ದಿನಕರ್‌ಗೆ ಫೋನ್ ನೀಡಿದ್ದಾಳೆ.

ಆಗ ಲೀಲಾ ತಾಯಿ ದಿನಕರ್ ಗೆ ಸರಿಯಾಗಿ ಬೈದಿದ್ದು, ತಕ್ಷಣವೇ ಅಲ್ಲಿಂದ ಹೊರಡುವಂತೆ ತಾಕೀತು ಮಾಡಿದ್ದಾರೆ. ಆದರೆ , ಈ ಭೂಪ ಫೋನ್‌ನಲ್ಲಿ ಮಾತನಾಡುತ್ತಿರಿವಾಗಲೆ ಚಾಕು ಹೊರ ತೆಗೆದಿದ್ದು , ಚಾಕು ನೋಡಿದ ಲೀಲಾ ತಾಯಿ ಜೊತೆಗೆ ತನಗೆ ಭಯವಾಗುತ್ತಿದೆ. ಈತ ತನಗೇನೂ ಮಾಡಿ ಬಿಡುತ್ತಾನೆ ಎಂದು ಹೇಳಿಕೊಂಡು ಮತದುತ್ತಿದ್ದಾಗ ಕರೆ ತುಂಡಾಗಿದೆ ಎಂಬ ವಿಚಾರ ಪೊಲೀಸರ ತನಿಖೆ (Police Investigation) ವೇಳೆ ಬಯಲಾಗಿದೆ.ಲೀಲಾ ಮದುವೆಯಾಗಲು ನಿರಾಕರಿಸಿದ ಬಳಿಕ 16 ಬಾರಿ ಬರ್ಬರವಾಗಿ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.